* ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟ* ಅಧ್ಯಕ್ಷರಾಗಿ ಶ್ರೀಧರ್, ಬೈದನಮನೆ ಉಪಾಧ್ಯಕ್ಷರಾಗಿ ನೇಮಕ* ಹಮೀದ್ ಪಾಳ್ಯ ವಿರುದ್ದ 200 ಮತಗಳ ಅಂತರದಲ್ಲಿ ಆನಂದ್ ಬೈದನಮನೆ ಗೆಲುವು
ಬೆಂಗಳೂರು, (ಜೂನ್.12): ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ (Bangalore Press Club Election Result) ಇಂದು(ಭಾನುವಾರ) ಪ್ರಕಟವಾಗಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಧರ್ , ಉಪಾಧ್ಯಕ್ಷರಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ವರದಿಗಾರ ಆನಂದ್ ಪಿ. ಬೈದನಮನೆ ಆಯ್ಕೆಯಾಗಿದ್ದಾರೆ.
Digital Media Forum : ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ಲಾಂಚ್
ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ ಹಾಗೂ ಕಾರ್ಯದರ್ಶಯಾಗಿ ದೊಡ್ಡ ಬೊಮ್ಮಯ್ಯ, ಜಂಟಿ ಕಾರ್ಯದರ್ಶಿ- ಮಹಾಂತೇಶ್ ಹಿರೇಮಠ, ಹಾಗೂ ಖಜಾಂಚಿ- ಮೋಹನ್ ನೇಮಕವಾಗಿದ್ದಾರೆ.
ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯೆರಾಗಿ ರೋಹಿಣಿ ಹಾಗೂ ಮಿನಿ ತೇಜಸ್ವಿ ಅವರು ಗೆಲುವಿನ ನಗೆ ಬೀರಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಹಮೀದ್ ಪಾಳ್ಯ ವಿರುದ್ದ ಆನಂದ್ ಬೈದನಮನೆ ಅವರು 200 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಅಧ್ಯಕ್ಷರಾದ ಶ್ರೀಧರ್ ಅವರಿಗೆ 302 ಮತ ಪಡೆದರೆ, ಕಮಿಟಿ ಸದಸ್ಯೆ ರೋಹಿಣಿಯವರಿಗೆ ಅತಿ ಹೆಚ್ಚು 307 ಮತ ಪಡೆದಿದ್ದಾರೆ.
