ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಬೀದಿನಾಯಿಗಳ ಗಣತಿಯಲ್ಲಿ ಮೊದಲ ದಿನ 4 ಸಾವಿರ ಬೀದಿ ನಾಯಿಗಳ ಗಣತಿ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾರವಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಜು.12) : ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಬೀದಿನಾಯಿಗಳ ಗಣತಿಯಲ್ಲಿ ಮೊದಲ ದಿನ 4 ಸಾವಿರ ಬೀದಿ ನಾಯಿಗಳ ಗಣತಿ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾರವಿಕುಮಾರ್ ತಿಳಿಸಿದ್ದಾರೆ.
ಸಂತಾನಹರಣ ಚಿಕಿತ್ಸೆ ಮತ್ತು ಆ್ಯಂಟಿ ರೇಬಿಸ್ ಲಸಿಕೆ ಕಾರ್ಯಕ್ರಮಗಳ ಯಶಸ್ವಿಗೊಳಿಸುವ ಉದ್ದೇಶದಿಂದ ನಗರದಲ್ಲಿ ಬೀದಿ ನಾಯಿಗಳ ಗಣತಿಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ. ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 70 ಸಿಬ್ಬಂದಿ ಮತ್ತು ಬಿಬಿಎಂಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿಸಲಾಗಿದೆ. ತಲಾ ಇಬ್ಬರಂತೆ ಒಂದು ತಂಡ ರಚಿಸಲಾಗಿದೆ. ಮಂಗಳವಾರ 50 ತಂಡಗಳು ನಗರದ ಪ್ರಮುಖ ಸ್ಥಳದಲ್ಲಿ ಬೈಕ್‌ನಲ್ಲಿ ತೆರಳಿ ಗಣತಿ ನಡೆಸಿ ನಾಯಿ ಫೋಟೋವನ್ನು ಆ್ಯಪ್‌ನಲ್ಲಿ ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ 6ರಿಂದ 8.30ರವರೆಗೆ ನಡೆಸಲಾದ ಗಣತಿಯಲ್ಲಿ ಒಟ್ಟು 4 ಸಾವಿರ ಬೀದಿ ನಾಯಿಗಳ ಗಣತಿ ಆಗಿದೆ. ಮುಂದಿನ 13 ದಿನ ಇದೇ ರೀತಿ ಗಣತಿ ನಡೆಸಲಾಗುವುದು ಎಂದು ತಿಳಿಸಿದರು.
