ಗಾಳಿ ಮಳೆಯಿಂದಾಗಿ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕಾವೇರಿ ಪೈಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಜಲಮಂಡಳಿ ಸಿಬ್ಬಂದಿ ದುರಸ್ತಿ ಸರಿಪಡಿಸಿದ್ದಾರೆ.

ಬೆಂಗಳೂರು (ಮಾ.24): ಬೆಂಗಳೂರಿಗೆ ನೀರು ಸರಬರಾಜು ಮಾಡುವ ನೆಟ್ಕಲ್ ರಿಸರ್ವಿಯರ್‌ ಬಳಿ ಕಾವೇರಿ ಪೈಪ್‌ಲೈನ್‌ನಲ್ಲಿ ರಾತ್ರಿ ಬೀಸಿದ ಗಾಳಿಯಿಂದಾಗಿ ಟನ್‌ಗಟ್ಟಲೆ ಕಳೆ ಸಸ್ಯ ಸಿಕ್ಕಿಕೊಂಡಿತ್ತು. ಅದನ್ನು ಜಲಮಂಡಳಿ ಸಿಬ್ಬಂದಿ ರಾತರೋ ರಾತ್ರಿ ಯುದ್ಧೋಪಾದಿಯಲ್ಲಿ ತೆರೆವುಗೊಳಿಸುವ ಕಾರ್ಯ ಕೈಗೆತ್ತಿಕೊಂಡು ಬೆಂಗಳೂರಿಗೆ 1000 ಎಂ.ಎಲ್‌ಡಿ. ನೀರು ಸರಬರಾಜು ಮಾಡವುದಕ್ಕೆ ಉಂಟಾಗುತ್ತಿದ್ದ ಸಮಸ್ಯೆ ನಿವಾರಿಸಿದ್ದಾರೆ. ಈ ಮೂಲಕ ಬೆಂಗಳೂರು ಜಲಮಂಡಳಿಯಿಂದ ನಗರಕ್ಕೆ ಎದುರಾಗಬಹುದಾಗಿದ್ದ ದೊಡ್ಡ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ. 

ಬೆಂಗಳೂರಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 2017ರಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಶಿವ ಬ್ಯಾಲೆನ್ಸಿಂಗ್ ಜಲಾಶಯವನ್ನು ನೆಟ್ಕಲ್ ಬ್ಯಾಲೆನ್ಸಿಂಗ್ ಜಲಾಶಯದೊಂದಿಗೆ ಜೋಡಿಸಲಾಗಿತ್ತು. ಈ ಶಿಂಷಾ ಮತ್ತು ನೆಟ್ಕಲ್ ಜಲಾಶಯಗಳ ನಡುವೆ ಹಾಕಲಾಗಿರುವ ಪೈಪ್‌ಲೈನ್‌ನಿಂದ ನಗರಕ್ಕೆ ಕಾವೇರಿ ನೀರು ಪೂರೈಕೆಗೆ ಅನುಕೂಲವಾಗಲಿದೆ. ಆದರೆ, ನಿನ್ನೆ ರಾತ್ರಿ ಬೀಸಿದ ಗಾಳಿಯಿಂದಾ ಕಾವೇರಿ ನದಿ ಪಾತ್ರದಲ್ಲಿ ಬೆಳೆದಿದ್ದ ಕಳೆ ಸಸ್ಯವೆಲ್ಲವೂ ನೆಟ್‌ಕಲ್ ಬ್ಯಾಲೆನ್ಸ್ ರಿಸರ್ವಿಯರ್‌ ಬಳಿ ಸೇರ್ಪಡೆಯಾಗಿತ್ತು. ಇಲ್ಲಿನಿಂದ ಶಿಂಷಾ ಹಾಗೂ ಬೆಂಗಳೂರಿಗೂ ನೀರಿನ ಸರಬರಾಜು ಮಾಡುವುದಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. 

ಕಾವೇರಿ ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿರುವ ಜೊಂಡು (ನೀರಿನಲ್ಲಿ ಬೆಳೆಯುವ ಸಸ್ಯಗಳು) ಕಾವೇರಿ ನೀರಿನ ಪೈಪ್‌ಲೈನ್‌ ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ನೀರಿನ ಹರಿವಿನಲ್ಲಿ ತೊಂದರೆ ಎದುರಾಗಿತ್ತು. ನಿನ್ನೆ ರಾತ್ರಿ ಏಕಾಏಕಿ ಬೀಸಿದ ಗಾಳಿಯ ಪರಿಣಾಮ ನೀರಿನ ಕಳೆ ಗಿಡಗಳು ನಾಲೆಯ ಪ್ರವೇಶದ ಹರಿವಿನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿದ್ದ ಪ್ರಮುಖ ನಾಲೆಯಲ್ಲಿ ನೀರಿನ ಹರಿವನ್ನ ಶೇ.50 ರಷ್ಟು ಇಳಿಸಿದ್ದವು. ಇದರ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಜಲಮಂಡಳಿ ಅಧ್ಯಕ್ಷರು ವಿಶೇಷ ತಂಡಕ್ಕೆ ರಿಪೇರಿ ನಡೆಸುವಂತೆ ಸೂಚಿಸಿದ್ದರು. 

