ಐಟಿ ಇಲಾಖೆ ರಾಜ್ಯ ಸರ್ಕಾರದ್ದಲ್ಲ, ಕೇಂದ್ರದ್ದು; ಬಿಜೆಪಿ ಯಾರ ವಿರುದ್ಧ ಪ್ರತಿಭಟನೆ ಮಾಡ್ತಿದೆ?: ಸಚಿವ ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಐಟಿ ರೈಡ್ ವಿಚಾರಕ್ಕೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಯಾರು ಅಥಾರಿಟಿ? ಯಾರು ಪ್ರೋವ್ ಮಾಡಬೇಕು? ಐಟಿ ಕೇಂದ್ರ ಸರ್ಕಾರದ್ದು, ಐಟಿ ಇಲಾಖೆ ರಾಜ್ಯಸರ್ಕಾರದ್ದಲ್ಲ. ಯಾರ ದುಡ್ಡು ಏನು ಎಂದು ಅವರೇ ಪ್ರೂವ್ ಮಾಡಬೇಕು, ಆಮೇಲೆ ನೋಡಬೇಕಷ್ಟೆ. ಐಟಿ ದಾಳಿ ವೇಳೆ ಸಿಕ್ಕಿರೋದು ಕಾಂಗ್ರೆಸ್ ದುಡ್ಡು ಎಂದು ಬಿಜೆಪಿಯವರು ಹೇಳಿದ್ದಾರೆ. ಇದು ಕೇವಲ ರಾಜಕೀಯವಾದ ಆರೋಪ ಅಷ್ಟೇ ಎಂದರು.
ಬೆಂಗಳೂರು (ಅ.16) : ರಾಜ್ಯದಲ್ಲಿ ಐಟಿ ರೈಡ್ ವಿಚಾರಕ್ಕೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಯಾರು ಅಥಾರಿಟಿ? ಯಾರು ಪ್ರೋವ್ ಮಾಡಬೇಕು? ಐಟಿ ಕೇಂದ್ರ ಸರ್ಕಾರದ್ದು, ಐಟಿ ಇಲಾಖೆ ರಾಜ್ಯಸರ್ಕಾರದ್ದಲ್ಲ. ಯಾರ ದುಡ್ಡು ಏನು ಎಂದು ಅವರೇ ಪ್ರೂವ್ ಮಾಡಬೇಕು, ಆಮೇಲೆ ನೋಡಬೇಕಷ್ಟೆ. ಐಟಿ ದಾಳಿ ವೇಳೆ ಸಿಕ್ಕಿರೋದು ಕಾಂಗ್ರೆಸ್ ದುಡ್ಡು ಎಂದು ಬಿಜೆಪಿಯವರು ಹೇಳಿದ್ದಾರೆ. ಇದು ಕೇವಲ ರಾಜಕೀಯವಾದ ಆರೋಪ ಅಷ್ಟೇ ಎಂದರು.
ಬಿಜೆಪಿ ಯಾವುದೇ ಆಧಾರರಹಿತ ಆರೋಪ ಮಾಡುತ್ತದೆ. ಹಿಂದೆ ಡಿಕೆ ರವಿ ಕೇಸ್ ಏನಾಯ್ತು? ಗಣಪತಿ ಕೇಸ್ ಏನಾಯ್ತು? ಪರೇಶ್ ಮೆಸ್ತಾ ಕೇಸ್ ಏನಾಯ್ತು? ಆ ಕೇಸ್‌ಗಳನ್ನ ಒಂದು ವರ್ಷ ಓಡಿಸಿದ್ರು. ಸಿಬಿಐ ತನಿಖೆ ಆದಮೇಲೆ ವ್ಯತಿರಿಕ್ತವಾದ ರಿಪೋರ್ಟ್ ಬಂತು. ಒಂದೇ ಒಂದು ಕೇಸ್ ನಿಂದ ನಮ್ಮ ಸರ್ಕಾರವೇ ಹೋಯ್ತು. ಪರೇಶ್ ಮೆಸ್ತಾ ಒಂದು ಕೇಸ್‌ಗೆ ನಮ್ಮ ಸರ್ಕಾರವೇ ಬಿದ್ದೋಯ್ತು. ನಂತರ ಗೊತ್ತಾಗಿದ್ದೇನೆಂದರೆ ಅವನು ಬಾವಿಗೆ ಬಿದ್ದು ಸಾವನ್ನಪ್ಪಿದ್ದನೆಂದು. ಈಗ ಬಿಜೆಪಿ ಆರೋಪ ಮಾಡ್ತಿರೋದು ಕೂಡ ಹಾಗೇನೆ ಇದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದುಡ್ಡು ಬಹಳಷ್ಟಿದೆ. ನಮ್ಮ ಕಡೆಯಾದ್ರೆ 10-20ಲಕ್ಷ ಎಕರೆಗೆ ಮಾರಾಟ ಮಾಡ್ತೀವಿ. ಆದರೆ ಬೆಂಗಳೂರಿನಲ್ಲಿ ಹಾಗಲ್ಲ, ಎಕರೆಗೆ 40-50 ಕೋಟಿ ಇದೆ. ಈಗಾಗಲೇ ಮೊದಲ ರೇಡ್ ಆದವರು ನಮ್ಮದೇ ದುಡ್ಡು ಅಂತ ಒಪ್ಕೊಂಡಿದಾರೆ. ಹೀಗಾಗಿ ಆರೋಪ ಬಂದ ತಕ್ಷಣ ಉತ್ತರ ಕೊಡಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಭಾರೀ ಸಂಚಲನ ಮೂಡಿಸಿದ ಸತೀಶ ಜಾರಕಿಹೊಳಿ ನಡೆ ; 20ಕ್ಕೂ ಅಧಿಕ ಶಾಸಕರನ್ನು ಒಟ್ಟುಗೂಡಿಸಿ ಹೊರಟಿದ್ದು ಎಲ್ಲಿಗೆ?
