ಬೆಳಗಾವಿ ಪಂಚಮಸಾಲಿ ಮೀಸಲಾತಿ ಹೋರಾಟ ಉದ್ವಿಗ್ನ; ಪೊಲೀಸರಿಂದ ಲಾಠಿಚಾರ್ಜ್, 10ಕ್ಕೂ ಅಧಿಕ ಜನರಿಗೆ ಗಾಯ!

ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಸುವರ್ಣ ಸೌಧ ಮುತ್ತಿಗೆ ಪ್ರಯತ್ನ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಸಿಎಂ ಪ್ರತಿನಿಧಿಯಾಗಿ ಸಚಿವ ಮಹದೇವಪ್ಪ ಭರವಸೆ ನೀಡಿದರೂ, ಪ್ರತಿಭಟನೆ ಮುಂದುವರೆದು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು.

Belagavi Panchamasali reservation protest turn tense Police lathi charge 10 people injured sat

ಬೆಳಗಾವಿ (ಡಿ.10): ಬೆಳಗಾವಿಯಲ್ಲಿ ರಾಜ್ಯ ಸರ್ಕಾರದಿಂದ ಅಧಿವೇಶನ ಆರಂಭವಾದ ಬೆನ್ನಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಪೀಠದ ಜಯಮೃತುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಸ್ವತಃ ಐಜಿಪಿ ಸೇರಿದಂತೆ ಎಲ್ಲ ಪೊಲೀಸರು ಸುವರ್ಣ ಸೌಧ ಮುತ್ತಿಗೆ ಹಾಕಲು ಹೋಗುತ್ತಿದ್ದರವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಜಯಮೃತುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಕಿಚ್ಚು ಇಂದು ಮಧ್ಯಾಹ್ನದ ವೇಳೆ ಏಕಾಏಕಿ ಉದ್ವಿಗ್ನ ಪರಿಸ್ಥಿತಿಗೆ ತಿರಿಗಿದೆ. ಪ್ರತಿಭಟನಾಕಾರರು ಸುವರ್ಣ ಸೌಧ ಮುತ್ತಿಗೆ ಹಾಕು ಪೊಲೀಸರನ್ನು ತಳ್ಳಿ ಓಡುತ್ತಿದ್ದಾಗ ಸ್ವತಃ ಇದನ್ನು ವೀಕ್ಷಣೆ ಮಾಡಿದ ಐಜಿಪಿ 

ಪಂಚಮಸಾಲಿ ಸಮುದಾಯದ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬರದೇ ತಮ್ಮ ಪ್ರತಿನಿಧಿಯಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರನ್ನು ಕಳಿಸಿದ್ದರು. ಸಮಾವೇಶಕ್ಕೆ ಬಂದ ಸಚಿವ ಎಚ್. ಸಿ. ಮಹಾದೇವಪ್ಪ ಅವರು, ಶಾಂತಿಯುತ ಹೋರಾಟವನ್ನು ಅಡ್ಡಿಪಡಿಸುವ‌ ಯಾವುದೇ ಪ್ರಶ್ನೆಯೆ ಇಲ್ಲ. ಕೋರ್ಟ್ ವ್ಯಾಜ್ಯದ ಬಗ್ಗೆ  ಸಿದ್ಧರಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಕಾನೂನು, ಸಂವಿಧಾನದ ಗಮನದಲ್ಲಿ ಇಟ್ಟುಕೊಂಡು ಚರ್ಚೆ ಮಾಡಲಾಗುತ್ತಿದ್ದು, ನಾಡಿದ್ದು ಸದನದಲ್ಲಿ ಚರ್ಚೆ ಮಾಡುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳುವ ಯತ್ನ ಯಾರು ಮಾಡಬಾರದು. ಸಿಎಂ ಸೂಚನೆ ಹಿನ್ನೆಲೆಯಲ್ಲಿ 3 ಜನ ಸಚಿವರು ಇಲ್ಲಿಗೆ ಬಂದಿದ್ದೇವೆ. ಎಲ್ಲಾ ವಿಚಾರದಲ್ಲಿ ಸಿಎಂ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ರಸ್ತೆ ಗುಂಡಿ ಮುಚ್ಚಲಾಗದಿದ್ದರೂ ಕೇರಳಕ್ಕೆ 100 ಮನೆ ಕೊಡುವುದಾಗಿ ಪತ್ರ ಬರೆದ ಸಿದ್ದರಾಮಯ್ಯ!

