Asianet Suvarna News Asianet Suvarna News

ಬೆಂಗಳೂರು ದೇಶದ ನಂ.1 ಸಮೃದ್ಧ ನಗರ!

ಬೆಂಗಳೂರು ದೇಶದ ನಂ.1 ಸಮೃದ್ಧ ನಗರ! ದೆಹಲಿ, ಮುಂಬೈಗೆ ನಂತರದ ಸ್ಥಾನ| 113 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ 3 ನಗರಗಳಿಗಷ್ಟೇ ಸ್ಥಾನ| ಜಾಗತಿಕವಾಗಿ ಬೆಂಗಳೂರಿಗೆ 83ನೇ ರಾರ‍ಯಂಕ್‌: ಬಾಸ್ಕ್‌ ಸೂಚ್ಯಂಕ

Bangalore Is India Top Ranked City In New Global Prosperity Index
Author
Bangalore, First Published Nov 23, 2019, 7:49 AM IST

ನವದೆಹಲಿ[ನ.23]: ಭಾರತದ ಸಿಲಿಕಾನ್‌ ವ್ಯಾಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂಬೆಲ್ಲಾ ಹಿರಿಮೆಗಳಿಗೆ ಪಾತ್ರವಾಗಿರುವ ಕರುನಾಡಿನ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಗರಿ ಪ್ರಾಪ್ತವಾಗಿದೆ. ಸಮಗ್ರ ಪ್ರಮಾಣದಲ್ಲಿ ಸಮೃದ್ಧಿ ಹೊಂದಿರುವ ಭಾರತದ ನಗರಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದೆ.

ಬಾಸ್ಕ್‌ ಇನ್ಸಿ$್ಟಟ್ಯೂಟ್ಸ್‌ ಎಂಬ ಸಂಸ್ಥೆಯು ಆಸ್ಪ್ರೇಲಿಯಾದ ಡಿ ಆ್ಯಂಡ್‌ ಎಲ್‌ ಪಾರ್ಟನರ್ಸ್‌ ಎಂಬ ಸಂಸ್ಥೆಯ ಸಹಯೋಗದಲ್ಲಿ ಜಾಗತಿಕ ‘ಸಮಗ್ರ ಸಮೃದ್ಧಿ’ ಸೂಚ್ಯಂಕವನ್ನು ಸಿದ್ಧಪಡಿಸಿದೆ. ವಿಶ್ವದ 113 ನಗರಗಳಿಗೆ ಸೀಮಿತವಾಗಿ ಈ ಸೂಚ್ಯಂಕ ತಯಾರಾಗಿದ್ದು, ಅದರಲ್ಲಿ ಭಾರತದ ಮೂರು ನಗರಗಳಷ್ಟೇ ಸ್ಥಾನ ಪಡೆದಿವೆ. ದೆಹಲಿ ಹಾಗೂ ಮುಂಬೈನಂತಹ ಮೆಟ್ರೋ ನಗರಗಳನ್ನೂ ಬೆಂಗಳೂರು ಹಿಂದಿಕ್ಕಿದೆ.

113 ರಾಷ್ಟ್ರಗಳ ಪಟ್ಟಿಯಲ್ಲಿ ಬೆಂಗಳೂರು 83ನೇ ಸ್ಥಾನದಲ್ಲಿದ್ದರೆ, ದೆಹಲಿ 101 ಹಾಗೂ ಮುಂಬೈ 107ನೇ ಸ್ಥಾನದಲ್ಲಿವೆ. ಜೂರಿಕ್‌ ಪ್ರಥಮ ಸ್ಥಾನದಲ್ಲಿದ್ದರೆ, ವಿಯೆನ್ನಾ, ಕೋಪೆನ್‌ಹೇಗನ್‌ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ರಾರ‍ಯಂಕ್‌ ಗಳಿಸಿವೆ. ಟಾಪ್‌ 10ರಲ್ಲಿ ಲಕ್ಸಂಬರ್ಗ್‌ (4), ಹೆಲ್ಸಿಂಕಿ (5), ತೈಪೇ (6), ಓಸ್ಲೋ (7), ಒಟ್ಟಾವಾ (8), ಕೀಲ್‌ (9) ಹಾಗೂ ಜಿನೇವಾ 10ನೇ ಸ್ಥಾನ ಪಡೆದಿವೆ.

