ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ’ ಒಂದೇ ಕ್ಷೇತ್ರಕ್ಕೆ ವ್ಯಕ್ತಿತ್ವ ಸೀಮಿತ ಮಾಡಿಕೊಳ್ಳಲಾಗದು: ಸಚಿವ ಅಶ್ವತ್ಥ ನಾರಾಯಣ
ಬೆಂಗಳೂರು (ಅ.10) : ಕೇವಲ ಒಂದು ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ ಬದುಕಿ ಒಳಿತಿಗಾಗಿ ಕೈಜೋಡಿಸಬೇಕು ಶ್ರಮಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು. ಅವರು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹಾಗೂ ಕಬ್ಬನ್ ಪಾರ್ಕ್ ನಡಿಗೆದಾರರ ಫೋರಂ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್ ಫೋನ್ ವಶಪಡಿಸಿಕೊಂಡ ಬಿಎಸ್‌ಎಫ್!
ಕಬ್ಬನ್ ಪಾರ್ಕ್ ಇಡೀ ಬೆಂಗಳೂರಿಗರನ್ನು ಸೆಳೆಯುವ ಅದ್ಭುತ ಸ್ಥಳ. ಅಲ್ಲಿ ಪ್ರತಿದಿನ ನಡೆವ ಆಸೆ ನನಗೂ ಇದೆ. ಆರೋಗ್ಯ ಕಾಪಾಡಿಕೊಳ್ಳಲು, ದಿನನಿತ್ಯದ ಒತ್ತಡ ನಿವಾರಿಸಿಕೊಳ್ಳಲು ಈ ಉದ್ಯಾನ ನೆಲೆಯಾಗಿದೆ. ಇದನ್ನು ವೇದಿಕೆಯಾಗಿಟ್ಟುಕೊಂಡು ಎಲ್ಲರೂ ಒಂದಾಗಿ ಸಮಗ್ರತೆ ಸಾಧಿಸಬೇಕು ಎಂದರು.
ನಾವಿಂದು ಜಾಗತಿಕ ಸ್ಪರ್ಧಾ ಯುಗದಲ್ಲಿದ್ದೇವೆ. ಪ್ರಸ್ತುತ ಒಂದೇ ಕ್ಷೇತ್ರಕ್ಕೆ ವ್ಯಕ್ತಿತ್ವ ಸೀಮಿತ ಮಾಡಿಕೊಳ್ಳಲಾಗದು. ಜ್ಞಾನಾರ್ಜನೆ ವಿಚಾರದಲ್ಲಿ ನಮಗೆ ನಾವೇ ಗಡಿ ಹಾಕಿಕೊಳ್ಳಬಾರದು. ಸಾಧನೆಗಾಗಿ ಸಮಗ್ರ ತಿಳಿವಳಿಕೆ ಅಗತ್ಯವಾಗಿದೆ. ನಮ್ಮ ಮಕ್ಕಳಿಗಾಗಿ ಆರೋಗ್ಯಕರ ಸಮಾಜವನ್ನು ಕಟ್ಟಲು ಮುಂದಾಗೋಣ. ಪಠ್ಯದ ಜೊತೆ ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕಾರ್ಯ, ಸಂವಹನ ಕೌಶಲ, ತಾಂತ್ರಿಕ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕರಿಸೋಣ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತೆ ಡಾಪ್ರತಿಮಾ ಮೂರ್ತಿ, ಸಾಧನೆ ಹಾದಿಯಲ್ಲಿ ಎದುರಾಗುವ ಅಡ್ಡಿ ನಿವಾರಿಸುವ ತಾಳ್ಮೆ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಓಲಾ, ಉಬರ್ ಕಂಪನಿಗಳ ಕಳ್ಳಾಟಕ್ಕೆ ಇಂದೇ ಬೀಳುತ್ತಾ ಬ್ರೇಕ್..?
ಪ್ರಶಸ್ತಿ ಪ್ರದಾನ
ಈ ವೇಳೆ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಕ್ರೀಡಾಪಟು ಡಾ ಅಶ್ವಿನಿ ನಾಚಪ್ಪ, ಪತ್ರಕರ್ತೆ ಮಂಜುಶ್ರೀ ಕಡಕೋಳ, ನೃತ್ಯ ಕಲಾವಿದೆ ರೇಖಾ ಸುರೇಶ, ಶೈಕ್ಷಣಿಕ ಕ್ಷೇತ್ರದಲ್ಲಿ ನಿಶಿತಾ ಪೂಜಾರಿ ಸೇರಿ ಸಾಧಕರಿಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ ಪುನೀತ್ ರಾಜ…ಕುಮಾರ್ ಅವರ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಯುವ ಸಂಗೀತ ನಿರ್ದೇಶಕ ಸುರೇಶ ಅವರಿಗೆ ಪ್ರದಾನ ಮಾಡಲಾಯಿತು.
