ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್, ಹುಬ್ಬಳ್ಳಿಯಲ್ಲಿ LeT ಭಯೋತ್ಪಾದನೆ ಪ್ರಕರಣದ ಶೊಯಿಬ್ ಅರೆಸ್ಟ್!
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಇದೀಗ 5ನೇ ಆರೋಪಿಯನ್ನು ಬಂಧಿಸಿದೆ. ಎಲ್ಇಟಿ ಭಯೋತ್ಪಾದನೆ ಷಡ್ಯಂತ್ರ ಪ್ರಕರಣದಲ್ಲಿ ಅಪರಾಧಿಯಾಗಿರುವ ಶೋಯಿಬ್ ಅಹಮ್ಮದ್ ಮಿರ್ಜಾನನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು(ಮೇ.24) ರಾಮೇಶ್ವರಂ ಸ್ಫೋಟ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದೀಗ ಇದೇ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು 5ನೇ ಆರೋಪಿಯನ್ನು ಬಂಧಿಸಿದೆ. ಹುಬ್ಬಳ್ಳಿಯ ಶೋಯಿಬ್ ಅಹಮ್ಮದ್ ಮಿರ್ಜಾ ಅಲಿಯಾಸ್ ಚೋಟು ಅರೆಸ್ಟ್ ಆಗಿದ್ದಾನೆ. ಈತ ಎಲ್ಇಟಿ ಭಯೋತ್ಪಾದನೆ ಷಡ್ಯಂತ್ರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ ಇದೇ ಶೋಯಿಬ್ ಅಹಮ್ಮದ್ ಮಿರ್ಜಾ ಇದೀಗ ರಾಮೇಶ್ವರಂ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಈ ಕುರಿತು ಎನ್ಐಎ ದಾಳಿ ನಡೆಸಿ ಶೋಯಿಬ್ ಅಲಿಯಾಸ್ ಬಂಧಿಸಿದೆ.
ಬೆಂಗಳೂರಿನಲ್ಲಿ ಬಹಿರಂಗಗೊಂಡ ಎಲ್ಇಟಿ ಭಯೋತ್ಪಾದನೆ ಷಡ್ಯಂತ್ರ ಪ್ರಕರಣದಲ್ಲಿ ಇದೇ ಶೋಯಿಬ್ ಅಹಮ್ಮದ್ ಮಿರ್ಜಾ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿದ್ದು. 35 ವರ್ಷದ ಶೋಯಿಬ್ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಂದರೆ ಹಲವು ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ್ದ. ಇಷ್ಟೇ ಅಲ್ಲ ರಹಸ್ಯವಾಗಿ ನೆರವು ನೀಡಿದ್ದ ಅನ್ನೋದು ಎನ್ಐಎ ಬಂಧನದ ಬೆನ್ನಲ್ಲೇ ಬಹಿರಂಗವಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: 4 ರಾಜ್ಯ, 11 ಕಡೆ ಎನ್‌ಐಎ ರೇಡ್
ಬೆಂಗಳೂರಿನ ಎಲ್ಇಟಿ ಭಯೋತ್ಪಾದನೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಶೋಯಿಬ್ ಜೈಲಿನಿಂದ ಬಿಡುಗಡೆಯಾಗಿದ್ದ. 2018ರಲ್ಲಿ ಆರೋಪಿ ಅಬ್ದುಲ್ ಮಥೀನ್ ತಾಹಾ ಜೊತೆ ಗೆಳೆತನ ಬೆಳೆಸಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಬಳಿಕ ವಿದೇಶದಲ್ಲಿರುವ ಶಂಕಿತ ಉಗ್ರನಿಗೆ ಪರಿಚಯವಾಗಿತ್ತು ಎಂದು ಎನಐಎ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಇಬ್ಬರನ್ನು ಎನ್ಐಎ ವಶಕ್ಕೆ ಪಡೆದಿದೆ. ಕಸಬಾಪೇಟೆ ಠಾಣೆ ವ್ಯಾಪ್ತಿಯ ರಜಿಯಾ ಟೌನ್ ನಿವಾಸಿಗಳಾದ ಶೋಯೆಬ್ ಉರ್ಫ್ ಛೋಟು ಹಾಗೂ ಇವರ ಸಹೋದರ ಅಹ್ಮದ್ ಎಂಬಾತರನ್ನು ವಶಕ್ಕೆ ಪಡೆದಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಬೆಂಗಳೂರಿನ 4 ಕಡೆ ಎನ್‌ಐಎ ದಾಳಿ
ಈ ಸ್ಫೋಟಕ್ಕೆ ಸಾಮಾಗ್ರಿಗಳನ್ನು ಚೆನ್ನೈನಲ್ಲಿ ಖರೀದಿಸಿರುವುದು ಬಹಿರಂಗವಾಗಿದೆ. ತಮಿಳುನಾಡಿನಲ್ಲಿ ಅಜ್ಞಾತವಾಗಿದ್ದುಕೊಂಡೇ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹ, ಐಟಿ ಕಾರಿಡಾರ್ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಆಗ ಸುಧಾರಿತ ಸ್ಫೋಟಕ ವಸ್ತು (ಐಇಡಿ) ತಯಾರಿಕೆಗೆ ಮುಂದಾದ ಶಂಕಿತ ಉಗ್ರರು, ಇದಕ್ಕೆ ಅಗತ್ಯವಾಗಿ ಬೇಕಾದ ಟೈಮರ್, ಎಲೆಕ್ಟ್ರಿಕ್ ಸರ್ಕ್ಯುಟ್ ಹಾಗೂ ರಾಸಾಯನಿಕ ವಸ್ತುಗಳನ್ನು ಚೆನ್ನೈ ನಗರದಲ್ಲಿ ಖರೀದಿಸಿ ಬಾಂಬ್ ತಯಾರಿಸಿದ್ದರು.