ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ವಿದ್ಯುತ್ ಮತ್ತು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸೆ. 13 ಮತ್ತು 14 ರಂದು ವಿದ್ಯುತ್ ಸ್ಥಗಿತದ ಜೊತೆಗೆ ಸೆ. 15, 16 ಮತ್ತು 17 ರಂದು ಕಾವೇರಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಬೆಂಗಳೂರು (ಸೆ.13): ವಾರಾಂತ್ಯದಲ್ಲಿ ಬೆಂಗಳೂರಿನ ನಿವಾಸಿಗಳಿಗೆ ಡಬಲ್ ಶಾಕ್! ಕಾವೇರಿ ನೀರು ಸರಬರಾಜು ಸ್ಥಗಿತ ಮತ್ತು ವಿದ್ಯುತ್ ವ್ಯತ್ಯಯದಿಂದ ನಗರ ಜನರು ತೊಂದರೆಗೆ ಒಳಗಾಗಲಿದ್ದಾರೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಸಂಸ್ಥಾನ (KPTCL) ತುರ್ತು ನಿರ್ವಹಣಾ ಕಾರ್ಯಗಳಿಗಾಗಿ ಇಂದು (ಸೆ.13) ಮತ್ತು ನಾಳೆ (ಸೆ.14) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯನಿರ್ವಹಣೆಯಿಂದಾಗಿ ಇಂದು ಹಾಗೂ ನಾಳೆ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಇದರಿಂದ ಮಾರತಹಳ್ಳಿ, ದೊಡ್ಡನೆಕುಂದಿ, ಇಸ್ರೋ ಕ್ಯಾಂಪಸ್, ಬಾಗ್‌ಮನೆ ಟೆಕ್ ಪಾರ್ಕ್, ಜಿಟಿಆರ್‌ಐ, ಡಬ್ಲ್ಯುಟಿಸಿ ಇಂದಿರಾನಗರ, ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1-2ನೇ ಹಂತ, 80 ಅಡಿ ರಸ್ತೆ, ಸಿಎಂಎಚ್ ರಸ್ತೆ, ಜೀವನ್‌ಭೀಮನಗರ, ಗೀತಾಂಜಲಿ ಲೇಔಟ್, ಬಿಡಿಎ ಲೇಔಟ್, ಎಲ್‌ಐಸಿ ಕಾಲೋನಿ, ತಿಪ್ಪಸಂದ್ರ, ರಮೇಶ್‌ನಗರ, ಟಾಟಾ ಹೌಸಿಂಗ್, ಬಿಇಎಂಎಲ್, ಕಾಡಾ ಹೌಸಿಂಗ್, ಮಲ್ಲೇಶ್‌ಪಾಲ್, ಎಡಿಎ ಲೇಔಟ್, ಬಸವನಗರ, ಅನ್ನಸಂದ್ರಪಾಳ್ಯ, ವಿಭೂತಿಪುರ, ಜೈನ್ ಹೈಟ್ಸ್, ವಿಶ್ವಜಿತ್ ಲೇಔಟ್, ಆದರ್ಶ ವಿಲ್ಲಾ, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ಏರ್‌ಪೋರ್ಟ್ ರಸ್ತೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಡಚಣೆ ಉಂಟಾಗಲಿದೆ.
3ದಿನ ಬೆಂಗಳೂರಿನಲ್ಲಿ ಕಾವೇರಿ ನೀರು ಸಿಗಲ್ಲ
ವಿದ್ಯುತ್ ವ್ಯತ್ಯಯ ಜೊತೆಯಲ್ಲೇ ಇನ್ನು ವಾರದ ಆರಂಭದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಕಾವೇರಿ ನೀರು ಸ್ಥಗಿತವಾಗಲಿದೆ. ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸೆಪ್ಟೆಂಬರ್
ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಸೆ. 15, 16 ಮತ್ತು 17 ರಂದು ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಒಟ್ಟು 5 ಹಂತಗಳಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗಲಿದೆ. ಹೀಗಾಗಿ ಸಾರ್ವಜನಿಕರು ಮುಂಜಾಗ್ರತವಾಗಿ ನೀರನ್ನು ಸಂಗ್ರಹಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.