ಆರ್ಥಿಕ ಬೆಳವಣಿಗೆ ಹಾಗೂ ಒಟ್ಟು ಜನಸಂಖ್ಯೆಯಲ್ಲಿ ಆರ್ಥಿಕತೆ ಹೇಗೆ ಸಮಾನವಾಗಿ ಹಂಚಿಕೆಯಾಗಿದೆ ಎಂಬುದೇ ‘ಸಮಗ್ರ ಸಮೃದ್ಧಿ ಸೂಚ್ಯಂಕ’ದ ಮಾನದಂಡ. ಅನೇಕ ನಗರಗಳು ಶ್ರೀಮಂತವಾಗಿದ್ದರೂ ಸಮಗ್ರ ಸಮೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಅಂದರೆ ಜನರ ಮಧ್ಯೆ ಆರ್ಥಿಕತೆ ಸಮಾನ ಹಂಚಿಕೆ ಆಗಿಲ್ಲ.

ವಿಶ್ವದ ಟಾಪ್‌ 10 ಶ್ರೀಮಂತ ನಗರಗಳು ಸಮಗ್ರ ಸಮೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಶ್ರೀಮಂತ ನಗರಗಳಾದ ಲಂಡನ್‌ ಈ ಸೂಚ್ಯಂಕದಲ್ಲಿ 33ನೇ ಸ್ಥಾನ ಪಡೆದಿದ್ದರೆ, ನ್ಯೂಯಾರ್ಕ್ 38ನೇ ಸ್ಥಾನ ಪಡೆದಿದೆ ಎಂದು ಸೂಚ್ಯಂಕ ವರದಿ ಹೇಳಿದೆ. ಫೋಬ್ಸ್‌ರ್‍ ಸಿದ್ಧಪಡಿಸಿದ್ದ 2019ರ ವಿಶ್ವದ ಸಿರಿವಂತ ನಗರಗಳ ಪಟ್ಟಿಯ ಟಾಪ್‌-10ರಲ್ಲಿ ಮುಂಬೈ ಇದ್ದರೂ ಸಮಗ್ರ ಸಮೃದ್ಧಿ ಸೂಚ್ಯಂಕದಲ್ಲಿ 107ನೇ ಸ್ಥಾನದಲ್ಲಿರುವುದು ಇದರ ಇನ್ನೊಂದು ನಿದರ್ಶನ.

ಬಡತನ ಹಾಗೂ ಅಸಮಾನತೆಯ ಕಾರಣದಿಂದ ಆಫ್ರಿಕಾ, ಏಷ್ಯಾ ಹಾಗೂ ದಕ್ಷಿಣ ಅಮೆರಿಕಗಳ ನಗರಗಳು ಈ ಪಟ್ಟಿಯ ಕೊನೆಯಲ್ಲಿ ಸ್ಥಾನ ಪಡೆದಿವೆ.

ದೇಶದ ಸಮೃದ್ಧ ನಗರಗಳು

1. ಬೆಂಗಳೂರು

2. ದೆಹಲಿ

3. ಮುಂಬೈ

ವಿಶ್ವದ ಸಮೃದ್ಧ ಸಿಟಿಗಳು

1. ಜೂರಿಕ್‌

2. ವಿಯೆನ್ನಾ

3. ಕೋಪೆನ್‌ಹೇಗನ್‌

4. ಲಕ್ಸಂಬರ್ಗ್‌

5. ಹೆಲ್ಸಿಂಕಿ

ಜಾಗತಿಕ ಪಟ್ಟಿಯಲ್ಲಿ ಭಾರತ

ಬೆಂಗಳೂರು- 83

ದೆಹಲಿ- 101

ಮುಂಬೈ- 107

Follow Us:
Download App:
  • android
  • ios