Asianet Suvarna News Asianet Suvarna News

ವಿವಾದಕ್ಕೆ ನಾಂದಿ ಹಾಡಿದ ಬೆಂಗಳೂರು ಮಹಿಳಾ ಉದ್ಯಮಿಯ "ಬ್ರಾಹ್ಮಣ ಜೀನ್‌" ಪೋಸ್ಟ್‌! ಅಂತದ್ದೇನಿದೆ?

ಬೆಂಗಳೂರಿನ ಮಹಿಳಾ ಉದ್ಯಮಿ ಆರಾಧನಾ ತೀವಾರಿ ಅವರು ಜಾತಿ ಆಧಾರಿತ ಮೀಸಲಾತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ. 

Bengaluru-based entrepreneur   Anuradha Tiwari Brahmin genes  in controversial post gow
Author
First Published Aug 25, 2024, 6:34 PM IST | Last Updated Aug 25, 2024, 6:38 PM IST

ಬೆಂಗಳೂರು (ಆ.25): ಬೆಂಗಳೂರಿನ ಮಹಿಳಾ ಉದ್ಯಮಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಪೋಸ್ಟ್  ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಆರಾಧನಾ ತೀವಾರಿ ಎಂಬುವವರು ಜಾತಿ ಆಧಾರಿತ ಮೀಸಲಾತಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮತ್ತೊಂದು ಪೋಸ್ಟ್ ನಲ್ಲಿ ಸ್ನಾಯುಗಳನ್ನು ಪ್ರದರ್ಶಿಸುವ ಅವರ ಚಿತ್ರ ಮತ್ತು ಅದರ ಮೇಲೆ ನೀಡಲಾದ ಶೀರ್ಷಿಕೆಯು ಇಂಟರ್ನೆಟ್‌ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಅವರು ತಮ್ಮ ಬೈಸೆಪ್ಸ್‌ಗಳನ್ನು ತೋರಿಸುವ ಭಂಗಿಯನ್ನು ನೀಡಿದ್ದಾರೆ. ಅವರು ಕುಸ್ತಿಪಟುಗಳಂತೆ ತಮ್ಮ ತೋಳುಗಳನ್ನು ತೋರಿಸುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಆರೋಗ್ಯಕರ ಪಾನೀಯವನ್ನು ಹಿಡಿದಿರುವುದನ್ನು ಕಾಣಬಹುದು. ಈ ಪೋಸ್ಟ್ ಅನ್ನು 5.6 ಮಿಲಿಯನ್ ಜನ ನೋಡಿದ್ದಾರೆ. 4 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ.

 ಸ್ಯಾಂಡಲ್‌ವುಡ್‌ ಕಲಾವಿದರ ಸಂಘಕ್ಕೆ ಸಂಕಷ್ಟ: 16 ವರ್ಷಗಳ ನಿರ್ಲಕ್ಷ್ಯಕ್ಕೆ ಸರ್ಕಾರದಿಂದ ನೋಟಿಸ್

ಆರಾಧನಾ ತೀವಾರಿ ಅವರ ಶೀರ್ಷಿಕೆಯಿಂದ ಹುಟ್ಟಿದ ಚರ್ಚೆ:
ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಜಾತಿ ಆಧಾರಿತ ಮೀಸಲಾತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆಂಗಳೂರಿನ ಮಹಿಳಾ ಉದ್ಯಮಿ ಆರಾಧನಾ ತೀವಾರಿ ವಿವಾದಾತ್ಮಕ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು “ಬ್ರಾಹ್ಮಣ ಜೀನ್” ಎಂದು ಶೀರ್ಷಿಕೆ ನೀಡಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ತಮ್ಮ ಬಯೋದಲ್ಲಿ ಅನುರಾಧ ತೀವಾರಿ ಅವರು “ಒಂದು ಕುಟುಂಬ, ಒಂದು ಮೀಸಲಾತಿ” ಎಂಬ ಘೋಷಣೆಯನ್ನು ನಂಬುತ್ತೇನೆ ಎಂದು ಬರೆಕೊಂಡಿದ್ದಾರೆ. ಆದರೆ ಈಗ ತೋಳುಗಳನ್ನು ತೋರಿಸುತ್ತಾ ಬ್ರಾಹ್ಮಣ ಜೀನ್ ಎಂದು ಹೇಳಿಕೊಳ್ಳುವ ಮೂಲಕ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. 

