Asianet Suvarna News Asianet Suvarna News

ಶಾಲೆ ಆರಂಭಕ್ಕೆ ಪಾಲಿಕೆ ಸಿದ್ಧತೆ: ಥರ್ಮಲ್‌ ಸ್ಕ್ಯಾನರ್‌ ವಿತರಣೆ

ವಿದ್ಯಾರ್ಥಿ ಮತ್ತು ಶಿಕ್ಷಕರ ದೈಹಿಕ ಉಷ್ಣಾಂಶ ತಪಾಸಣೆಗೆ ಪಾಲಿಕೆಗೆ ಸೇರಿದ 32 ಪ್ರೌಢಶಾಲೆ ಮತ್ತು 15 ಪದವಿ ಪೂರ್ವ ಕಾಲೇಜುಗಳಿಗೆ ಬಿಬಿಎಂಪಿ 700 ಥರ್ಮಲ್‌ ಸ್ಕ್ಯಾನರ್ ವಿತರಿಸಿದೆ.

BBMP Preparations to reopen schools dpl
Author
Bangalore, First Published Dec 29, 2020, 9:05 AM IST

ಬೆಂಗಳೂರು(ಡಿ.29): ಜ.1ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ದೈಹಿಕ ಉಷ್ಣಾಂಶ ತಪಾಸಣೆಗೆ 700 ಥರ್ಮಲ್‌ ಸ್ಕ್ಯಾನರ್ ಪಾಲಿಕೆಗೆ ಸೇರಿದ 32 ಪ್ರೌಢಶಾಲೆ ಮತ್ತು 15 ಪದವಿ ಪೂರ್ವ ಕಾಲೇಜುಗಳಿಗೆ ಬಿಬಿಎಂಪಿ ವಿತರಿಸಿದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಬಿಬಿಎಂಪಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರೊಂದಿಗೆ ಬಿಬಿಎಂಪಿ ವಿಶೇಷ ಆಯುಕ್ತ ಜೆ.ಮಂಜುನಾಥ ಸಭೆ ನಡೆಸಿ, ತರಗತಿ ಆರಂಭಿಸುವುದಕ್ಕೆ ಸಂಬಂಧಿಸಿದ ಸಿದ್ಧತೆ ಮತ್ತು ಅನುಸರಿಸಬೇಕಾ ಕ್ರಮಗಳ ಬಗ್ಗೆ ಸೂಚಿಸಿದರು.

ವಾಕಿಂಗ್ ಮಾಡ್ತಿದ್ದ ಇನ್ಸ್‌ಪೆಕ್ಟರ್ ಪತ್ನಿಯ ಸರ ಕಳವು

ಈ ಕುರಿತು ಮಾತನಾಡಿದ ವಿಶೇಷ ಆಯುಕ್ತ ಜೆ. ಮಂಜುನಾಥ, ತರಗತಿಗಳು ಆರಂಭಗೊಂಡ ಬಳಿಕ ಶಾಲೆ ಮತ್ತು ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿ ಮತ್ತು ಶಿಕ್ಷಕರ ದೈಹಿಕ ಉಷ್ಣಾಂಶ ಪರೀಕ್ಷೆಗೆ 700 ಥರ್ಮಲ್‌ ಸ್ಕಾ್ಯನರ್‌ ವಿತರಣೆಗೆ ಸೂಚಿಸಲಾಗಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ 15 ರಿಂದ 20 ವಿದ್ಯಾರ್ಥಿಗಳ ಪ್ರತ್ಯೇಕ ತಂಡ ರಚನೆ ಮಾಡಿಕೊಂಡು ತರಗತಿಗಳನ್ನು ನಡೆಸುವುದಕ್ಕೆ ಬೇಕಾದ ಕೊಠಡಿ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕ್ಲೀವ್‌ ಲ್ಯಾಂಡ್‌ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಪಾಳಿಯಲ್ಲಿ ತರಗತಿ ನಡೆಸುವುದಕ್ಕೆ ಸೂಚಿಸಲಾಗಿದೆ. ಉಳಿದಂತೆ ಎಲ್ಲ ಶಾಲಾ-ಕಾಲೇಜುಗಳು ಕೊಠಡಿ ವ್ಯವಸ್ಥೆ ಇದೆ ಎಂದು ವಿವರಿಸಿದರು.

ಪ್ರತಿ ಶಾಲಾ -ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಅಥವಾ ಚಿತ್ರಕಲಾ ಶಿಕ್ಷಕರನ್ನು ಮೆಂಟರ್‌ಗಳಾಗಿ ನೇಮಿಸಲಾಗಿದ್ದು, ಅವರು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಲಿದ್ದಾರೆ. ಬಿಬಿಎಂಪಿಯ ಸುಮಾರು 600ಕ್ಕೂ ಅಧಿಕ ಶಿಕ್ಷಕರು ನಗರ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಪೈಕಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಸುಮಾರು 300ಕ್ಕೂ ಶಿಕ್ಷಕರನ್ನು ಕೋವಿಡ್‌ ಕೆಲಸದಿಂದ ಬಿಡುಗಡೆ ಮಾಡಲಾಗಿದ್ದು, ಅವರು ಬೋಧನೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಶಿಶು ವಿಹಾರ, ಪ್ರಾಥಮಿಕ ಶಾಲಾ ಶಿಕ್ಷಕರು ಕೋವಿಡ್‌ ಕಾರ್ಯದಲ್ಲಿ ಮುಂದುವರೆಯಲಿದ್ದಾರೆ. ಹತ್ತನೇ ತರಗತಿಯಲ್ಲಿ ಒಟ್ಟು 2,190 ಹಾಗೂ ದ್ವಿತೀಯ ಪಿಯುಸಿಯಲ್ಲಿ 2,070 ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios