Asianet Suvarna News Asianet Suvarna News

ಬಿಬಿಎಂಪಿ ಆದಾಯ ಖೋತಾ ತಡೆ ವಿಧೇಯಕ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ

ಕಟ್ಟಡ ನಿರ್ಮಾಣಕ್ಕೂ ಮುನ್ನ ಕಟ್ಟಡ ಮಾಲೀಕರಿಂದ ನೆಲ ಬಾಡಿಗೆ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಇತರೆ ಕಾನೂನು ವಿಧೇಯಕ 2023ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Belagavi session 2023 Cabinet approves BBMP revenue embezzlement prevention bill amendment rav
Author
First Published Dec 8, 2023, 2:49 PM IST

ವಿಧಾನಸೌಧ (ಡಿ.8) ಕಟ್ಟಡ ನಿರ್ಮಾಣಕ್ಕೂ ಮುನ್ನ ಕಟ್ಟಡ ಮಾಲೀಕರಿಂದ ನೆಲ ಬಾಡಿಗೆ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಇತರೆ ಕಾನೂನು ವಿಧೇಯಕ 2023ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಆರಂಭಿಸುವ ಪ್ರಮಾಣಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವ ವೇಳೆ ನೆಲ ಬಾಡಿಗೆ ಹಾಗೂ ಶುಲ್ಕ ಪಡೆಯಲಾಗುತ್ತದೆ. ಹೀಗೆ ಶುಲ್ಕ ಮತ್ತು ನೆಲ ಬಾಡಿಗೆ ಪಡೆಯುವ ಬಗ್ಗೆ ಕಾಯ್ದೆಯ ಉಪವಿಧಿಯಲ್ಲಿ ಉಲ್ಲೇಖಿಸಿಲ್ಲ. ಆದರೆ, ಸರ್ಕಾರಿ ಸುತ್ತೋಲೆ ಮೂಲಕ ಬಿಬಿಎಂಪಿ ನೆಲ ಬಾಡಿಗೆ ಪಡೆಯುವುದಕ್ಕೆ ಅವಕಾಶ ಮಾಡಿಕೊಳ್ಳಲಾಗಿತ್ತು. ಆದರೆ, ಬಿಬಿಎಂಪಿಯ ಈ ಕ್ರಮದ ವಿರುದ್ಧ ಬಿಲ್ಡರ್‌ಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳು ಕಾಯ್ದೆಗೆ ವಿರುದ್ಧವಾಗಿ ಶುಲ್ಕ ವಸೂಲಿ ಮಾಡಲಾಗಿದೆ ಎಂದು ಹೈಕೋರ್ಟ್‌ ಮೊರೆ ಹೋಗಿದ್ದರು.

ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನಲ್ಲಿ ಮಧ್ಯಾಹ್ನ, ರಾತ್ರಿ ಮುದ್ದೆ ಊಟ!

ಅಲ್ಲದೆ, ಹೈಕೋರ್ಟ್‌ ಶೇ.50ರಷ್ಟು ನೆಲ ಬಾಡಿಗೆ ವಸೂಲಿ ಮಾಡಿ ನಕ್ಷೆ ಮಂಜೂರಾತಿ ಸೇರಿ ಇನ್ನಿತರ ಪ್ರಮಾಣಪತ್ರ ನೀಡುವಂತೆ ಸೂಚಿಸಿತ್ತು. ಈ ಕ್ರಮದಿಂದ ಬಿಬಿಎಂಪಿಗೆ ₹2,362 ಕೋಟಿ ಆದಾಯ ಖೋತಾ ಆಗುತ್ತಿದೆ. ಇದೀಗ ಬಿಬಿಎಂಪಿ ಆದಾಯ ಖೋತಾ ಆಗುವುದನ್ನು ತಡೆಯಲು ಬಿಬಿಎಂಪಿ ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕ 2023 ಜಾರಿಗೆ ಅನುಮೋದನೆ ನೀಡಲಾಗಿದೆ. ಶುಕ್ರವಾರ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಹೊಸವರ್ಷಕ್ಕೆ ಕೆಲವೇ ದಿನಗಳು ಬಾಕಿ; ಬಿಬಿಎಂಪಿ ಮುಚ್ಚಿಸಿದ್ದ ಅನಧಿಕೃತ ಪಬ್ ತೆರೆಯಲು ರಾಜಕೀಯ ಒತ್ತಡ?

ಕಾಯ್ದೆ ನ್ಯೂನ್ಯತೆ ಏನು?

ಬಿಬಿಎಂಪಿಯ ವಲಯ ನಿಯಮಾವಳಿ ಹಾಗೂ ಕಟ್ಟಡ ಉಪ ವಿಧಿಯಲ್ಲಿ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಆರಂಭಿಸುವ ಪರವಾನಗಿ ಹಾಗೂ ಸ್ವಾಧೀನಾನುಭವ ಪತ್ರ ನೀಡುವ ಸಂದರ್ಭದಲ್ಲಿ ನೆಲ ಬಾಡಿಗೆ ವಸೂಲಿ ಮಾಡಲಾಗುತ್ತದೆ. ನೆಲ ಬಾಡಿಗೆ ವಿಧಿಸುವುದಕ್ಕೆ ಬಿಬಿಎಂಪಿ ಕಾಯ್ದೆಯಲ್ಲಿ ಅವಕಾಶ ಇಲ್ಲ. ರಾಜ್ಯ ಸರ್ಕಾರದ ಸುತ್ತೋಲೆ ಅನ್ವಯ ಬಿಬಿಎಂಪಿ ಕಟ್ಟಡ ಮಾಲೀಕರು, ಬಿಲ್ಡರ್‌ಗಳಿಂದ ನೆಲ ಬಾಡಿಗೆ ವಸೂಲಿ ಮಾಡುತ್ತಿದೆ. ಈ ನೂನ್ಯತೆ ಪ್ರಶ್ನಿಸಿ ಬಿಲ್ಡರ್‌ಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್ ವಿಚಾರಣೆ ವೇಳೆ ನ್ಯೂನ್ಯತೆ ಸರಿಪಡಿಸಿ ಹಾಗೂ ಅಲ್ಲಿಯವರೆಗೆ ಶೇ.50ರಷ್ಟು ಮಾತ್ರ ಶುಲ್ಕ ಪಾವತಿಸಿಕೊಂಡು ಪರವಾನಗಿ ನೀಡುವಂತೆ ಸೂಚನೆ ನೀಡಿತ್ತು.

Follow Us:
Download App:
  • android
  • ios