Asianet Suvarna News Asianet Suvarna News

Bengaluru: ಕರಿಯನ ಅಭಿಮಾನಿಗಳಿಗೆ ಜ್ವರ ಬರುವಂತೆ ಬಾರಿಸಿದ ಬೆಂಗಳೂರು ಪೊಲೀಸ್‌!

ದರ್ಶನ್‌ ಅವರ 'ಕರಿಯಾ' ಚಿತ್ರದ ಮರು ಬಿಡುಗಡೆಯ ವೇಳೆ ಅಭಿಮಾನಿಗಳು ನಡೆಸಿದ ಗಲಾಟೆಯಿಂದಾಗಿ ಪೊಲೀಸರು ಲಾಠಿ ಚಾರ್ಜ್‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಘಟನೆಯಲ್ಲಿ ಕೆಲವರು ಪೊಲೀಸರ ವಶಕ್ಕೆ ಒಳಾಗಿದ್ದಾರೆ.

Bengaluru police beat Darshan Thoogudeepa fans time of Kariya Movie rerelease san
Author
First Published Aug 30, 2024, 9:32 PM IST | Last Updated Aug 30, 2024, 9:32 PM IST

ಬೆಂಗಳೂರು (ಆ.30): ಒಂದೆಡೆ ದರ್ಶನ್‌ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ, ಇದೇ ದೊಡ್ಡ ಸಾಹಸ ಎನ್ನುವಂತೆ ಆತನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ದರ್ಶನ್‌ ಅಭಿನಯದ ಕರಿಯಾ ಚಿತ್ರ ರೀರಿಲೀಸ್‌ ಆಗಿದೆ. ಈ ವೇಳೆ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್​​ ಎದುರು ಅಭಿಮಾನಿಗಳ ದಾಂಧಲೆ ಮಾಡಿದ್ದರು. ಕಾಣೋತನಕ ಕಂಡ ಪೊಲೀಸರು, ಅಭಿಮಾನಿಗಳ ವರ್ತನೆ ಮಿತಿಮೀರುತ್ತಿದ್ದಂತೆ ಜ್ವರ ಬರೋಹಾಗೆ ಲಾಠಿ ಚಾರ್ಜ್‌ ಮಾಡಿದ್ದಾರೆ. ಗಲಾಟೆ ಮಾಡದಂತೆ ದರ್ಶನ್ ಅಭಿಮಾನಿಗಳಿಗೆ​ ಖಾಕಿ ಖಡಕ್‌ ವಾರ್ನಿಂಗ್‌ ನೀಡಿದರೂ, ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಇದ್ದಬದ್ದವರಿಗೆಲ್ಲಾ ಘೋಷಣೆ ಕೂಗಿ,ಕಿರುಚಾಡುತ್ತಿದ್ದ ಫ್ಯಾನ್ಸ್​ ವಿರುದ್ಧ ಪೊಲೀಸರ ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರ ಎಚ್ಚರಿಕೆಗೂ ಬಗ್ಗದೇ ದರ್ಶನ್ ಅಭಿಮಾನಿಗಳ ಹುಚ್ಚಾಟ ಮೆರೆದಿದ್ದರು. ಈ ವೇಳೆ ಪೊಲೀಸರು ಮೈಕ್‌ನಲ್ಲಿ ‘ನಿಮ್ಮಂಥ ಕೆಟ್ಟ ಅಭಿಮಾನಿಗಳಿಂದಲೇ ನಟ ದರ್ಶನ್​ಗೆ ಕೆಟ್ಟ ಹೆಸರು ಬಂದಿದೆ. ನಿಜವಾದ ಅಭಿಮಾನಿಗಳು ಈ ರೀತಿ ವರ್ತಿಸುವುದಿಲ್ಲ. ಹುಚ್ಚಾಟ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಪೊಲೀಸರ ಎಚ್ಚರಿಕೆ ನೀಡಿದ್ದರು.

ಆದರೆ, ಯಾವುದೇ ಎಚ್ಚರಿಕೆ, ಒಳ್ಳೆಯ ಮಾತುಗಳಿಗೂ ಬಗ್ಗದ ಕರಿಯನ ಅಭಿಮಾನಿಗಳಿಗೆ ಬಳಿಕ ಪೊಲೀಸರು ಲಾಠಿರುಚಿ ತೋರಿಸಿದ್ದಾರೆ. ಥಿಯೇಟರ್​ನಲ್ಲಿಯೇ ಕಿರಿಕ್ ಮಾಡ್ತಿದ್ದ ಅಭಿಮಾನಿಯನ್ನೂ ಕೂಡ ಖಾಕಿ ವಶಕ್ಕೆ ಪಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಧಾಭಿಮಾನಿ ಹುಚ್ಚಾಟ ಮೆರೆದಿದ್ದ. ಲಾಠಿ ಚಾರ್ಜ್​​ ನಂತರ ಮಾಧ್ಯಮದ ಎದುರೇ ದರ್ಶನ್‌ ಅಭಿಮಾನಿ ಕ್ಷಮೆ ಕೋರಿದ್ದಾರೆ.‘ದರ್ಶನ್ ಸಿನಿಮಾ ನೋಡೋ ಜೋಶ್​ನಲ್ಲಿ ನಾನು ಮಾತನಾಡಿದೆ’ ಎಂದು ಮಾಧ್ಯಮಗಳಿಗೆ ಕೈಮುಗಿದಿ ದರ್ಶನ್‌ ಅಭಿಮಾನಿ ಕ್ಷಮೆಯಾಚಿಸಿದ್ದಾನೆ.

