ಬೆಂಗಳೂರು(ಜು.25):  ಕಳೆದ 9 ತಿಂಗಳಿಂದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಕಾಂಪ್ಯಾಕ್ಟರ್‌ ವಾಹನ ಚಾಲಕರು ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಮುಂದಿನ 24 ತಾಸಿನೊಳಗೆ ವೇತನ ಪಾವತಿಸದಿದ್ದರೆ, ಕಚೇರಿ ಎದರು ಕಸ ಸುರಿದು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಕಸ ಸಾಗಣೆ ಮಾಡುವ ಬಿಬಿಎಂಪಿ ಕಾಂಪ್ಯಾಕ್ಟರ್‌ಗಳ ವಾಹನ ಚಾಲಕರು ಶುಕ್ರವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ 9 ತಿಂಗಳಿಂದ ವೇತನ ನೀಡದ ಕಾರಣ ಸಂಷ್ಟಕ್ಕೆ ಸಿಲುಕಿದ್ದೇವೆ. ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಗುತ್ತಿಗೆದಾರರನ್ನು ಕೇಳಿದರೆ ಬಿಬಿಎಂಪಿ ಅಧಿಕಾರಿಗಳತ್ತ ಬೆರಳು ತೋರಿಸುತ್ತಾರೆ ಎಂದು ದೂರಿದ್ದಾರೆ.

ಕೊರೋನಾ ಸೋಂಕಿತಳ ಮೃತದೇಹ ನೀಡಲು 9 ಲಕ್ಷ ಕೇಳಿದರು!

ಅಧಿಕಾರಿಗಳು ಮೇಲಾಧಿಕಾರಿಗಳನ್ನು ಕೇಳುವಂತೆ ಹೇಳುತ್ತಾರೆ. ಇದರಿಂದ ಅಲೆದು ಅಲೆದು ಸಾಕಾಗಿದೆ. ಒಂದೆರಡು ತಿಂಗಳ ವೇತನವಾದರೆ ಅನುಸರಿಸಿಕೊಂಡು ಹೋಗಬಹುದು. ಆದರೆ, 9 ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಚಾಲಕರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.