ನಟೋರಿಯಸ್‌ ರೌಡಿ ಜತೆ ವಿಗ್‌ ಇಲ್ಲದ ದರ್ಶನ್‌ ಜೈಲಲ್ಲಿ ಧಮ್ ಹೊಡೆಯೋ ಫೋಟೋ ಲೀಕ್‌ ಆಗಿದ್ದೇಗೆ?

ಮೀಸಲಾತಿ ವಿಷಯದ ಕುರಿತು CEO ಪ್ರಶ್ನೆ
ಆರಾಧನಾ ತೀವಾರಿ ಅವರು ಮೊದಲೇ ಒಂದು ಪೋಸ್ಟ್‌ನಲ್ಲಿ ಮೀಸಲಾತಿ ವ್ಯವಸ್ಥೆಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದರು. 95% ಅಂಕಗಳನ್ನು ಗಳಿಸಿದ ಅವರು ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ, ಆದರೆ 60% ಅಂಕಗಳನ್ನು ಗಳಿಸಿದ ಅವರ ಸಹಪಾಠಿಗೆ ಪ್ರವೇಶ ಸಿಕ್ಕಿತು ಎಂದು ಅದರಲ್ಲಿ ಹೇಳಲಾಗಿದೆ. ಆರಾಧನಾ ಅವರು ಆಗಸ್ಟ್ 2022 ರ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ, "ನಾನು ಸಾಮಾನ್ಯ ವರ್ಗದ ವಿದ್ಯಾರ್ಥಿನಿ. ನನ್ನ ಪೂರ್ವಜರು ನನಗೆ 0.00 ಎಕರೆ ಭೂಮಿಯನ್ನು ನೀಡಿದ್ದಾರೆ. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. 95% ಅಂಕಗಳನ್ನು ಗಳಿಸಿದರೂ ನನಗೆ ಪ್ರವೇಶ ಸಿಗಲಿಲ್ಲ, ಆದರೆ ಶ್ರೀಮಂತ ಕುಟುಂಬದಿಂದ ಬಂದ ಮತ್ತು 60% ಅಂಕಗಳನ್ನು ಗಳಿಸಿದ ನನ್ನ ಸಹಪಾಠಿಗೆ ಬಹಳ ಸುಲಭವಾಗಿ ಪ್ರವೇಶ ಸಿಕ್ಕಿತು. ನೀವು ನನ್ನನ್ನು ಮೀಸಲಾತಿಯಿಂದ ನನಗೆ ಏಕೆ ಸಮಸ್ಯೆ ಎಂದು ಕೇಳುತ್ತೀರಾ?" ತೀವಾರಿ ಅವರು ಐದು ವರ್ಷಗಳಲ್ಲಿ ಸಾಮಾನ್ಯ ವರ್ಗದವರು ಒಗ್ಗೂಡುವಂತೆ ಕರೆ ನೀಡಿದ್ದಾರೆ ಮತ್ತು ಹಾಗೆ ಮಾಡದಿದ್ದರೆ ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಗೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರಿಂದಲೂ ಕಮೆಂಟ್‌:
ಸುಪ್ರೀಂ ಕೋರ್ಟ್ ವಕೀಲ ಶಶಾಂಕ್ ರತ್ನು ಅವರು ಆರಾಧನಾ ತೀವಾರಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, "ಇದೇ ಕಾರಣಕ್ಕೆ ಜಾತೀಯತೆ ಇನ್ನೂ ಜೀವಂತವಾಗಿದೆ! ಫಿಟ್ ಆಗಿರುವುದು ಒಳ್ಳೆಯದು, ಆದರೆ ಅದಕ್ಕೆ ಉತ್ತಮ ಅಥವಾ ವಿಶೇಷ ಜೀನ್‌ಗೆ ಕ್ರೆಡಿಟ್ ನೀಡುವುದು ಸರಿಯಲ್ಲ. ಇದು ಒಂದು ಕುಟುಂಬ, ಒಂದು ಭಾರತವನ್ನು ನಿರ್ಮಿಸುವ ಮಾರ್ಗವಲ್ಲ." ಎಂದು ಹೇಳಿದ್ದಾರೆ. ಇತರ ನೆಟಿಜನ್‌ಗಳು ಸಹ ಈ ಭಂಗಿಯೊಂದಿಗೆ ತಮ್ಮ ಬ್ರಾಹ್ಮಣ ಸ್ಥಾನಮಾನವನ್ನು ಹೊಗಳುವುದಕ್ಕೆ ತೀವ್ರವಾಗಿ ಟೀಕಿಸಿದ್ದಾರೆ.   

Latest Videos
Follow Us:
Download App:
  • android
  • ios