ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವೈದ್ಯನೊಬ್ಬ ಶಂಕತ ಉಗ್ರರಿಗೆ ಅನಧಿಕೃತವಾಗಿ ಮೊಬೈಲ್‌ಗಳನ್ನು ಪೂರೈಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ಖೈದಿಗಳಿಗೆ ನೆರವು ನೀಡುತ್ತಿದ್ದ ಆರೋಪ ಕೇಳಿಬಂದಿದ್ದು, ಜೈಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಲಾಗುತ್ತಿದೆ.

ಬೆಂಗಳೂರು (ಜು.09): ಸಿಲಿಕಾನ್ ಸಿಟಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ವ್ಯವಸ್ಥೆಯೇ ಪ್ರಶ್ನೆಗೊಳಗಾಗುವಂತಹ ಭಾರೀ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಜೈಲಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ. ನಾಗರಾಜ್ ಎಂಬುವವರು ನೂರಾರು ಖೈದಿಗಳಿಗೆ ಹಾಗೂ ಉಗ್ರರಿಗೆ ಅನಧಿಕೃತವಾಗಿ ಮೊಬೈಲ್‌ಗಳನ್ನು ಪೂರೈಕೆ ಮಾಡುತ್ತಿದ್ದ ಪ್ರಕರಣವನ್ನು ಎನ್‌ಐಎ ತನಿಖೆ ಬಹಿರಂಗಪಡಿಸಿದೆ.

ವೈದ್ಯನ ಮುಖವಾಡದ ಹಿಂದೆ ಮೊಬೈಲ್ ಮಾಫಿಯಾ!

ಜೈಲಿನೊಳಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್, ತನ್ನ ಸಹಾಯಕಿ ಪವಿತ್ರನ ಸಹಾಯದಿಂದ ಜೈಲಿಗೆ ಸ್ಕೂಟರ್ ಮುಖಾಂತರ ಮೊಬೈಲ್‌ಗಳನ್ನು ಸಾಗಿಸಿ, ₹10 ಸಾವಿರ ಮೌಲ್ಯದ ಫೋನ್‌ಗಳನ್ನು ₹50 ಸಾವಿರಕ್ಕೆ ಖೈದಿಗಳಿಗೆ ಮಾರಾಟ ಮಾಡುತ್ತಿದ್ದನು. ಈ ಮೊಬೈಲ್‌ಗಳು ನೇರವಾಗಿ ಶಂಕಿತ ಉಗ್ರಗಾಮಿಗಳು, ಡ್ರಗ್ ಪೆಡ್ಲರ್‌ಗಳು ಮತ್ತು ರೌಡಿಶೀಟರ್‌ಗಳ ಕೈಗೆ ತಲುಪುತ್ತಿದ್ದವು ಎಂಬುದು ತನಿಖೆಯ ಮಾಹಿತಿಯಿಂದ ತಿಳಿದುಬಂದಿದೆ.

ಉಗ್ರ ಸಲ್ಮಾನ್ ಬಂಧನದಿಂದ ಬಯಲಾದ ಕತೆ

ಈ ಹಿಂದೆ ಸುಲ್ತಾನ್ ಪಾಳ್ಯ ಹಾಗೂ ಭದ್ರಪ್ಪ ಲೇಔಟ್ ಪ್ರದೇಶದಲ್ಲಿ ಶಂಕಿತ ಉಗ್ರರ ಮನೆ ಮೇಲೆ ಸಿಸಿಬಿ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಗ್ರ ಸಲ್ಮಾನ್ನನ್ನು ಎನ್‌ಐಎ (NIA) ಮೂರು ತಿಂಗಳ ಹಿಂದೆ ಬಂಧಿಸಿತು. ತನಿಖೆಯಲ್ಲಿ ಭಯಾನಕ ಮಾಹಿತಿ ಹೊರಬಿದ್ದಿದ್ದು, ಸಲ್ಮಾನ್‌ನ ಪಲಾಯನಕ್ಕೆ ಎಎಸ್‌ಐ ಚಾನ್ ಪಾಷಾ ನೆರವಾಗಿದ್ದನು. ಜೈಲಿನಿಂದಲೇ ಉಗ್ರ ಟಿ. ನಾಸೀರ್ ಮತ್ತು ಗ್ಯಾಂಗ್ ಸಂಚು ರೂಪಿಸುತ್ತಿದ್ದರೆಂಬ ಮಾಹಿತಿಗಳು ಕೂಡ ಬಹಿರಂಗವಾಗಿವೆ.

ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದನೆಗೆ ನೇರ ನೆರವು?

ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಒಟ್ಟು 100ಕ್ಕೂ ಹೆಚ್ಚು ಖೈದಿಗಳಿಗೆ ಮೊಬೈಲ್ ಪೂರೈಕೆ ಮಾಡಿದ ಡಾ. ನಾಗರಾಜ್ ವಿರುದ್ಧ ಎನ್‌ಐಎ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ವೈದ್ಯಕೀಯ ಸೇವೆಯ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜೈಲಿನೊಳಗೆ ಅಪರಾಧ ಜಾಲವನ್ನು ಬೆಳೆಸಿದ ಈ ವೈದ್ಯನ ವಿರುದ್ಧ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಉಂಟಾಗಿದೆ.

ಸಂವೇದನಾಶೀಲ ಜೈಲು... ಆತಂಕ ಉಂಟುಮಾಡಿದ ಮಾಹಿತಿ!

ರಾಜ್ಯ ಮತ್ತು ದೇಶಕ್ಕೆ ಬೇಕಾಗಿರುವ ಪ್ರಮುಖ ಉಗ್ರರು ಮತ್ತು ಅಪರಾಧಿಗಳನ್ನು ಸೆರೆ ಹಿಡಿದು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಹೀಗಾಗಿ ರಾಜ್ಯದ ಅತ್ಯಂತ ಭದ್ರ ಜೈಲು ಎಂದು ಇದನ್ನು ಪರಿಗಣಿಸಲಾಗಿದೆ. ಆದರೆ, ಇಂತಹ ಜೈಲಿನೊಳಗೆ ವೈದ್ಯಕೀಯ ಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ಈ ಡಾ.ನಾಗರಾಜ್ ನೇರವಾಗಿ ಅಪರಾಧಿಗಳಿಗೆ ದೇಶದ ವಿರುದ್ಧವೇ ಕುಕೃತ್ಯ ನಡೆಸಲು ನೆರವು ನೀಡುತ್ತಿದ್ದಾರೆ ಎಂಬುದು ಭದ್ರತಾ ವ್ಯವಸ್ಥೆಯ ವಿಫಲತೆಗೆ ಸಾಕ್ಷಿಯಾಗಿದೆ ಎಂಬ ಗಂಭೀರ ಪ್ರಶ್ನೆ ಎಬ್ಬಿಸಿದೆ.

ಜೈಲಿನಲ್ಲಿದ್ದುಕೊಂಡೇ ಮೈಂಡ್ ವಾಶ್ ಮಾಡಿದ್ದ ನಾಸೀರ್:

ಎನ್ ಐ ಎ ಅಧಿಕಾರಿಗಳಿಂದ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆರರಿಸಂ ಬಗ್ಗೆ ಮೈಂಡ್ ವಾಶ್ ಮಾಡೋದ್ರಲ್ಲಿ ಉಗ್ರ ನಾಸೀರ್ ಎತ್ತಿದ ಲೈ ಆಗಿದ್ದಾನೆ. ಹಲವು ಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡುತ್ತಿದ್ದನು. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡಿದ್ದ ಭಯೋತ್ಪಾದಕ ನಾಸೀರ್. ದಕ್ಷಿಣ ಭಾರತದಲ್ಲಿ ನಡೆದ ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ. 2008ರ ಸರಣಿ ಬಾಂಬ್ ಸ್ಪೋಟ, ಮಂಗಳೂರು ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಕೇಸ್‌ಗಳಲ್ಲಿದೆ ನಾಸೀರ್ ಕೈವಾಡವಿದೆ ಎಂದು ಎನ್‌ಐಎ ತಿಳಿಸಿದೆ.

