Asianet Suvarna News Asianet Suvarna News

ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋಗೆ ಸದ್ಯಕ್ಕಿಲ್ಲ ಅನುಮತಿ

ಕಾರ್ಯಸಾಧ್ಯತೆ, ಸಂಪನ್ಮೂಲ ಆಧರಿಸಿ ಪ್ರಸ್ತಾವನೆ ಪರಿಶೀಲನೆ| ನಿರ್ದಿಷ್ಟ ಕಾಲಮಿತಿಯೊಳಗೆ ಅಸ್ತು ಎನ್ನಲಾಗದು: ಕೇಂದ್ರ| ಮೆಟ್ರೋ ರೈಲುಗಳ ಯೋಜನೆಗೆ ಅಂತರ್‌ ಸಚಿವಾಲಯಗಳ ಜೊತೆ ಮಾತುಕತೆ ಮತ್ತು ಅವುಗಳ ಒಪ್ಪಿಗೆ ಪಡೆಯಬೇಕಿದೆ| 

Bengaluru Metro not Currently Allowedgg
Author
Bengaluru, First Published Sep 17, 2020, 7:23 AM IST

ನವದೆಹಲಿ(ಸೆ.17): ಬೆಂಗಳೂರಿನ ಸಿಲ್ಕ್‌ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ನಿರ್ಮಾಣದ ಪ್ರಸ್ತಾವನೆಯು, ಈ ಯೋಜನೆಯ ಕಾರ್ಯಸಾಧ್ಯತೆ ಮತ್ತು ಸಂಪನ್ಮೂಲಗಳ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಈ ಯೋಜನೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಮೋದನೆ ನೀಡಲಾಗದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ಬುಧವಾರ ಮೇಲ್ಮನೆ ಕಲಾಪದಲ್ಲಿ ಕರ್ನಾಟಕ ಮೂಲದ ಹಾಗೂ ಬಿಜೆಪಿ ರಾಜ್ಯಸಭೆ ಸಂಸದ ಕೆ.ಸಿ ರಾಮಮೂರ್ತಿ ಅವರು ಈ ಕುರಿತು ಪ್ರಶ್ನಿಸಿದರು. ಇದಕ್ಕೆ ಲಿಖಿತ ಉತ್ತರ ರೂಪದ ಉತ್ತರ ನೀಡಿದ ಸಚಿವ ಹರ್‌ದೀಪ್‌ ಪುರಿ ಸಿಂಗ್‌, ಸಿಲ್ಕ್‌ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ 58 ಕಿ.ಮೀ. ಉದ್ದದ ಈ ಮೆಟ್ರೋ ರೈಲು ಯೋಜನೆಗೆ ಶೀಘ್ರ ಅನುಮೋದನೆಗಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೋರಿಕೆ ಸಲ್ಲಿಸಿದ್ದಾರೆ. 

ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಒಡಂಬಡಿಕೆ

ಅಲ್ಲದೆ, ಈ ಯೋಜನೆಗೆ 500 ಮಿಲಿಯನ್‌ ಡಾಲರ್‌(ಸುಮಾರು 3600 ಕೋಟಿ ರು.) ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ ಸಾಲ ಮಂಜೂರಾತಿಗೆ ಮುಂದಾಗಿದೆ. ಜೊತೆಗೆ, ಮೆಟ್ರೋ ರೈಲುಗಳ ಯೋಜನೆಗೆ ಅಂತರ್‌ ಸಚಿವಾಲಯಗಳ ಜೊತೆ ಮಾತುಕತೆ ಮತ್ತು ಅವುಗಳ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ, ಈ ಯೋಜನೆಯ ಭವಿಷ್ಯವು ಲಭ್ಯವಿರುವ ಸಂಪನ್ಮೂಲಗಳ ಮೇಲೆ ನಿಂತಿದೆ ಎಂದಿದ್ದಾರೆ.

Follow Us:
Download App:
  • android
  • ios