ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತದ ಬಿಬಿಎಂಪಿ ನಗರದ ನಾಗರಿಕರಿಗೆ ಜನಪರವಾದ ಬಜೆಟ್ ನೀಡುವುದರಲ್ಲಿ  ವಿಫಲವಾಗಿದೆ. ಸ್ವಂತ ಹಿತಾಸಕ್ತಿಗೆ ಬಜೆಟ್ ಮಂಡನೆ ಮಾಡಿದ್ದು,  2019-20 ನೇ ಸಾಲಿನ ಬಜೆಟ್‌ಗೆ ಕವಡೆ ಕಾಸಿನ  ಕಿಮ್ಮತ್ತಿಲ್ಲ. ಬಜೆಟ್ ಚರ್ಚೆ ಸಂದ ರ್ಭದಲ್ಲಿ ಆಯವ್ಯಯ ಹಿಂಪಡೆಯಬೇಕು ಎಂದು ಆಗ್ರಹಿಸುವು ದಾಗಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ
ತಿಳಿಸಿದ್ದಾರೆ.

ಸೋಮವಾರ  2019-20ನೇ ಸಾಲಿನ ಬಜೆಟ್ ಮಂಡ ನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಬಜೆಟ್ ಅನುದಾನ ಹಂಚಿಕೆಯಲ್ಲಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯ ರಿರುವ ವಾರ್ಡ್‌ಗಳಿಗೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ನಗರ ಉಸ್ತುವಾರಿ ಸಚಿವರಿಗೆ, ಮೇಯರ್, ಉಪಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕವಾಗಿ 905 ಕೋಟಿ ಮೀಸಲಿಡಲಾಗಿ ದೆ. ಕೆಎಂಸಿ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. 

ಯಾವ ಆಧಾರ ಮೇಲೆ ಸಚಿವರಿಗೆ, ಮೇಯರ್ ಮತ್ತು ಉಪಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಅನುದಾನ ಮೀಸಲಿಡಲಾಗಿದೆ ಎಂಬುದನ್ನು ಮೇಯರ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.