ಇನ್ನೊಂದಡೆ ಬಳ್ಳಾರಿಯಲ್ಲಿ ನಟ ದರ್ಶನ್​ ಅಂಧಾಭಿಮಾನಿಗಳ ದುರಹಂಕಾರ ಮಿತಿಮೀರಿದೆ. ಕನಕದುರ್ಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಹಾರ ಹಾಕಿ ದುರ್ವರ್ತನೆ ತೋರಿಸಿದ್ದಾರೆ. ದೇವಿ ತಲೆ ಮೇಲೆಯೇ ದರ್ಶನ್ ದುರಹಂಕಾರಿ ಅಭಿಮಾನಿ ಕಾಲಿಟ್ಟಿದ್ದಾನೆ. ದರ್ಶನ್​ಗಾಗಿ ಕನಕದುರ್ಗಮ್ಮ ದೇವತೆ ವಿಗ್ರಹದ ಮೇಲೆ ಕಾಲಿಟ್ಟಿದ್ದಾರೆ. ದೇಗುಲದಲ್ಲಿ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದಿದ್ದ ಫ್ಯಾನ್ಸ್. ಬಳಿಕ ದುರ್ಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಅಭಿಮಾನಿಯೊಬ್ಬ ಹಾರ ಹಾಕಿದ್ದ. ದರ್ಶನ್​ ಅಭಿಮಾನಿಗಳ ವಿರುದ್ಧ ಬಳ್ಳಾರಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
'ಬಾಸ್ ತಪ್ಪು ಮಾಡಿಲ್ಲ.. ಜತೆಗೆ ಇರುವವರು ತಪ್ಪು ಮಾಡಿದ್ದಾರೆ. ಬೇರೆಯವರು ಮಾಡಿದ ತಪ್ಪು ನಟ ದರ್ಶನ್ ಮೇಲೆ ಬಂದಿದೆ. ದರ್ಶನ್ ಗೆ ಶೀಘ್ರದಲ್ಲೇ ಬೇಲ್ ಸಿಗಲಿದೆ ಅನ್ನುವ ವಿಶ್ವಾಸವಿದೆ. ನಮ್ಮ ಬಾಸ್ ತಪ್ಪು ಮಾಡಿಲ್ಲ'ಎಂದು ಅಂಧಾಭಿಮಾನ ತೋರಿದಿದ್ದಾರೆ.

ಜೈಲ್ ದರ್ಬಾರ್​ಗೆ ದರ್ಶನ್ ಕೊಟ್ಟಿದ್ದು 2 ಕೋಟಿ..?

ನಟ ದರ್ಶನ್​ ಬಳ್ಳಾರಿಗೆ ಹೋದರೂ ನಿಲ್ಲದ ಫ್ಯಾನ್ಸ್ ಕ್ರೇಜ್ ಮಾತ್ರ ನಿಲ್ಲುತ್ತಿಲ್ಲ. ರಾತ್ರೋರಾತ್ರಿಯೇ ಬಳ್ಳಾರಿ ಕೈದಿ ನಂ-511 ಟ್ರೆಂಡ್‌ ಆಗಿದೆ. ಬಳ್ಳಾರಿಕೈದಿ 511 ಎಂದು ಅಭಿಮಾನಿಗಳು ಬರೆಸಿಕೊಳ್ಳುತ್ತಿದ್ದಾರೆ. ಆಟೋ ಮೇಲೆ ಕೈದಿ ನಂಬರ್ ಬರೆಸಿ ಅಭಿಮಾನಿ ಹುಚ್ಚಾಟ ಮೆರೆದಿದ್ದಾನೆ. ಪರಪ್ಪನ ಅಗ್ರಹಾರದ ಕೈದಿ ನಂ. 6106  ಟ್ರೆಂಡ್ ಆಗಿತ್ತು. ಬೈಕ್,ಆಟೋ,ಬಟ್ಟೆಗಳ ಮೇಲೆ ಕೈದಿ ನಂಬರ್ ಹಾಕಿಸಿದ್ದರು. ಈಗ ಬೆಳಗಾಗೋದರಲ್ಲೇ ಬಳ್ಳಾರಿ ಕೈದಿ 511 ಟ್ರೆಂಡಿಂಗ್ ಆಗಿದೆ. ಆಟೋ ಹಿಂದೆ ಕೈದಿ ನಂ 511 ಹಾಕಿಸಿ ಅಂಧಾಭಿಮಾನ ತೋರಿದ್ದಾರೆ.

suvarnanews exclusive: ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

Latest Videos
Follow Us:
Download App:
  • android
  • ios