ಸಿಎಂ ಸಿದ್ದರಾಮಯ್ಯ ವಿರುದ್ಧ ಕಲೆಕ್ಷನ್ ಮಾಸ್ಟರ್ ಎಂಬ ಪೋಸ್ಟರ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಆಗ ಪೋಸ್ಟರ್ ನಾವು ಮಾಡಿದ್ದೆವು, ಇವಾಗ ಅವರೂ ಮಾಡಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಈಗ ಅವರು ವಿಪಕ್ಷದಲ್ಲಿ ಇದ್ದಾರೆ ಮಾಡಿದ್ದಾರೆ, ಸಹಜ ಅಷ್ಟೆ. ಆ ದುಡ್ಡು ಯಾರದ್ದು ಅಂತ ಸಾಬೀತಾಗುವ ತನಕ ಏನೂ ಹೇಳೋಕಾಗಲ್ಲ. ಇಡಿ ಕೂಡ ಇದರಲ್ಲಿ ತನಿಖೆ ಮಾಡಬಹುದು. ಮಂತ್ರಿಗಳಿಗೆ ಹಣ ಸಂಗ್ರಹ ಮಾಡಿ ಅಂತ ಡೈರಕ್ಷನ್ ಇದೆ ಎಂದೂ ಬಿಜೆಪಿ ಹೇಳ್ತಿದ್ದಾರೆ. ಆದರೆ ಕಲೆಕ್ಷನ್ ಮಾಡಿ ಅಂತಾ ಯಾವುದೇ ಡೈರೆಕ್ಷನ್ ನಮಗೆ ಕೊಟ್ಟಿಲ್ಲ . ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ತನಿಖೆ ಸಾಬೀತು ಆಗಲಿ ಆಮೇಲೆ ಗೊತ್ತಾಗುತ್ತಲ್ಲ. ಐಟಿ ದಾಳಿಗೆ ಒಳಗಾದವರಿಗೂ, ಕಾಂಗ್ರೆಸ್ ಗೂ ನೇರ ಸಂಪರ್ಕ ಇಲ್ಲ. ಸಿಕ್ಕಿಬಿದ್ದವರು ಮಂತ್ರಿಯೂ ಅಲ್ಲ,, ಶಾಸಕರೂ ಅಲ್ಲ. ಕೆಸಿ ವೇಣುಗೋಪಾಲ ಅವರು ಮಂಡಳಿ, ಬೋರ್ಡ್ ಕಾರ್ಪೊರೇಷನ್ ಆಯ್ಕೆ ಕುರಿತು ಅವರು ಬಂದಿದ್ದು. ಅದರ ಬಗ್ಗೆ ಸಭೆ ಇತ್ತು ಹಾಗಾಗಿ ಬಂದಿದ್ದಾರೆ ಶಾಸಕರ ಜೊತೆ ಕಾರ್ಯಕರ್ತರನ್ನೂ ಆಯ್ಕೆ ಮಾಡಿ ಅಂತ ಹೇಳಿದ್ದೇವೆ, ನೋಡೋಣ ಎಂದರು.
ಐಟಿ ರೇಡ್ ವೇಳೆ ಸಿಕ್ಕ ಹಣ ಕಾಂಗ್ರೆಸ್ಸಿನದು ಅನ್ನೋಕೆ ಏನಿದೆ ಸಾಕ್ಷ್ಯ? : ಜಗದೀಶ್ ಶೆಟ್ಟರ್