*   ಡ್ರಗ್ಸ್‌ ಸೇವೆನೆ ಮಾಡಿ ಸಿಕ್ಕಿಬಿದ್ದಿದ್ದಾರೋ ಅವರಿಗೆ ಕಾನೂನು ಪ್ರಕಾರ ಶಿಕ್ಷೆ*   ಜನ ನಮ್ಮನ್ನು ನಟರನ್ನಾಗಿ ನೋಡಲ್ಲ. ದೇವರಂತೆ ಕಾಣು​ತ್ತಾರೆ*   ನಾವು ನಡೆ-ನುಡಿಯನ್ನು ಶುದ್ಧವಾಗಿ ಇಟ್ಟಕೊಳ್ಳಬೇಕು 

ಹಾವೇರಿ(ಆ.25):  ನಾವು ಗಾಜಿನ ಮನೆ ಮೇಲೆ ನಿಂತಿದ್ದೇವೆ ಅನ್ನೋ ಪ್ರಜ್ಞೆ ಪ್ರತಿಯೊಬ್ಬ ಹೀರೋಗೆ ಇರಬೇಕು. ನಾವೇ ತಪ್ಪಾಗಿ ನಡೆ​ದರೆ ಅದು ಸಾಮಾಜದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಕಿವಿಮಾತು ಹೇಳಿ​ದ್ದಾರೆ. 

ಮಂಗಳವಾರ ನಟ-ನಟಿ​ಯರ ಡ್ರಗ್ಸ್‌ ಸೇವನೆ ವಿಚಾರ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಡ್ರಗ್ಸ್‌ ಸೇವೆನೆ ಮಾಡಿ ಸಿಕ್ಕಿಬಿದ್ದಿದ್ದಾರೋ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎಂದು ತಿಳಿಸಿದ್ದಾರೆ. 

ಸಂಜನಾ ಬಗ್ಗೆ ಇನ್ನೊಂದಿಷ್ಟು ಶಾಕಿಂಗ್ ಮಾಹಿತಿ ಕೊಟ್ಟ ಸಂಬರಗಿ!

ಜನ ನಮ್ಮನ್ನು ನಟರನ್ನಾಗಿ ನೋಡಲ್ಲ. ದೇವರಂತೆ ಕಾಣು​ತ್ತಾರೆ, ನಮ್ಮ ನಡೆ-ನುಡಿ ಅನುಕರಿಸುತ್ತಾರೆ. ಹೀಗಾ​ಗಿ ನಾವು ನಡೆ-ನುಡಿಯನ್ನು ಶುದ್ಧವಾಗಿ ಇಟ್ಟಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.