ಸಿದ್ದರಾಮಯ್ಯ ಸುಳ್ಳನ್ನು ಸತ್ಯ ಮಾಡುತ್ತಿದ್ದಾರೆ: ಎಚ್‌.ಡಿ.ರೇವಣ್ಣ ಕಿಡಿ

ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವರೆಗೆ ಮಧ್ಯರಾತ್ರಿಯಿಂದಲೇ ಯುದ್ದೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕಳೆಗಳಿಂದ ಆಗಿದ್ದ ನೀರು ಹರಿವಿನ ತಡೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಿಯಾದ ಸಮಯದಲ್ಲಿ ಈ ತೊಂದರೆಯನ್ನು ನಿವಾರಿಸದೇ ಇದ್ದಲ್ಲಿ, ನಗರಕ್ಕೆ 1,000 ಎಂಎಲ್‌ಡಿ ಯಷ್ಟು ನೀರು ಕೊರತೆ ಉಂಟಾಗುತ್ತಿತ್ತು. ಇದನ್ನ ಈಗ 100 ಎಂಎಲ್‌ಡಿ ಗೆ ಇಳಿಸಲಾಗಿದೆ. 100 ಎಂಎಲ್‌ಡಿ ಕೊರತೆಯಿಂದ ನಗರದ ಕೆಲವೇ ಭಾಗದಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. 

ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಸರಬರಾಜ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ವ್ಯತ್ಯಯ ಆಗಿರುವ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು. ಆಕಸ್ಮಿಕವಾಗಿ ಆಗಿರುವ ತಾಂತ್ರಿಕ ತೊಂದರೆಯಿಂದ ಜನರಿಗೆ ಆಗಿರುವ ಅನಾನುಕೂಲಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸುತ್ತದೆ. ರಾತ್ರಿಯಲ್ಲಿ ಯುದ್ದೋಪಾದಿಯ ಕಾರ್ಯಾಚರಣೆ ನಡೆಸುವ ಮೂಲಕ ದೊಡ್ಡ ತೊಂದರೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಜಲಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮಯೋಚಿತ ಕಾರ್ಯಕ್ಕೆ ನಗರದ ಜನತೆಯ ಪರವಾಗಿ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅಭಿನಂದಿಸಿದ್ದಾರೆ.

ಕಾವೇರಿ ನೀರಿನಿಂದ ಕಾರು ತೊಳೆದವನಿಗೆ 5 ಸಾವಿರ ರೂ. ದಂಡ:
ಬೆಂಗಳೂರು (ಮಾ.24):
ಬೆಂಗಳೂರಿನಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡಿದ ಮೂವರಿಗೆ ತಲಾ 5 ಸಾವಿರ ರೂ ದಂಡ ವಿಧಿಸಲಾಗಿದೆ. ನೀರಿನ ಅಭಾವದ ಹಿನ್ನೆಲೆ ಮಿತವಾಗಿ ನೀರು ಬಳಸುವ ಬಗ್ಗೆ ಜಾಗೃತ ಕಾರ್ಯಕ್ರಮಗಳು ನಡೆಯುತ್ತಿದ್ದು, ನೀರಿನ ಅಭಾವದ ಬೆನ್ನಲ್ಲೇ ಕಾರು ವಾಶ್ ಮಾಡುತ್ತಿದ್ದ ಬೆಂಗಳೂರು ಜಲಮಂಡಳಿ ಮೂವರಿಗೆ ದಂಡ ವಿಧಿಸಿದೆ. ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡುತ್ತಿದ್ದ ಮಹಿಳೆಗೆ ₹5,000 ದಂಡ ವಿಧಿಸಿದ್ದು, ಜಲಮಂಡಳಿಯ ಅಧಿಕಾರಿಗಳು ಸ್ಥಳದಲ್ಲೇ ದಂಢ ಕಟ್ಟಿಸಿಕೊಂಡಿದ್ದಾರೆ. 

ಮಾಜಿ ಮೇಯರ್​​​ ಮಗನ ಬರ್ತಡೇ ಪಾರ್ಟಿ: ಜಾಗ ಬಿಡು ಅಂದಿದಕ್ಕೆ ಸ್ನೇಹಿತನನ್ನೇ ಕೊಂದು ಬಿಟ್ಟ!

ಇನ್ನು ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಕೂಡ ಇಬ್ಬರಿಗೆ ದಂಡ ವಿಧಿಸಲಾಗಿದೆ.ಕಾವೇರಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದೆ. ಸೂಚನೆ ಹೊರತಾಗಿಯೂ ಕಾರ್ ವಾಶ್ ಗೆ ಕಾವೇರಿ ನೀರು ಬಳಕೆ ಮಾಡಲಾಗಿದ್ದು, ದಂಡ ಬಿದ್ದಿದೆ.