ರಾಮ​ನ​ಗ​ರ(ಜ.04): ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಹಾಗೂ ಬಿಜೆ​ಪಿ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಗ್ಗೆ ಮಾತ​ನಾ​ಡು​ತ್ತಿ​ರುವ ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತು ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಇ​ಬ್ರಾಹಿಂ ಅವರು ಮಾನ​ಸಿಕ ಸ್ಥಿಮಿ​ತತೆ ಕಳೆ​ದು​ಕೊಂಡಿ​ದ್ದಾರೆ ಎಂದು ಕೆಆರ್‌ಐಡಿ​ಎಲ್‌ ಅಧ್ಯಕ್ಷ ಎಂ.ರು​ದ್ರೇಶ್‌ ಟೀಕಿ​ಸಿ​ದರು.

ಗ್ರಾಪಂ ಚುನಾ​ವ​ಣೆ​ಯಲ್ಲಿ ಗೆಲುವು ಸಾಧಿ​ಸಿದ ಬಿಜೆಪಿ ಬೆಂಬ​ಲಿತ ಅಭ್ಯ​ರ್ಥಿ​ಗ​ಳನ್ನು ಅಭಿ​ನಂದಿಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಿಎಂ ಯಡಿ​ಯೂ​ರಪ್ಪ ಅವರ ಬಗ್ಗೆ ಮಾತ​ನಾ​ಡುವ ಯೋಗ್ಯತೆ ಈಶ್ವರ್‌ ಖಂಡ್ರೆ ಮತ್ತು ಇಬ್ರಾಹಿಂ ಅವ​ರಿಗೆ ಇಲ್ಲ ಎಂದರು.

ರಾಜ್ಯಮಟ್ಟದಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಇಲ್ಲ: ಅಶೋಕ್‌ ಸ್ಪಷ್ಟನೆ

ಮುಖ್ಯ​ಮಂತ್ರಿ ಬದ​ಲಾ​ವಣೆ ವಿಚಾ​ರ​ವಾ​ಗಿ ಮಾತ​ನಾ​ಡುತ್ತಾ ಕೆಲ​ವರು ಮಾನ​ಸಿಕ ಸ್ಥಿಮಿ​ತತೆ ಕಳೆ​ದು​ಕೊಂಡು ಆಸ್ಪತ್ರೆ ಸೇರು​ತ್ತಿ​ದ್ದಾರೆ. ಅಷ್ಟಕ್ಕೂ ಮುಖ್ಯ​ಮಂತ್ರಿ ಹಾಗೂ ನಮ್ಮ ಪಕ್ಷದ ಅಧ್ಯ​ಕ್ಷರ ಬಗ್ಗೆ ಮಾತ​ನಾ​ಡಲು ಅವರು ಯಾರೆಂದು ಪ್ರಶ್ನಿ​ಸಿ​ದರು.