ಬೆಂಗಳೂರು(ಮೇ.29): ಹೊರ ರಾಜ್ಯಗಳಿಂದ ಚೆಕ್‌ಪೋಸ್ಟ್‌ಗಳ ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ನಗರಕ್ಕೆ ನುಸುಳಿದ 80 ಮಂದಿಯನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಮಾಡಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಚಕ್‌ ಪೋಸ್ಟ್‌ಗಳ ತಪಾಸಣಾ ಸಿಬ್ಬಂದಿ ಕಣ್ತಪ್ಪಿಸಿ ನಗರಕ್ಕೆ ನುಸುಳಿದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಈವರೆಗೆ 80 ಅನಧಿಕೃತ ಪ್ರಯಾಣಿಕ ಬಗ್ಗೆ ದೂರುಗಳು ಬಂದಿದ್ದು, ಅವರಿಂದ ಪ್ರಯಾಣ ಇತಿಹಾಸ ಮಾಹಿತಿ ಪಡೆದು ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ ಎಂದರು.

ವಿಮಾನ ಏರಿದ್ಮೇಲೆ ಒಂದು, ಇಳಿದ್ಮೇಲೆ ಇನ್ನೊಂದು: ಮಹಿಳೆಯ ಕಿರಿಕ್

ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತೆ ತಿಳಿಸಿದೆ. ಒಂದು ವೇಳೆ ಕ್ವಾರಂಟೈನ್‌ ಬಿಟ್ಟು ಹೊರಗೆ ಸಂಚರಿಸಿದಲ್ಲಿ, ಅವರ ಮೇಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.