ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ರೂವಾರಿ ಬೆಂಗಳೂರಿನ ಎಂಜಿನಿಯ‌ರ್..!

ಯಶವಂತಪುರದ ಮಾಡೆಲ್ ಕಾಲೋನಿ 2ನೇ ಕ್ರಾಸ್‌ನ ಮೊಹಮ್ಮದ್ ಶಾಹೀದ್ ಫೈಸಲ್ ಅಲಿಯಾಸ್ ಭಾಯಿ ಎಂಬಾತನೇ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, ಎನ್‌ಐಎ ಮೋಸ್ಟ್ ವಾಟೆಂಡ್ ಶಂಕಿತ ಉಗ್ರರ ಲಿಸ್ಟ್‌ನಲ್ಲಿ ಈತನ ಹೆಸರಿದೆ. 

bengaluru based engineer mastermind of Rameshwaram cafe blast case grg

ಗಿರೀಶ್ ಮಾದೇನಹಳ್ಳಿ

ಬೆಂಗಳೂರು(ಜು.12): ಇತ್ತೀಚಿಗೆ ರಾಜಧಾನಿಯ ಐಟಿ ಕಾರಿಡಾರ್ ನ ಕುಂದಲಹಳ್ಳಿ ಸಮೀಪದ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದ ಹಿಂದಿನ ಸೂತ್ರಧಾರ ಐಸಿಸ್ ಮೋಸ್ಟ್ ವಾಟೆಂಡ್ ಶಂಕಿತ ಉಗ್ರ ಬೆಂಗಳೂರು ಮೂಲದ ಎಂಜಿನಿಯರಿಂಗ್ ಪದವೀಧರ ಎಂಬ ಮಹತ್ವದ ಸಂಗತಿ ರಾಷ್ಟ್ರೀಯ ತನಿಖಾ ದಳದ (ಎನ್ ಐಎ) ತನಿಖೆಯಲ್ಲಿ ಬಯಲಾಗಿದೆ.  

ಯಶವಂತಪುರದ ಮಾಡೆಲ್ ಕಾಲೋನಿ 2ನೇ ಕ್ರಾಸ್‌ನ ಮೊಹಮ್ಮದ್ ಶಾಹೀದ್ ಫೈಸಲ್ ಅಲಿಯಾಸ್ ಭಾಯಿ ಎಂಬಾತನೇ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, ಎನ್‌ಐಎ ಮೋಸ್ಟ್ ವಾಟೆಂಡ್ ಶಂಕಿತ ಉಗ್ರರ ಲಿಸ್ಟ್‌ನಲ್ಲಿ ಈತನ ಹೆಸರಿದೆ. ಕೆಲ ದಿನಗಳ ಹಿಂದೆ ಕೆಫೆ ಪ್ರಕರಣ ಸಂಬಂಧ ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ದಾಳಿ ನಡೆಸಿದ್ದ ಎನ್‌ಐಎ, ಆ ವೇಳೆ ಕೃತ್ಯದಲ್ಲಿ ವಿದೇಶಿ ಪ್ಯಾಂಡ್ನರ್ ಕೈವಾಡವಿದೆ ಎಂದು ಉಲ್ಲೇಖಿಸಿತ್ತು. ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯಲ್ಲಿ ಬಂಧಿತನಾಗಿದ್ದ ಶೋಯಬ್‌ ಮಿರ್ಜಾ ಅಲಿಯಾಸ್ ಛೋಟು ವಿಚಾರಣೆ ವೇಳೆ ಫೈಸಲ್ ಹೆಸರನ್ನು ಬಾಯ್ದಿಟ್ಟಿದ್ದಾನೆ ಎಂದು ಗೊತ್ತಾಗಿದೆ ಎಂದು ಎನ್‌ಐಎ ಹೇಳಿದೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್, ಹುಬ್ಬಳ್ಳಿಯಲ್ಲಿ LeT ಭಯೋತ್ಪಾದನೆ ಪ್ರಕರಣದ ಶೊಯಿಬ್ ಅರೆಸ್ಟ್!

ವಿದೇಶದಲ್ಲಿ ಅವಿತಿರುವ ಫೈಸಲ್, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಐಸಿಸ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ಹಾಗೂ ಮುಸಾಬೀರ್‌ ಹುಸೇನ್ ಮೂಲಕ ಕಫೆ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದಾನೆ. ಈ ಕೃತ್ಯಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಕೂಡ ಫೈಸಲ್ ಕಲ್ಪಿಸಿದ್ದ ಎಂದು ಮೂಲಗಳು 'ಕನ್ನಡಪ್ರಭ'ಕೈ ತಿಳಿಸಿವೆ.

50 ಸಾವಿರ ರು ಮಾಸಿಕ ನೆರವು ನೀಡುತ್ತಿದ್ದ ಫೈಸಲ್:

2012ರಲ್ಲಿ ರಾಜ್ಯದಪತ್ರಕರ್ತರುಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರ ಹತ್ಯೆ ಪ್ರಕರಣದಲ್ಲಿ ಫೈಸಲ್ ಹಾಗೂ ಮಿರ್ಜಾ ಆರೋಪಿಗಳಾಗಿದ್ದರು. ಅಂದಿನಿಂದ ಮಿರ್ಜಾ ಜತೆ ಫೈಸಲ್ ಸಂಪರ್ಕದಲ್ಲಿದ್ದ ಮಿರ್ಜಾ ಹಾಗೂ ಅಬ್ದುಲ್ ಮತೀನ್ ಇಬ್ಬರೂ ಸೋದರ ಸಂಬಂಧಿಗಳು, ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ಕೆಲ ವರ್ಷ ವಾಸವಾಗಿದ್ದರು.

