ಐಟಿ ರೇಡ್‌ಗಳಿಗೆಲ್ಲ ನಾವು ಬಗ್ಗಲ್ಲ: ಬಿಜೆಪಿ ಜೆಡಿಎಸ್ ನಾಯಕರ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ 42ಕೋಟಿ ರೂ. ಹಣ ಪತ್ತೆಯಾಗಿದೆ. ಈ ಹಣ ಕಾಂಗ್ರೆಸ್‌ನವರ ಕಮಿಷನ್ ಹಣ ಎಂದು ಆರೋಪಿಸುತ್ತಿರುವುದು ಹಾಸ್ಯಾಸ್ಪದವಾಗಿ ಎಂದು ಎಚ್‌ಡಿಕೆ, ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

Bengaluru IT Raid issue minister Priyank kharge outraged agains bjp jds leaders at bengaluru rav

ಬೆಂಗಳೂರು (ಅ.14): ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ 42ಕೋಟಿ ರೂ. ಹಣ ಪತ್ತೆಯಾಗಿದೆ. ಈ ಹಣ ಕಾಂಗ್ರೆಸ್‌ನವರ ಕಮಿಷನ್ ಹಣ ಎಂದು ಆರೋಪಿಸುತ್ತಿರುವುದು ಹಾಸ್ಯಾಸ್ಪದವಾಗಿ ಎಂದು ಎಚ್‌ಡಿಕೆ, ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಗುತ್ತಿಗೆದಾರನ ಮೇಲೆ ಐಟಿ ರೈಡ್ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲೇ ಇದೆ, ತನಿಖೆ ಮಾಡಲಿ. ಚೈತ್ರಾ ಕುಂದಾಪುರ ಕೇಸ್‌ನಲ್ಲಿ ಹಣ ವರ್ಗಾವಣೆ ನಡೆದಿತ್ತಲ್ಲಾ ಆಗ ಐಟಿ ರೇಡ್ ಯಾಕ್ ಆಗ್ಲಿಲ್ಲ. ಈಗ ರಾಜಕೀಯ ಪ್ರೇರಿತವಾಗಿ ರೇಡ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್‌ ಹಣ: ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ

ಉಪ್ಪು ತಿಂದೋರು ನೀರು ಕುಡಿಯಲೇಬೇಕು:

ಐಟಿ ರೇಡ್ ವೇಳೆ ಗುತ್ತಿಗೆದಾರನ ಮನೆಯಲ್ಲಿ ಹಣ ಪತ್ತೆಯಾಗಿದ್ದರೆ ತನಿಖೆಯಾಗಲಿ, ಉಪ್ಪು ತಿಂದೋರು ನೀರು ಕುಡಿಯಲೇಬೇಕು. ಬಿಜೆಪಿಯವರ ಮೇಲೆ ಬಾಸ್‌ಗಳಿದ್ದಾರಲ್ಲಾ‌‌. ಹೋಗಿ ಸಾಕ್ಷಿ ಕೊಡಲಿ ಎಂದು ಸವಾಲು ಹಾಕಿದರು.

ಎಚ್‌ಡಿಕೆ ವಿರುದ್ಧ ಕಿಡಿ:

ಡಿಕೆ ಶಿವಕುಮಾರ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಚ್‌ಡಿ ಕುಮಾರಸ್ವಾಮಿ ಬಿಜೆಪಿ ಪಕ್ಷದಲ್ಲಿ ವಿಲೀನ ಆಗಿಬಿಟ್ಟಿದ್ದಾರೆ. ಡೈರೆಕ್ಟ್ ಮೋದಿ, ಅಮಿತ್ ಶಾ ಮೀಟ್ ಮಾಡ್ತಾರೆ. ಡೈರಿ, ಪೆನ್ ಡ್ರೈವ್ ಎಲ್ಲಾ ಕೊಡಿ ಅವರಿಗೆ ಯಾರು ತಡೆದರು. ಬಿಜೆಪಿಯವರು ವಿಪಕ್ಷದಲ್ಲಿರೋರನ್ನ ಟಾರ್ಗೆಟ್ ಮಾಡೋ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ದೂರಿದರು.

