ಶೀನಾ ಬೋರಾ ಕೇಸ್‌ಗೆ ಟ್ವಿಸ್ಟ್, ಪ್ರಮುಖ ಸಾಕ್ಷ್ಯವಾಗಿದ್ದ ಮೂಳೆಗಳು ನಾಪತ್ತೆ!
ಹೈಪ್ರೊಫೈಲ್ ಶೀನಾ ಬೋರಾ ಹತ್ಯೆಯ ವಿಚಾರಣೆಯಲ್ಲಿ ಪ್ರಮುಖ ಸಾಕ್ಷ್ಯವು ಕಾಣೆಯಾಗಿದೆ. ಶೀನಾಳ ಅವಶೇಷ, ಮೂಳೆಗಳು ನಾಪತ್ತೆ ಆಗಿವೆ ಎಂದು ಕೋರ್ಟ್‌ಗೆ ಪ್ರಾಸಿಕ್ಯೂಷನ್ ತಿಳಿಸಿದೆ.
ಮುಂಬೈ: ಹೈಪ್ರೊಫೈಲ್ ಶೀನಾ ಬೋರಾ ಹತ್ಯೆಯ ವಿಚಾರಣೆಯಲ್ಲಿ ಪ್ರಮುಖ ಸಾಕ್ಷ್ಯವು ಕಾಣೆಯಾಗಿದೆ. ಶೀನಾಳ ಅವಶೇಷಗಳು ಎಂದು ಸಿಬಿಐ ಹೇಳಿಕೊಳ್ಳುವ ಮೂಳೆಗಳು ನಾಪತ್ತೆ ಆಗಿವೆ ಎಂದು ಕೋರ್ಟ್‌ಗೆ ಪ್ರಾಸಿಕ್ಯೂಷನ್ ತಿಳಿಸಿದೆ. 24 ವರ್ಷದ ಶೀನಾ ಬೋರಾ ಅವರನ್ನು ಏಪ್ರಿಲ್ 2012 ರಲ್ಲಿ ಕೊಲ್ಲಲಾಗಿತ್ತು, ಆಕೆಯ ಕೊಲೆ 2015 ರಲ್ಲಿ ಬೆಳಕಿಗೆ ಬಂದಿತ್ತು. ಇಂದ್ರಾಣಿ ಮುಖರ್ಜಿ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಮಹಾರಾಷ್ಟ್ರದ ರಾಯಗಡದಲ್ಲಿ ಪೊಲೀಸರು ಶೀನಾ ಬೋರಾ ಅವರ ಮೂಳೆಗಳು ಮತ್ತು ಇತರ ಅವಶೇಷಗಳನ್ನು ವಶಪಡಿಸಿಕೊಂಡರು.
ಪುತ್ರಿ ಶೀನಾ ಬೋರೋ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ, ಮಾಧ್ಯಮ ಉದ್ಯಮಿಯಾಗಿದ್ದ ಇಂದ್ರಾಣಿ ಮುಖರ್ಜಿ ಆರೂವರೆ ವರ್ಷಗಳ ನಂತರ ಮೇ , 2022ರಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. ಮುಂಬೈನ ಬೈಕುಲ್ಲಾ ಜೈಲಿನಿಂದ ಆಕೆಯನ್ನು ಆರೂವರೆ ವರ್ಷಗಳ ನಂತರ ಬಿಡುಗಡೆ ಮಾಡಲಾಯ್ತು.
ಡಿ ಗ್ಯಾಂಗ್‌ನಲ್ಲಿ 19 ಮಂದಿ, ಇಂದು ಜೈಲಿಗೆ?, ಪರಪ್ಪನ ಅಗ್ರಹಾರದಲ್ಲಿನ ದರ್ಶನ್ ಆಪ್ತ ರೌಡಿಶೀಟರ್‌ಗಳು ಬೇರೆಡೆಗೆ!
ಕೌಟುಂಬಿಕ ಕಲಹ, ಹಣಕಾಸು ವಿಚಾರ ಸೇರಿದಂತೆ ನಾನಾ ಮನಸ್ತಾಪಗಳ ಹಿನ್ನೆಲೆಯಲ್ಲಿ ತನ್ನ ಮೊದಲ ಗಂಡ ಸಿದ್ದಾರ್ಥ್ ದಾಸ್ ನಿಂದ ಪಡೆದ ಸ್ವಂತ ಮಗಳನ್ನೇ ಇಂದ್ರಾಣಿ ಮುಖರ್ಜಿ ಏಪ್ರಿಲ್ 24 2012ರಲ್ಲಿ ತನ್ನ ಮಾಜಿ ಪತಿ (ಎರಡನೇ ಪತಿ) ಸಂಜೀವ್ ಖನ್ನಾ ಮತ್ತು ಕಾರಿನ ಚಾಲಕ ಶ್ಯಾಮ್ವರ್ ರೈ ಸಹಾಯದಿಂದ ಕಾರಿನಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು. ಈ ಪ್ರಕರಣ 3 ವರ್ಷಗಳ ನಂತರ ಬೆಳಕಿಗೆ ಬಂದಿತ್ತು. ಹಾಗಾಗಿ ಇಂದ್ರಾಣಿ ಅವರನ್ನು ಪೊಲೀಸರು 2015ರಲ್ಲಿ ಬಂಧಿಸಿದ್ದರು. 2017ರಲ್ಲಿ ಜೈಲಿನಲ್ಲಿರುವಾಗಲೇ ಆಕೆಯ ಮೂರನೇ ಪತಿ ಪೀಟರ್ ಮುಖರ್ಜಿ ವಿಚ್ಚೇದನ ಪಡೆದುಕೊಂಡಿದ್ದಾರೆ. 2022ರಲ್ಲಿ ಸುಪ್ರೀಂ ಕೋರ್ಟ್ ಬೇಲ್ ನೀಡಿದ್ದು, ಈಗ ಇಂದ್ರಾಣಿ ಮುಂಬೈನ ಮಾರ್ಲೋ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆನ್ನಲಾಗಿದೆ.
ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!
ಶೀನಾ ಬೋರಾ ಯಾರು?: 1986 ರಲ್ಲಿ ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಭೇಟಿಯಾಗಿ ಮದುವೆಯಾಗಿದ್ದರು. ಇವರಿಗೆ ಶೀನಾ ವೋರಾ 1987 ಫೆಬ್ರವರಿಯಲ್ಲಿ ಗುವಾಹಟಿಯಲ್ಲಿ ಜನಿಸಿದರು. ಸೆಪ್ಟೆಂಬರ್ 1988 ರಲ್ಲಿ ಮಿಖಾಯಿಲ್ ಎಂಬ ಮಗ ಜನಿಸಿದ. ಶೀನಾ ತನ್ನ ಆರಂಭಿಕ ಶಿಕ್ಷಣವನ್ನು ಗುವಾಹಟಿಯ ಶಾಲೆಯಲ್ಲಿ ಮಾಡಿದಳು. ಬಳಿಕ ತಾಯಿ ಇಂದ್ರಾಣಿ ಜತೆ ಮುಂಬೈಗೆ ಬಂದಿದ್ದಳು. ಇದಕ್ಕೂ ಮುನ್ನ ಕೋಲ್ಕತ್ತಾದಲ್ಲಿದ್ದ ಇಂದ್ರಾಣಿಗೆ ಉದ್ಯಮಿ ಸಂಜೀವ್ ಖನ್ನಾ ಪರಿಚಯವಾಯ್ತು ಬಳಿಕ ಮದುವೆಯಾಯ್ತು. ಸಂಜೀವ್ ನಿಂದ ದೂರಾದ ಬಳಿಕ ಮುಂಬೈಗೆ ಮಗಳು ಶೀನಾ ಜೊತೆ ಬಂದ ಇಂದ್ರಾಣಿಗೆ ಸ್ಟಾರ್ ಇಂಡಿಯಾದ ಸಿಇಒ ಪೀಟರ್ ಮುಖರ್ಜಿ ಅವರನ್ನು ಭೇಟಿಯಾದರು. ನಂತರ ಇಬ್ಬರೂ 2002 ರಲ್ಲಿ ವಿವಾಹವಾದರು. ಶೀನಾ ಬೋರಾ ತನ್ನ ಸಹೋದರಿ ಎಂದು ಇಂದ್ರಾಣಿ ತನ್ನ ಮೂರನೇ ಪತಿ ಪೀಟರ್ ಮುಖರ್ಜಿಗೆ ಹೇಳಿದ್ದರು ಎನ್ನಲಾಗಿದೆ.