ಆದರೆ, ಸಚಿವ ಮಹಾದೇವಪ್ಪ ಭರವಸೆಗೆ ಒಪ್ಪದ ಜಯಮೃತುಂಜಯ ಸ್ವಾಮೀಜಿ ಅವರು, ಸುವರ್ಣ ಸೌಧದ ಒಳಗಿನ ಚನ್ನಮ್ಮ ಪ್ರತಿಮೆಗೆ ಹೋಗೊಣ ಎಂದು ಪ್ರತಿಭಟನಾಕಾರರಿಗೆ ಹೇಳಿದರು. ಈ ಮೂಲಕ ಸುವರ್ಣ ಸೌಧವನ್ನು ಮುತ್ತಿಗೆ ಹಾಕುವಂತೆ ಸ್ವಾಮೀಜಿ ಕರೆ ನೀಡಿದರು. ಸುವರ್ಣಸೌಧದತ್ತ ಸಹಸ್ರಾರು ‌ಪಂಚಮಸಾಲಿ ಮೀಸಲಾತಿ ಪ್ರತಿಭಟನಾಕಾರರು ಓಡಲಾರಂಭಿಸಿದರು. ಈ ವೇಳೆ ಸುವರ್ಣಸೌಧ ಮುತ್ತಿಗೆಗೆ ಮುಂದಾದ ಪಂಚಮಸಾಲಿ ಸಮಾಜದ ಮುಖಂಡರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಓಡಿ ಹೋದರು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪೊಲೀಸರಯ ಬ್ಯಾರಿಕೇಡ್ ಹಾಕಿ ಪ್ರತಿಭಟನಾ ಕಾರರನ್ನು ತಡೆಯಲು ಮುಂದಾದರೂ ವಿಫಲವಾಯಿತು. ಕೂಡಲೇ ಸ್ಥಳಕ್ಕೆ ಬಂದ ಐಜಿಪಿ ಪ್ರತಿಭಟನಾಕಾರರನ್ನು ತಡೆಯಿರಿ, ಲಾಠಿಚಾರ್ಜ್ ಮಾಡಿ ಎಂದು ಆದೇಶ ನೀಡಿದರು.

ಸಾವಿರಾರು ಪ್ರತಿಭಟನಾಕಾರರನ್ನು ತಡೆಯಲಾಗದೇ ಲಾಠಿ ಹಿಡಿದು ನಿಂತಿದ್ದ ಪೊಲೀಸರಿಗೆ ಲಾಠಿ ಚಾರ್ಜ್ ಮಾಡಲು ಆದೇಶ ನೀಡುತ್ತಿದ್ದಂತೆ ಕೆಲವರ ಪೊಲೀಸರು ಸುವರ್ಣ ಸೌಧದತ್ತ ಮುನ್ನುಗ್ಗುತ್ತಿದ್ದವರ ಮೇಲೆ ಲಾಠಿ ಬೀಸಿ ಚದುರಿಸಿದರು. ನಂತರ, ಸ್ವತಃ ಬ್ಯಾರಿಕೇಡ್ ಹಾರಿ ರಸ್ತೆಗೆ ಹೋದ ಐಜಿಪಿ ತಾವೇ ಲಾಠಿ ಹಿಡಿದು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು. ಆಗ ಅಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಹಾಗೂ ಚಪ್ಪಲಿಗಳನ್ನು ಬೀಸಾಡಿದ್ದಾರೆ. ಈ ವೇಳೆ ಕೆಲವು ಪೊಲೀಸರಿಗೆ ಗಾಯಗಳಾಗಿವೆ. ಇನ್ನು ಪೊಲೀಸರಿಂದ ಲಾಠಿ ಏಟು ತಿಂದ 10ಕ್ಕೂ ಅಧಿಕ ಪ್ರತಿಭಟನಾಕಾರರಿಗೆ ಗಾಯಗಳಾಗಿವೆ.

ಇದನ್ನೂ ಓದಿ:SM Krishna passes away: 'ಸಾರ್ವಜನಿಕವಾಗಿ ಡೈವೋರ್ಸ್‌ ಕೊಟ್ಟಾಗಿದೆ, ಇನ್ಯಾಕೆ ಮಾತು..' ಎಂದಿದ್ದರು ಪತ್ನಿ ಪ್ರೇಮಾ ಕೃಷ್ಣ!

Latest Videos
Follow Us:
Download App:
  • android
  • ios