ಐಟಿ, ಇಡಿ ರೇಡ್‌ಗೆ ನಾವು ಬಗ್ಗಲ್ಲ:

ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡ್ತಿದ್ದಾರೆ. ಹಾಗಾದರೆ ಎಷ್ಟು ಜನ ಬಿಜೆಪಿಯವರ ಮೇಲೆ ರೇಡ್ ಆಗಿದೆ ಎಂದು ಪ್ರಶ್ನಿಸಿದ ಅವರು, ಅದಾನಿ ಮೇಲೆ ಯಾಕೆ ರೇಡ್ ಆಗುತ್ತಿಲ್ಲ? ಕೇಳಿ ನೋಡಿ ಯಾಕೆ ಆಗ್ತಿಲ್ಲ? ಐಟಿ, ಇಡಿ ರೇಡ್‌ಗಳಿಗೆಲ್ಲ ನಾವು ಬಗ್ಗೋರಲ್ಲ, ಜಗ್ಗೋರಲ್ಲ. ಕೇವಲ ಗಾಳಿಯಲ್ಲಿ ಗುಂಡು ಹಾರಿಸೋದಕ್ಕಿಂತ ಸಾಕ್ಷಿ ಕೊಡಿ. ಅಮಿತ್ ಶಾ ವಿಪಕ್ಷ ನಾಯಕನ ಆಯ್ಕೆಗಂತೂ ಕೊಡಲ್ಲ, ಇದಕ್ಕೂ  ಅಪಾಯಿಂಟ್ಮೆಂಟ್ ಕೊಡಲ್ಲ ಎಂದು ವ್ಯಂಗ್ಯ ಮಾಡಿದ ಪ್ರಿಯಾಂಕ್ ಖರ್ಗೆ.

ಬಿಜೆಪಿ ಮನೆ ಒಂದು, ನೂರು ಬಾಗಿಲು:

ಬಿಜೆಪಿ ಒಡೆದುಹೋದ ಮನೆಯಾಗಿದೆ. ಇಲ್ಲಿ ಯಾರು ಲೀಡರ್ ಅಂತಾನೇ ಗೊತ್ತಾಗ್ತಾ ಇಲ್ಲ. ಮನೆ ಒಂದು, ಬಾಗಿಲು ನೂರಾಗಿವೆ. ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳೋದನ್ನ ಬಿಟ್ರೆ, ಕೇಂದ್ರ ಬಿಜೆಪಿಯವರಿಗೆ ಬೇರೆ ಏನಾದ್ರೂ ಬರುತ್ತಾ? ಯಾವುದಾದ್ರೂ ಹತ್ತು ಯೋಜನೆಗಳನ್ನ ಹೇಳಲಿ ನೋಡೋಣ. ಸ್ಟೇಟ್ ಲೀಡರ್‌ಶಿಪ್ಟ್‌ಗೆ ಬೆನ್ನೆಲುಬೇ ಇಲ್ಲ. ಸದಾನಂದಗೌಡ್ರೇ ಹೇಳಿದ್ದಾರೆ. ಅವರು ಕೇಂದ್ರಸಚಿವರು ಆಗಿದ್ರು. ಇಂಥ ಬಿಜೆಪಿ ಜತೆಗೆ ಜೆಡಿಎಸ್ ಜತೆಗೆ ಮೈತ್ರಿ ಆಗುತ್ತೆ, ಅಲ್ಲಿ ಒಬ್ಬ ಲೀಡರ್ ಆದ್ರೂ ಇದ್ರೇನ್ರೀ. ಜನತಾದಳ ಈಗ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ ಎಂದು ವ್ಯಂಗ್ಯ ಮಾಡಿದರು.

ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್‌ ಹಣ: ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ

ದಾಖಲೆ ಕೊಡಿ ಸ್ವಾಮಿ:

ಕಮಿಷನ್, ಕಲೆಕ್ಷನ್ ಗೆಲ್ಲಾ ದಾಖಲೆ ಕೊಡಿ ಸರ್. ನಾವು ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ದಾಖಲೆ ಇಟ್ಟೇ 40% ಕಮಿಷನ್ ಆರೋಪ‌ ಮಾಡಿದ್ದು. ಇವರು ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಯಾರದೋ ಮನೆಯಲ್ಲಿ ಸಿಕ್ಕ ಹಣ ಕಾಂಗ್ರೆಸ್‌ನವರದು ಅಂತಾ ಹೇಳ್ತಾರೆ. ಎಲ್ಲಿದೆ ಸ್ವಾಮಿ ಸಾಕ್ಷಿ? ಇನ್ನು ಸರ್ಕಾರ ಬಿಳಿಸಿಬಿಡ್ತಿವಿ ಅಂತಾ ಜೇಬಲ್ಲಿ ಪೆನ್‌ಡ್ರೈವ್ ಇದೆ ಅಂತಾ ಹೇಳ್ತಿದ್ರಲ್ಲ, ಎಲ್ಲೋಯ್ತು ಸಾರ್ ಪೆನ್‌ಡ್ರೈವ್? ಸರ್ಕಾರ ಬೀಳುತ್ತೆ, ಹೆಚ್ ಡಿಕೆ ಸಿಎಂ ಆಗ್ತಾರೆ ಅಂತಿದ್ರು. ಅವರ ಸರ್ಕಾರನೇ ಉಳಿಸಿಕೊಳ್ಳೋಕೆ ಆಗಲಿಲ್ಲ. ನಮ್ಮ ಸರ್ಕಾರ ಎಲ್ಲಿ ಬೀಳಿಸ್ತಾರೆ. ಅವರಿಗೊಬ್ಬರಿಗೇ ಬರುತ್ತಾ ರಾಜಕೀಯ ಮಾಡೋಕೆ? ಹೆಚ್ ಡಿಕೆ ಆಲ್ ಮೋಸ್ಟ್ ವಿಪಕ್ಷ ನಾಯಕ ಆಗಿಬಿಟ್ಟಿದ್ದಾರೆ, ಅದಕ್ಕೆ ಮಾತಾಡ್ತಿದ್ದಾರೆ ನಮಗೆ ರಾಜಕೀಯ ಗೊತ್ತಿಲ್ಲವ? ಸರ್ಕಾರ ಬೀಳಿಸಿ ನೋಡಲಿ. ನಮಗೆ ಆಪರೇಷನ್ ಹಸ್ತ ಅವಶ್ಯಕತೆನೇ ಇಲ್ಲ. ಅವರ ಪಕ್ಷದಲ್ಲಿ ಬೇಸತ್ತು ಅವ್ರೇ ಬಿಟ್ಟು ಬರ್ತಾ ಇದ್ದಾರೆ. ಸರ್ಕಾರ ಬೀಳಿಸಲು ಸರ್ಕಸ್ ಮಾಡ್ತಿರಬಹುದು. ತೆಲಂಗಾಣದಲ್ಲಿ ಬಿಜೆಪಿಗೆ ಅಡ್ರೆಸ್ಸೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಇಲ್ಲೂ ಕೂಡ ಬಿಜೆಪಿಗೆ ಅದೇ ಸ್ಥಿತಿ ಬರುತ್ತೆ. ಘಟಾನುಘಟಿ ಲೀಡರ್ ಗಳು ಮಾತಾಡಬೇಕಾದ್ರೆ ತೂಕ ಇರಬೇಕು. ಹುಡುಗರ ರೀತಿ ಮಾತಾಡಬಾರದು ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios