ಲುಲು ಮಾಲ್‌ನಲ್ಲಿ ಯುವತಿಯ ಹಿಂಭಾಗ ಮುಟ್ಟಿದ್ದ ಕಾಮುಕ ಕೋರ್ಟ್‌ನಲ್ಲಿ ಜಾಮೀನು ಪಡೆದು ಮನೆಗೋದ!
ಬೆಂಗಳೂರಿನ ಲುಲು ಮಾಲ್‌ನಲ್ಲಿ ಯುವತಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದಾನೆ.

ಬೆಂಗಳೂರು (ನ.02): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ಮಾಲ್ ಆಗಿರುವ ಲುಲು ಮಾಲ್‌ನಲ್ಲಿ (Bengaluru Lulu Mall) ಕಳೆದ ನಾಲ್ಕು ದಿನದ ಹಿಂದೆ (ಅ.29ರ ಭಾನುವಾರ ಸಂಜೆ) ಯುವತಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ಪೊಲೀಸರ ಕೈಗೆ ಸಿಗದೇ ಕೋರ್ಟ್ ಮುಂದೆ ಹಾಜರಾಗಿದ್ದಾನೆ. ಅಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದು ಮನೆಗೆ ಹೋಗಿದ್ದಾನೆ.
ಕಳೆದ ಅಕ್ಟೋಬರ್ 29ರ ಭಾನುವಾರ ಸಂಜೆ ವೇಳೆ 62 ವರ್ಷದ ವ್ಯಕ್ತಿ ಅಶ್ವತ್ಥನಾರಾಯಣ ಎನ್ನುವವರು (ನಿವೃತ್ತ ಶಿಕ್ಷಕ) ಬೇಕಂತಲೇ ಯುವತಿಯನ್ನು ಹಿಡಿದುಕೊಂಡು ಆಕೆಯ ದೇಹಕ್ಕೆ ತನ್ನ ದೇಹವನ್ನು ಟಚ್ ಮಾಡಿದ್ದಲ್ಲೇ, ಹಿಂಭಾಗವನ್ನು ಹಿಡಿದುಕೊಂಡು ವಿಕೃತಿಯನ್ನು ಮೆರೆದಿದ್ದರು. ಇದನ್ನು ವಿಡಿಯೋ ಮಾಡಿದ ಯುವಕ ಲುಲು ಮಾಲ್‌ನ ಮ್ಯಾನೇಜರ್‌ಗೆ ಮಾಹಿತಿ ನೀಡಿ ಆತನಿಗಾಗಿ ಹುಡುಕಾಟ ಮಾಡಿದ್ದಾರೆ. ಆದರೆ, ಅಲ್ಲಿ ಎಲ್ಲರ ಕೈಯಿಂದ ತಪ್ಪಿಸಿಕೊಂಡು ಹೋಗಿದ್ದ ವ್ಯಕ್ತಿ ಧರ್ಮದೇಟು ತಿನ್ನುವುದರಿಂದ ಪಾರಾಗಿದ್ದನು.
ಬೆಂಗಳೂರು ಮಾಲ್‌ನಲ್ಲಿ ಲೈಂಗಿಕ ಕಿರುಕುಳ ವಿಡಿಯೋ ವೈರಲ್: ಪೊಲೀಸರ ಕೈಗೂ ಸಿಗದ ಕಾಮುಕ ಎಲ್ಲಿದ್ದಾನೆ?
ಲೈಂಗಿಕ ಕಿರುಕುಳ ನೀಡಿ ಪರಾರಿ ಆಗಿದ್ದ ಕಾಮುಕ: ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿ ವಿಕೃತಿ ಮೆರೆಯುವ ವ್ಯಕ್ತಿಗೆ ಬುದ್ಧಿ ಕಲಿಸಬೇಕೆಂದು ಆತನ ವಿಡಿಯೋ ಮಾಡಿದ್ದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿಯನ್ನು ಬರೆದುಕೊಂಡಿದ್ದನು. ಈ ವಿಡಿಯೋ ವೈರಲ್ ಆಗಿ ಪೊಲೀಸರವರೆಗೂ ತಲುಪಿತ್ತು. ವಿಡಿಯೋ ಪರಿಶೀಲನೆ ಮಾಡಿದ ಮಾಗಡಿ ರಸ್ತೆ ಠಾಣೆಯ ಪೊಲೀಸರು ಲುಲು ಮಾಲ್ ಪರಿಶೀಲನೆ ಮಾಡಿ 2 ದಿನದ ಬಳಿಕ ವ್ಯಕ್ತಿಯ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಿದ್ದರು. ಆತನ ಮನೆಗೆ ಹುಡುಕಿಕೊಂಡು ಹೋದಾಗ ಆತ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಬೇರೆಡೆ ತಪ್ಪಿಸಿಕೊಂಡು ಹೋಗಿದ್ದನು.
ವಕೀಲರೊಂದಿಗೆ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪಡೆದ: ತನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಇರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸುತ್ತಾರೆಂದು ಭಯದಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಅಶ್ವತ್ಥನಾರಾಯಣ ಗುರುವಾರ ಮಧ್ಯಾಹ್ನದ ವೇಳೆ ವಕೀಲರೊಂದಿಗೆ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ. ನಂತರ, ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ, ಆರೋಪಿ ಪೊಲೀಸರಿಂದ ಬಂಧನಕ್ಕೊಳಗಾಗದೇ ಮನೆಗೆ ತೆರಳಿದ್ದಾರೆ.
ಈತನೇ ನೋಡಿ ಲುಲು ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಹಿಂಭಾಗ ಮುಟ್ಟಿದ ಆರೋಪಿ!
ಲುಲು ಮಾಲ್ ನಲ್ಲಿ ಮಹಿಳೆಯರ ಮೇಲೆ ಅನುಚಿತ ವರ್ತನೆ ಪ್ರಕರಣದ ಕುರಿತು ಐಪಿಸಿ ಸೆಕ್ಷನ್ 354 ಎ, 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಅಶ್ಚಥ್ ನಾರಾಯಣ್ ಗಾಗಿ ಹುಡುಕಾಟ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆಮ ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದ ಆರೋಪಿ ಅಶ್ವತ್ಥ ನಾರಾಯಣ್ ಈಗ ಬಂಧನದ ಭೀತಿಯಿಂದ ದೂರವಾಗಿದ್ದಾರೆ. ಇನ್ನು ಆರೋಪಿ ಪರ ಹಿರಿಯ ವಕೀಲ ಕೆ.ಎನ್. ಶಶಿಧರ್ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಯಶಶ್ವಿ ಆಗಿದ್ದಾರೆ.