Asianet Suvarna News Asianet Suvarna News

ಬ್ಯಾಂಕ್‌ಗೆ ವಂಚನೆ ಪ್ರಕರಣ; ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ!

ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿ ಮಾಡದೆ ವಂಚನೆ ಮಾಡಿರುವ ಆರೋಪ ಹಿನ್ನೆಲೆ  ವಿವಿಪುರಂ ಠಾಣೆಯಲ್ಲಿ ದಾಖಲಾಗಿದ್ದ 420 ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ವಂಚನೆ ಪ್ರಕರಣದಲ್ಲಿ ತನಿಖೆ ನಡೆಸಲಿರುವ ಸಿಐಡಿ. ಇದುವರೆಗೂ ಮರುಪಾವತಿ ಮಾಡದಿರುವುದರಿಂದ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ.

Bank Loan fraud case Ramesh Jarakiholi case transferred to CID at Bengaluru rav
Author
First Published Jan 19, 2024, 7:30 PM IST

ಬೆಂಗಳೂರು (ಜ.19): ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿ ಮಾಡದೆ ವಂಚನೆ ಮಾಡಿರುವ ಆರೋಪ ಹಿನ್ನೆಲೆ  ವಿವಿಪುರಂ ಠಾಣೆಯಲ್ಲಿ ದಾಖಲಾಗಿದ್ದ 420 ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ವಂಚನೆ ಪ್ರಕರಣದಲ್ಲಿ ತನಿಖೆ ನಡೆಸಲಿರುವ ಸಿಐಡಿ. ಇದುವರೆಗೂ ಮರುಪಾವತಿ ಮಾಡದಿರುವುದರಿಂದ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ.

 ಶಾಸಕ ರಮೇಶ್ ಜಾರಕಿಹೊಳಿ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ನ ಇಬ್ಬರು ಪದಾಧಿಕಾರಿಗಳಾದ ವಸಂತ್ ವಿ ಪಾಟೀಲ್, ಶಂಕರ್ ಪವಾಡೆ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಪ್ರಕರಣದಲ್ಲಿ A1 ಆರೋಪಿಯಾರುವ ರಮೇಶ್ ಜಾರಕಿಹೊಳಿ ವಿರುದ್ಧ ಐಪಿಸಿ 420 ಪ್ರಕರಣ ದಾಖಲಿಸಿದ್ದ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್.. ಆ ಪ್ರಕರಣದ ಇದೀಗ ಸಿಐಡಿಗೆ ವಹಿಸಲಾಗಿದೆ.

ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತೆ? ರಮೇಶ್ ಜಾರಕಿಹೊಳಿ ವಾಗ್ದಾಳಿ

ಪ್ರಕರಣದ ಹಿನ್ನೆಲೆ:

ಬೆಳಗಾವಿಯ ಗೋಕಾಕ್‌ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿ ಸ್ಥಾಪನೆ, ವಿಸ್ತರಣೆ ನಿರ್ವಹಣೆಗಾಗಿ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಿಂದ ಕಂಪನಿ ಹೆಸರಲ್ಲಿ ಸಾಲ ಪಡೆಯಲಾಗಿತ್ತು.  2013 ರಿಂದ 2017 ರವರೆಗೆ ಒಟ್ಟು 232 ಕೋಟಿ 88 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಆದರೆ ಇದುವರೆಗೆ ಸಾಲದ ಹಣ ಪಾವತಿ ಮಾಡಿರಲಿಲ್ಲ. 2023 ರ ವೇಳೆಗೆ 439 ಕೋಟಿ 7 ಲಕ್ಷ ಸಾಲದ ಮೊತ್ತ ಬಾಕಿ ಉಳಿದಿದೆ.

 

ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಿತ್ತುಕೊಂಡವರು ಯಾರು..?

ಸಾಲ ಕೊಡುವಾಗ ಬೋರ್ಡ್ ನ ನಿರ್ದೇಶಕರನ್ನು ಬದಲಾಯಿಸದಂತೆ ಷರತ್ತು ವಿಧಿಸಿ ಬ್ಯಾಂಕ್ ಸಾಲ ನೀಡಿದ್ರು. ಆದರೆ ಇತ್ತಿಚೆಗಷ್ಟೆ ಬೋರ್ಡ್ ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡದೆ, ಮೋಸ ಮಾಡುವ ಉದ್ದೇಶದಿಂದ ಯಾವುದೇ ಮಾಹಿತಿ ನೀಡದೇ ಆಡಳಿತ ಮಂಡಳಿ ಹುದ್ದೆಗಳಿಂದ ಹೊರಬರುವ ಮೂಲಕ ಬ್ಯಾಂಕ್‌ಗೆ ನಂಬಿಕೆದ್ರೋಹ ಮಾಡಿದ್ದಾರೆಂದು ಆರೋಪಿಸಿ  ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಎಂಬುವವರು ಶಾಸಕ ರಮೇಶ್ ಜಾರಕಿಹೊಳಿ, ಮೂವರು ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣ ವಿವಿ ಪುರಂ ಠಾಣೆಯಿಂದ ಸಿಐಡಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಇನ್ನಷ್ಟು ತನಿಖೆಯಿಂದ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾದಂತಾಗಿದೆ.

Follow Us:
Download App:
  • android
  • ios