Asianet Suvarna News Asianet Suvarna News

ಮಹಾನಗರಗಳಲ್ಲಿ ರಸ್ತೆ ಅಪಘಾತ: ಬೆಂಗಳೂರು ನಂ.4..!

10ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಮಹಾನಗರಗಳಲ್ಲಿನ ಅಪಘಾತಗಳನ್ನು ಆಧರಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು-2022’ರಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Bengaluru No 4th in Road Accidents in Big Cities in India grg
Author
First Published Nov 2, 2023, 4:52 AM IST

ನವದೆಹಲಿ(ನ.02): ಕಳೆದ ವರ್ಷದ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸಿದ ಮಹಾನಗರಗಳ ಪೈಕಿ ಬೆಂಗಳೂರು ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. 2022ರಲ್ಲಿ ಬೆಂಗಳೂರಿನಲ್ಲಿ 3822 ರಸ್ತೆ ಅಪಘಾತ ಸಂಭವಿಸಿ, 772 ಜನರು ಸಾವನ್ನಪ್ಪಿದ್ದಾರೆ.

10ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಮಹಾನಗರಗಳಲ್ಲಿನ ಅಪಘಾತಗಳನ್ನು ಆಧರಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು-2022’ರಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು: ರಸ್ತೆ ವಿಭಜಕ ದಾಟಿ ಎದುರಿಗೆ ಬಂದ ಕಾರಿಗೆ ಗುದ್ದಿದ ಕಾರು, ಓರ್ವ ಸಾವು

ಮಹಾನಗರಗಳ ಪೈಕಿ ಹೆಚ್ಚು ಅಪಘಾತವಾದ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ 5,652 ಅಪಘಾತಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ದೇಶದಲ್ಲಿರುವ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ 50 ಮಹಾನಗರಗಳಲ್ಲಿ 2022ರಲ್ಲಿ ಒಟ್ಟು 76,752 ಅಪಘಾತಗಳು ಸಂಭವಿಸಿದ್ದು, 17,089 ಜನ ಸಾವಿಗೀಡಾಗಿದ್ದು, 69,052 ಜನ ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಸಂಭವಿಸಿರುವ 3822 ರಸ್ತೆ ಅಪಘಾತಗಳಲ್ಲಿ ಒಟ್ಟು 772 ಜನ ಮೃತರಾಗಿದ್ದು, ಮೃತರ ಪಟ್ಟಿಯಲ್ಲಿ ಬೆಂಗಳೂರು ಶೇ.18ರಷ್ಟು ಹೆಚ್ಚಳದೊಂದಿಗೆ ಮಹಾನಗರಗಳ ಪಟ್ಟಿಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನ ಪಡೆದಿದೆ. ಈ ಅಪಘಾತಗಳಲ್ಲಿ ಒಟ್ಟು 3189 ಜನ ಗಾಯಗೊಂಡಿದ್ದು, 6ನೇ ಸ್ಥಾನದಲ್ಲಿದೆ.

ಮಿತಿ ಮೀರಿದ ವೇಗ:

ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಬೆಂಗಳೂರಿನಲ್ಲಿ ಒಟ್ಟು 3528 ಅಪಘಾತಗಳು ಸಂಭವಿಸಿದ್ದು, ದೇಶದಲ್ಲಿ ದೆಹಲಿಯ ನಂತರ 2ನೇ ಸ್ಥಾನ ಪಡೆದಿದೆ. ಅಲ್ಲದೆ ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸಿ ಬೆಂಗಳೂರಿನಲ್ಲಿ 711ಜನ ಮೃತರಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪಾದಚಾರಿಗಳಿಗೆ 1042 ರಸ್ತೆ ಅಪಘಾತ ಉಂಟಾಗಿದ್ದು, 247 ಜನ ಮೃತರಾಗಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುವವರು 42 ಅಪಘಾತ ಮಾಡಿದ್ದು, 8 ಮಂದಿ ಮೃತರಾಗಿದ್ದಾರೆ. ನಾಲ್ಕು ಚಕ್ರ ವಾಹನ ಚಾಲಕರು 578 ಅಪಘಾತ ಮಾಡಿದ್ದು, 51 ಜನ ಮೃತಪಟ್ಟಿದ್ದಾರೆ. ಲಾರಿ ಚಾಲಕರು 69 ಅಪಘಾತ ಮಾಡಿದ್ದು 7 ಜನ ಅಸುನೀಗಿದ್ದಾರೆ.

ಅಮಲಲ್ಲಿ ವಾಹನ ಚಲಾವಣೆ:

ಮದ್ಯ ಮತ್ತು ನಶೆಯ ಅಮಲಿನಲ್ಲಿ ವಾಹನ ಚಲಾಯಿಸಿ 42 ರಸ್ತೆ ಅಪಘಾತ ಉಂಟಾಗಿದ್ದು, 15 ಜನ ಮೃತಪಟ್ಟಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವಾಗ 30 ರಸ್ತೆ ಅಪಘಾತಗಳು ಉಂಟಾಗಿದ್ದು, 3 ಮಂದಿ ಮೃತಪಟ್ಟಿದ್ದಾರೆ. ಸಿಗ್ನಲ್‌ ಜಂಪ್‌ ಮಾಡಲು ಹೋಗಿ 14 ಅಪಘಾತಗಳು ಉಂಟಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ.

ದಸರಾ ಆನೆ ಕೊಂಡೊಯ್ಯುತ್ತಿದ್ದ ಲಾರಿ ಅಪಘಾತ: ಚಾಲಕ ಸಾವು, ಪ್ರಾಣಾಪಾಯದಿಂದ ಪಾರಾದ ಆನೆ

ಸಂಚಾರ ಪೊಲೀಸರು ಹಾಗೂ ಸಿಗ್ನಲ್‌ಗಳು ನಿಯಂತ್ರಿಸದ ಕಡೆ 1401ರಸ್ತೆ ಅಪಘಾತಗಳು ಸಂಭವಿಸಿದ್ದು, ದೇಶದಲ್ಲಿ 4ನೇ ಸ್ಥಾನ ಪಡೆದಿದೆ.ಇದರಲ್ಲಿ 282 ಮಂದಿ ಇಹಲೋಕ ತ್ಯಜಿಸಿದ್ದು, ದೇಶಕ್ಕೆ 2ನೇ ಸ್ಥಾನ ಪಡೆದಿದೆ.

ಅತಿ ಹೆಚ್ಚು ರಸ್ತೆ ಅಪಘಾತವಾದ ಟಾಪ್‌-5 ಮಹಾನಗರಗಳು

ನವದೆಹಲಿ-5652
ಇಂದೋರ್-4680
ಜಬಲ್‌ಪುರ-4046
ಬೆಂಗಳೂರು-3822
ಚೆನ್ನೈ-3452

Follow Us:
Download App:
  • android
  • ios