ಬೆಳಗಾವಿಯಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗೆ ಮರಾಠಿ ಭಾಷೆಯಲ್ಲಿ ಮಾತನಾಡಲು ಆಗ್ರಹಿಸಿ ಯುವಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದೆ.

ಬೆಳಗಾವಿ (ಮಾ.12): ಈಗಾಗಲೇ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್‌ಗೆ ಮರಾಠಿ ಮಾತನಾಡುವಂತೆ ಆಗ್ರಹಿಸಿ ಎರಡು ರಾಜ್ಯಗಳಲ್ಲಿ ಕನ್ನಡ-ಮರಾಠಿ ಭಾಷಿಕರ ನಡುವೆ ಕಿಚ್ಚು ಹೊತ್ತಿಸಿದ್ದ ಘಟನೆ ತಣ್ಣಗಾದ ಬೆನ್ನಲ್ಲಿಯೇ ಮತ್ತೊಬ್ಬ ಮರಾಠಿ ಯುವಕ ಪುಂಡಾಟ ಮೆರೆದಿದ್ದಾನೆ. ಕರ್ನಾಟಕ ಸರ್ಕಾರದ ಅಧೀಕನದ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಮರಾಠಿ ಮಾತನಾಡುವಂತೆ ಆಗ್ರಹಿಸಿ ಹಲ್ಲೆಗೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಕಿಣೆಯೇ ಪಂಚಾಯತ್ ಪಿಡಿಓ ಮೇಲೆ ಮರಾಠಿ ಪುಂಡನೊಬ್ಬ ದರ್ಪ ತೋರಿದ್ದಾನೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸರ್ಕಾರಿ ಸೇವೆಗಾಗಿ ಅರ್ಜಿ ಸಲ್ಲಿಸಿದ ತಿಪ್ಪಣ್ಣ ಡೊಕ್ರೆ ಎನ್ನುವ ಯುವಕ ಮರಾಠಿಯಲ್ಲಿ ಮಾತನಾಡುವಂತೆ ಪಿಡಿಒಗೆ ಆಗ್ರಹಿಸಿದ್ದಾನೆ. ಇಲ್ಲಿ ಮರಾಠಿ ಮಾತನಾಡುವುದಿಲ್ಲ, ನೀನೇ ಕನ್ನಡ ಮಾತನಾಡು ಎಂದು ಹೇಳಿದ್ದಕ್ಕೆ ಸರ್ಕಾರಿ ನೌಕರ ಎಂಬುದನ್ನು ನೋಡದೇ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View post on Instagram

ಇದರ ಬೆನ್ನಲ್ಲಿಯೇ ಸರ್ಕಾರಿ ಅಧಿಕಾರಿಯ ಮೇಲೆ ಮರಾಠಿ ಮಾತನಾಡುವಂತೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಮುಂದಾದ ಪುಂಡನನ್ನು ಬಂಧನ ಮಾಡುವಂತೆ ಬೆಳಗಾವಿ ಜಿಲ್ಲೆ ಕರ್ನಾಟಕ ರ್ಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್ ಗುಡಗನಟ್ಟಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿ‌ ಪುಂಡರಿಂದ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಮರಾಠಿ ಭಾಷೆಯಲ್ಲಿಯೇ ಮಾತನಾಡುವಂತೆ ಪಿಡಿಓಗೆ ಮರಾಠಿ ಪುಂಡ ಅವಾಜ್ ಹಾಕುತ್ತಿದ್ದಾನೆ. ಮರಾಠಿ ಪುಂಡರು ಸರ್ಕಾರಿ ಅಧಿಕಾರಿಗಳಿಗೆ ರಾಜಾರೋಷವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆರೋಪಿಯನ್ನ ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Belagavi: ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಭಾರೀ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ!

ಸರ್ಕಾರ ಕೂಡಲೇ ಎಂಇಎಸ್ ಪುಂಡರ ದೌರ್ಜನ್ಯದ ಗಂಭೀರತೆ ಅರಿತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಕನ್ನಡದಲ್ಲಿ ಮತಾನಾಡು ಎಂದು ಹೇಳಿದ ಅಧಿಕಾರಿಗೆ ನಾವು ಅಭಿನಂದನೆ ಮಾಡುವ ಕೆಲಸ ಮಾಡುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆ ಎಂದಿಗೂ ಕನ್ನಡಿಗರ ಜೊತೆಗೆ ನಿಲ್ಲುತ್ತದೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ತಿಳಿಸಿದ್ದಾರೆ.

ಪಿಡಿಒ ಅಧಿಕಾರಿ ಮೇಲೆ ಎಂಇಎಸ್ ಪುಂಡನೊಬ್ಬ ಮರಾಠಿ ಮಾತನಾಡುವಂತೆ ಆಗ್ರಹಿಸಿ ಬೆದರಿಕೆ ಹಾಗೂ ಹಲ್ಲೆಗೆ ಮುಂದಾಗಿದ್ದನ್ನು ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಬೆಳಗಾವಿ ತಾಲೂಕಿನ ಕಿಣೆಯೆ ಪಂಚಾಯತ್ ಪಿಡಿಓ ಮೇಲೆ ದರ್ಪ ತೋರಿ, ಅವಾಚ್ಚ ಶಬ್ದಗಳಿಂದ ನಿಂದಿಸಿದ್ದ ಮರಾಠಿ ಪುಂಡನ ಬಂಧಿಸಿ ಜೈಲಿಗಟ್ಟಿದ್ದಾರೆ. ಮರಾಠಿಯಲ್ಲಿ ಮಾತನಾಡುವಂತೆ ಪುಂಡಾಟಿಕೆ ಮಾಡಿದ್ದ ಕಿಣೆ ಗ್ರಾಮದ ತಿಪ್ಪಣ್ಣ ಡೊಕ್ರೆ ಬಂಧನವಾದ ಆರೋಪಿ ಆಗಿದ್ದಾನೆ. ಪಿಡಿಓ ನಾಗೇಂದ್ರ ಪತ್ತಾರ ಮೇಲೆ ದರ್ಪ ತೋರಿ‌ ಅವಾಚ್ಚ ಶಬ್ದಗಳಿಂದ ನಿಂದನೆ ಮಾಡಿದ್ದನು. ಮರಾಠಿ ಮಾತನಾಡುವಂತೆ ಅವಾಜ್ ಹಾಕಿದ್ದ ಮರಾಠಿ ಪುಂಡ ಈಗ ಜೈಲು ಸೇರಿದ್ದಾನೆ.

ಇದನ್ನೂ ಓದಿ: ಮುಸ್ಲಿಂ ಯುವಕನೊಂದಿಗೆ ಓಡಿಹೋದ ಬೆಳಗಾವಿ ಯುವತಿ, ತಾಯಿ ಕುಸಿದುಬಿದ್ದರೂ ಮಗಳ ಮನಸ್ಸು ಕರಗಲಿಲ್ಲ!