ಆಗ ಫೈಸಲ್‌ಗೆ ಆನ್‌ಲೈನ್ ಮೂಲಕ ಶಿವಮೊಗ್ಗ ಬಿಸಿಸ್ ಮ್ಯಾಡ್ಯುಲ್‌ನ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ಹಾಗೂ ಮುಸಾಬೀ‌ ಹುಸೇನ್‌ನನ್ನು ಮಿರ್ಜಾಗೆ ಪರಿಚಯಿಸಿದ್ದ. ಆನಂತರ ಫೈಸಲ್ ಆವರೇಷನ್ ಟೀಂನಲ್ಲಿ ಮತೀನ್ ಹಾಗೂ ಮುಸಾಬೀರ್‌ಪ್ರಮುಖರಾಗಿದ್ದರು. ಆಗ ವಿಶ್ವ ಮಟ್ಟದಲ್ಲಿ ಐಟಿ ಹಬ್ ಎಂದು ಪ್ರಸಿದ್ದ ಪಡೆದಿರುವ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ತಾನು ರೂಪಿಸಿದ್ದ ಸಂಚನ್ನು ಕಾರ್ಯರೂಪಕ್ಕಿಳಿಸಲು ಈ ಇಬ್ಬರನ್ನು ಫೈಸಲ್ ಆಯ್ಕೆ ಮಾಡಿದ್ದ ಎನ್ನಲಾಗಿದೆ.

ಅಲ್ಲದೆ ಮಂಗಳೂರು ಕುಕ್ಕರ್‌ಬ್ಲಾಸ್ಟ್ ಹಾಗೂ ತೀರ್ಥಹಳ್ಳಿ ತಾಲೂಕಿನ ಬಾಂಬ್ ತಯಾರಿಕೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಮತೀನ್ ಹಾಗೂ ಮುಸಾರ್ಬೀ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ಖರ್ಚಿಗೆ 50 ಸಾವಿರ ರು ಹಣವನ್ನು ಕಪ್ಪೋ ಕರೆನ್ಸಿ ಮೂಲಕ ಕೊಟ್ಟು ಕೆಫೆ ಬಾಂಬ್ ಸ್ಫೋಟಕ್ಕೆ ಫೈಸಲ್ ಸಿದಗೊಳಿಸಿದ್ದ ಎಂದು ತಿಳಿದು ಬಂದಿದೆ.

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: 4 ರಾಜ್ಯ, 11 ಕಡೆ ಎನ್‌ಐಎ ರೇಡ್‌

ಯಾರಿದು ಫೈಸಲ್ ಅಲಿಯಾಸ್ ಭಾಯಿ?: ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಫೈಸಲ್, ಇಸ್ಲಾಂ ಮೂಲಭೂತದಡೆ ಆಕರ್ಷಿನಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ದಾ ಜತೆ ಗುರುತಿಸಿಕೊಂ ಡಿದ್ದ, 2012ರಲ್ಲಿ ರಾಜ್ಯದ ಪತ್ರಕರ್ತರು ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದ. ಕೂಡಲೇ ದೇಶ ತೊರೆದು ವಿದೇಶಕ್ಕೆ ಹಾರಿದ ಫೈಸಲ್, ಕಳೆದ 12 ವರ್ಷಗಳಿಂದ ಪರದೇಶದಲ್ಲೇ ಅಡಗಿದ್ದಾನೆ.

ಫೈಸಲ್ ಮಾವ ಸಹ ವಾಟೆಂಡ್

ಭಯೋತ್ಪಾದಕ ಸಂಘಟನೆಯಲ್ಲಿ ಫೈಸಲ್‌ನ ಸೋದರ ಮಾವ ಕೂಡ ಸಕ್ರಿಯವಾಗಿದ್ದು, ಆತ ಸಹ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿದ್ದಾನೆ.

ಭಾಯಿ, ಉಸ್ತಾದ್ ಹೆಸರಲ್ಲಿ ಸಂಘಟನೆ:

ದಶಕಗಳಿಂದ ರಾಜ್ಯದಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳ ಹಿಂದೆ ಫೈಸಲ್ ನೆರಳಿದೆ. ಹಲವು ಪ್ರಕರಣಗಳಲ್ಲಿ ಬಂಧಿತ ಶಂಕಿತ ಉಗ್ರರ ವಿಚಾರಣೆ ವೇಳೆ ಉಸ್ತಾದ್, ಭಾಯಿ ಹಾಗೂ ಕರ್ನಲ್ ಎಂದು ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ ಆತ ಯಾರು ಎಂಬುದು ಖಚಿತವಾಗಿರಲಿಲ್ಲ, ಆದರೀಗ ಕಥೆ ಸ್ಫೋಟ ಕೃತ್ಯದಲ್ಲಿ ಹುಬ್ಬಳ್ಳಿಯಲ್ಲಿ ಸಿಕ್ಕಿದ ಮಿರ್ಜಾ ವಿಚಾರಣೆ ವೇಳೆ ಫೈಸಲ್‌ನನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಿದ್ದ ಸಂಗತಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ. 

Latest Videos
Follow Us:
Download App:
  • android
  • ios