ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬಂಧನ; ಪ್ರತಿಭಟನೆಗೆ ಕರೆ ನೀಡಿದ ಬೆಂಗಳೂರು ಇಸ್ಕಾನ್

ಬಾಂಗ್ಲಾ ಸರ್ಕಾರ ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿರುವುದನ್ನು ವಿರೋಧಿಸಿ ಬೆಂಗಳೂರು ಇಸ್ಕಾನ್ ಪ್ರತಿಭಟನೆಗೆ ಕರೆ ನೀಡಿದೆ.

Bengaluru ISKCON press released about protest against arrest of monk Chinmoy Krishna Das Prabhu in Bangladesh rav

ಬೆಂಗಳೂರು (ನ.30): ಬಾಂಗ್ಲಾ ಸರ್ಕಾರ ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿರುವುದನ್ನು ವಿರೋಧಿಸಿ ಬೆಂಗಳೂರು ಇಸ್ಕಾನ್ ಪ್ರತಿಭಟನೆಗೆ ಕರೆ ನೀಡಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಇಸ್ಕಾನ್, ಬಾಂಗ್ಲಾದೇಶದಲ್ಲಿ ಸನಾತನ ಧರ್ಮ ಹಾಗೂ ಅದರ ಪ್ರಚಾರಕರ ಸ್ವಾತಂತ್ರ್ಯಕ್ಕಾಗಿ ಬಲವಾಗಿ ಒತ್ತಾಯಿಸುತ್ತೇವೆ. ದುರದೃಷ್ಟವಶಾತ್ ಈ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕೆಲಸ ಆಗುತ್ತಿದೆ. ಸನಾತನ ಸಮುದಾಯವನ್ನು ಧಾರ್ಮಿಕ ಮತಾಂಧರ ಹುಚ್ಚಾಟಕ್ಕೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಶೋಷಣೆ ಇಲ್ಲದೇ, ಭಯವಿಲ್ಲದೆ ನಮ್ಮ ಧರ್ಮ ಮತ್ತು ತತ್ವಗಳನ್ನು ಆಚರಿಸಲು ಭದ್ರತೆ ಮತ್ತು ಸ್ಥಳವನ್ನು ಒದಗಿಸಬೇಕು. ಇದಕ್ಕಾಗಿ ನಾವು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದಿದೆ.

ಬಾಂಗ್ಲಾದ ಉಚ್ಚಾಟಿತ ನಾಯಕಿ ಭಾರತಕ್ಕೆ ಬಂದು 100 ದಿನ: ಶೇಕ್‌ ಹಸೀನಾ ವಾಸ ಎಲ್ಲಿ

ದೇಶದ್ರೋಹದ ಆರೋಪ ಆಧಾರರಹಿತ:

ಇಸ್ಕಾನ್ ಅನ್ನು ಮೂಲಭೂತವಾದಿ ಸಂಘಟನೆ ಎಂದು ಹೇಳುತ್ತಿರುವುದು ಸಂಸ್ಥೆಯನ್ನ ಮೂಲೆಗುಂಪು ಮಾಡುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ. ಆಕ್ರಮಣಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ನಮ್ಮ ಭಕ್ತರೊಂದಿಗೆ ಒಗ್ಗಟ್ಟಿನಿಂದ ನಿಲ್ಲುಲು ಕರೆ ನೀಡುತ್ತೇವೆ. ಈ ದುಷ್ಕರ್ಮಿ ಮತಾಂಧರ ವಿರುದ್ಧ ನಾವು ಧ್ವನಿ ಎತ್ತೋಣ. ಅನ್ಯಾಯದ ವಿರುದ್ಧ ಹೋರಾಡಲು ಬಲವಾದ ಬೆಂಬಲ ವ್ಯವಸ್ಥೆ ನಿರ್ಮಿಸೋಣ. ಅದಕ್ಕಾಗಿ ಇಸ್ಕಾನ್ ಬೆಂಗಳೂರು ಮತ್ತು ಅದರ ಸಹಯೋಗಿ ಸಂಸ್ಥೆಗಳು ಪ್ರತಿಭಟನೆ ಹಮ್ಮಿಕೊಂಡಿದೆ. ಡಿಸೆಂಬರ್ 1 ರಂದು ಮಧ್ಯಾಹ್ನ 12 ಗಂಟೆಗೆ ರಾಜಾಜಿನಗರದ ಇಸ್ಕಾನ್‌ನಲ್ಲಿ‌ ಪ್ರತಿಭಟನೆ ನಡೆಸಲಿದ್ದೇವೆ. ಧಾರ್ಮಿಕ ಮೂಲಭೂತವಾದದಿಂದ ನಮ್ಮ ಭಕ್ತರನ್ನು ರಕ್ಷಿಸಲು ಪ್ರಾರ್ಥಿಸೋಣ ಎಂದು ಇಸ್ಕಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

ಬಾಂಗ್ಲಾದೇಶದ ಯೂನಸ್ ಸರ್ಕಾರ ಬಂದ ಬಳಿಕ ಹಿಂದೂಗಳ ಮೇಲೆ ನಡೆದ ಸತತ ದಾಳಿ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿತ್ತು. ಹಿಂದೂಗಳ ಸಂಘಟಿಸಿ ಪ್ರತಿಭಟಿಸಿದ ಆರೋಪದಡಿ ಬಾಂಗ್ಲಾದೇಶದ ಇಸ್ಕಾನ್ ಸ್ವಾಮಿಜಿ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ. ಕೃಷ್ಣ ದಾಸ್  ಬಂಧನ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನುವ ಮಾಹಿತಿ ಇದೆ. ಅದಕ್ಕೆ ಸಂಬಂಧಿಸಿದಂತೆ ಸನ್ಯಾಸಿ ಧರಿಸಿರುವ ಖಾವಿ ಬಟ್ಟೆಯ ಮೇಲೆ ಬೂಟುಗಾಲಿನಿಂದ ಒದ್ದ ಗುರುತು ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲದೆ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದೆ.

Latest Videos
Follow Us:
Download App:
  • android
  • ios