ಬೆಂಗಳೂರು(ಡಿ.29): ವಾಯು ವಿಹಾರ ಮಾಡುತ್ತಿದ್ದ ಸಹಾಯಕ ಸಬ್‌ ಇನ್‌ಸ್ಪೆಕ್ಟರೊಬ್ಬರ (ಎಎಸ್‌ಐ) ಪತ್ನಿಯ ಸರವನ್ನು ದುಷ್ಕರ್ಮಿಗಳು ಕಸಿದುಕೊಂಡು ಹೋಗಿರುವ ಘಟನೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸುಶೀಲಮ್ಮ ಅವರು ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಎಎಸ್‌ಐಯೊಬ್ಬರ ಪತ್ನಿ ಸುಶೀಲಮ್ಮ, ಶುಕ್ರವಾರ ರಾತ್ರಿ ಮನೆ ಮುಂದೆ ವಾಯುವಿಹಾರ ಮಾಡುತ್ತಿದ್ದರು.

ಆ್ಯಪ್‌ ಮೂಲಕ ಸಾಲ ಕೊಟ್ಟು ಜನರಿಗೆ ಚೀನಾ ಕಂಪನಿ ಕಾಟ

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಸರ ಕಸಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು, ಕುತ್ತಿಗೆಗೆ ಕೈ ಹಾಕಿ 90 ಗ್ರಾಂ ತೂಕದ ಚಿನ್ನದ ಸರ ಎಳೆದಿದ್ದರು. ಅದು ಎರಡು ತುಂಡಾಗಿತ್ತು. ಆ ಪೈಕಿ 53 ಗ್ರಾಂ ತೂಕದ ಸರದ ಒಂದು ತುಂಡನ್ನು ಆರೋಪಿಗಳು ಕಿತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.