ಜೈಪುರ (ನ. 07): ಬೆಂಗಳೂರು ಮೂಲಕ ಇಂಡೋ- ಅಮೆರಿಕನ್‌ ಬರಹಗಾರ್ತಿ ಮಾಧುರಿ ವಿಜಯ್‌ (27) ಅವರ ಚೊಚ್ಚಲ ಕೃತಿ ‘ದಿ ಫಾರ್‌ ಫೀಲ್ಡ್‌’ ಗೆ 2019ನೇ ಸಾಲಿನ ‘ಜೆಸಿಬಿ ಪ್ರಶಸ್ತಿ’ ಲಭಿಸಿದೆ. ಇದು ಭಾರತದ ಅತ್ಯಂತ ಹೆಚ್ಚು ನಗದು ಪುರಸ್ಕಾರವುಳ್ಳ ಸಾಹಿತ್ಯ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಜತೆಗೆ 25 ಲಕ್ಷ ರು. ನಗದು ಒಳಗೊಂಡಿದೆ.

ಫಿಲ್ಮ್ ಬಜಾರ್ ತೆಕ್ಕೆಗೆ ಕನ್ನಡ ಸಿನಿಮಾ ಪೆದ್ರೋ

ಐದು ಜನರಿದ್ದ ಆಯ್ಕೆ ಸಮಿತಿಯಲ್ಲಿ ಮಾಧುರಿ ವಿಜಯ್‌ ಕೃತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೆಸಿಬಿ ತಿಳಿಸಿದೆ. ಜೈಪುರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಗರ್ಭಿಣಿಯಾಗಿರುವುದರಿಂದ ಮಾಧುರಿ ಗೈರಾಗಿದ್ದರು. ಹೆಣ್ಣೊಬ್ಬಳ ಭಾವನಾತ್ಮಕ ಹಾಗೂ ಮಾನಸಿಕ ತೀಕ್ಷ$್ಣತೆಯನ್ನು ಕೃತಿಯಲ್ಲಿ ಕಥಾ ವಸ್ತುವಾಗಿ ಬಳಸಲಾಗಿದೆ.