ಡಾಕ್ಟರ್ ಕೊಟ್ಟ ಮೊಬೈಲ್‌ಗಳಿಂದ ವಿದ್ವಂಸಕ ಕೃತ್ಯಕ್ಕೆ ಸ್ಕೆಚ್:

ಸ್ಲೀಪರ್ ಸೆಲ್ಸ್ ಗೆ ನೇರ ಕಾಂಟ್ಯಾಕ್ಟ್ ಇರೋ ಉಗ್ರ ನಾಸೀರ್. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಹಾಕಿದ್ದನು. ಜೈಲಿನಲ್ಲಿ ಇದ್ದುಕೊಂಡೇ ಯುವಕರತ ತಂಡವೊಂದು ಕಟ್ಟಿದ್ದನು. ಮರ್ಡರ್ ಕೇಸ್ ನಲ್ಲಿ ಒಳಗಿದ್ದ ಯುವಕರ ಮೈಂಡ್ ವಾಶ್ ಮಾಡಿದ್ದನು. ಜೈಲಿನಲ್ಲಿ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ 6 ಜನ ಯುವಕರ ತಂಡ ರೆಡಿ ಮಾಡಿದ್ದನು. ಆದರೆ, ಇವರು ಜೈಲಿನಿಂದ ಹೊರಗೆ ಬಂದ ನಂತರ 2023ರಲ್ಲಿ ಆರ್ ಟಿ ನಗರ, ಹೆಬ್ಬಾಳದಲ್ಲಿ ಜೀವಂತ ಗ್ರೆನೈಡ್ ಗಳು, ಪಿಸ್ತೂಲ್‌ಗಳು, ಸ್ಫೋಟಕ ವಸ್ತುಗಳ ಸಮೇತ ಸಿಕ್ಕಿಬಿದ್ದಿದ್ದರು. ಈ ಕೇಸಿನಲ್ಲಿ ಸಿಸಿಬಿ ಪೊಲೀಸರು 5 ಜನರನ್ನು ಬಂಧಿಸಿದ್ದರು.

ನಂತರ ಸಿಸಿಬಿ ತನಿಖೆಯಿಂದ ಎನ್‌ಐಎ ಕೇಸ್ ಟೇಕ್ ಓವರ್ ಮಾಡಿತ್ತು. ಕೇಸಿನ ಪ್ರಮುಖ ಆರೋಪಿ ಜುನೈದ್‌ಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ. ದೇ ಕೇಸ್ ಸಂಬಂಧ ತನಿಖೆ ಮುಂದುವರೆಸಿದ್ದ ಎನ್ಐಎ, ಉಗ್ರ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾನೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದೆ. ಜೈಲಿನಲ್ಲಿದ್ದವರ ಮೂಲಕ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿರುವವರನ್ನ ಬಳಸಿ ಸ್ಪೋಟಗೊಳಿಸಲು ಪ್ಲಾನ್ ಮಾಡಿದ್ದನು. ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ ತಂಡವು ದಾಳಿ ನಡೆಸಿದೆ. ಸದ್ಯ ಮೂವರನ್ನ‌ ಬಂಧಿಸಿರುವ ಎನ್ಐಎ, ಬಂಧಿತರ ಬಳಿ ಒಂದಷ್ಟು ಹಣ, ಕಮ್ಯುನಿಕೇಷನ್ ಗೆ ಬಳಸುವ ವಾಕಿಟಾಕಿ ಸೇರಿ ಹಲವು ವಸ್ತುಗಳು ವಶಕ್ಕೆ ಪಡೆದುಕೊಂಡಿದೆ. ಎನ್ಐಎ ಅಧಿಕಾರಿಗಳು ಸದ್ಯ ತನಿಖೆ ಮುಂದುವರೆಸಿದ್ದಾರೆ.

ನಾಪತ್ತೆಯಾಗಿರುವ ಶಂಕಿತ ಉಗ್ರ ಜುನೈದ್ ಅವರ ತಾಯಿ ಅನಿಶಾನ ಪಾತಿಮಾ (Anisha pathima)