ಬೆಂಗಳೂರು(ಜ.04): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಕಲಿ ಖಚಿತ ಅಳತೆ ವರದಿ (ಸಿಡಿಆರ್‌) ಸೃಷ್ಟಿಸಿ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹಾಗೂ ಮಾರಾಟ ಮಾಡಲು ಸಹಕರಿಸುತ್ತಿದ್ದ ಆರೋಪದಡಿ ಗುತ್ತಿಗೆ ನೌಕರನೊಬ್ಬನನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಬಿಡಿಎ ಬನಶಂಕರಿ ಕಚೇರಿಯಲ್ಲಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನವೀನ್‌ ನಕಲಿ ಖಚಿತ ಅಳತೆ ವರದಿ (ಸಿಡಿಆರ್‌) ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ. ಬಿಡಿಎ ನಿವೇಶನಗಳ ಸಿಡಿಆರ್‌ ಬಗ್ಗೆ ತಿಳಿದುಕೊಂಡಿದ್ದ ಆರೋಪಿ, ನಕಲಿ ಸಿಡಿಆರ್‌ ಸೃಷ್ಟಿಸಲಾರಂಭಿಸಿದ್ದ. ಕೆಲವರು ಆರೋಪಿಗೆ ದುಡ್ಡು ಕೊಟ್ಟು ನಕಲಿ ಸಿಡಿಆರ್‌ ಸೃಷ್ಟಿಸಿಕೊಂಡಿದ್ದರು. ಮಧ್ಯವರ್ತಿಗಳು ಹಾಗೂ ಇತರರ ಮೂಲಕ ಆರೋಪಿ ನಿವೇಶನಗಳನ್ನು ಮಾರಾಟ ಮಾಡಿಸುತ್ತಿದ್ದ ಎನ್ನಲಾಗಿದೆ.

ಖಂಡ್ರೆ, ಇಬ್ರಾಹಿಂ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ: ರುದ್ರೇಶ್‌

ಆರೋಪಿ ನವೀನ್‌ನಿಂದ ವಂಚನೆಗೊಳಗಾದ ಕೆಲ ಸಾರ್ವಜನಿಕರು, ಬಿಡಿಎ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಅವರ ವಿರುದ್ಧ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಕಚೇರಿ ಸಿಬ್ಬಂದಿ ಮೇಲೆಯೇ ಆರೋಪಿ ನವೀನ್‌, ಹಲ್ಲೆ ಮಾಡಿದ್ದರು. ಆ ಬಗ್ಗೆಯೂ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.