ಸಾಲು ಸಾಲು ಹಬ್ಬಗಳು: ಕಸ ವಿಲೇವಾರಿ ಸಿದ್ಧತೆಗೆ ಬಿಬಿಎಂಪಿ ಸೂಚನೆ
ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಕಸ ಉತ್ಪತ್ತಿ ಈ ಹಿಂದಿಗಿಂತ ಶೇ.50 ರಷ್ಟು ಕಡಿಮೆ ಉತ್ಪತ್ತಿಯಾಗುವ ಸಾಧ್ಯತೆ| ಕಸ ವಿಲೇವಾರಿಗೆ ಹೆಚ್ಚು ವಾಹನಗಳು ಅವಶ್ಯವಿದ್ದಲ್ಲಿ ನಿಯೋಜನೆ ಮಾಡಿಕೊಳ್ಳುವಂತೆ ತಿಳಿಸಿದ ಬಿಬಿಎಂಪಿ|
ಬೆಂಗಳೂರು(ಜು.31): ವರಮಹಾಲಕ್ಷ್ಮಿ, ಬಕ್ರೀದ್, ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ, ಆಯುಧ ಪೂಜೆ, ಈದ್‌ಮಿಲಾದ್, ವಿಜಯದಶಮಿ, ಬಲಿಪಾಡ್ಯಮಿ ಹೀಗೆ ಸರಣಿ ಹಬ್ಬಗಳು ಇರುವುದರಿಂದ ನಗರದಲ್ಲಿ ಕಸ ವಿಲೇವಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಕಸ ಉತ್ಪತ್ತಿ ಈ ಹಿಂದಿಗಿಂತ ಶೇ.50 ರಷ್ಟು ಕಡಿಮೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಆದರೂ ಕಸ ವಿಲೇವಾರಿಗೆ ಹೆಚ್ಚು ವಾಹನಗಳು ಅವಶ್ಯವಿದ್ದಲ್ಲಿ ನಿಯೋಜನೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಬೆಂಗಳೂರು: ಕೊರೋನಾ ನಡುವೆ ವರಮಹಾಲಕ್ಷ್ಮಿ ಹಬ್ಬ ಸಡಗರ
ಬಕ್ರೀದ್ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯವನ್ನು ಸಾಗಿಸಲು ಹೆಚ್ಚಿನ ವಾಹನಗಳ ಅಗತ್ಯತೆ ಇದ್ದರೆ, ಹಬ್ಬಕ್ಕೆ ಮುಂಚಿತವಾಗಿ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಪ್ರಾಣಿ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಕೋಗಿಲು ಬಂಡೆಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಹಾಗೂ ವಿಲೇವಾರಿಗೊಳಿಸುವ ಪ್ರತಿ ವಾಹನದ ಜಿಯೋ ಮ್ಯಾಪಿಂಗ್ ಆಧಾರದ ಮೇಲೆ ಹಣ ಪಾವತಿ ಮಾಡುವಂತೆ ನಿರ್ದೇಶಿಸಿದ್ದಾರೆ.