ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿರುವ ಈದ್ಗಾ ಮಸೀದಿ ಈಗ ಕೋವಿಡ್‌ ಕೇರ್ ಸೆಂಟರ್ ಆಗಿ ಪರಿವರ್ತನೆಗೊಂಡಿದೆ. ಶಿಹಾಬ್ ತಂಗಳ್ ಸೆಂಟರ್ ಫಾರ್ ಹ್ಯುಮಾನಿಟಿ ಮತ್ತು ಈದ್ಗಾ ಮಸೀದಿಯ ಸಹಯೋಗದೊಂದಿಗೆ ಸಿದ್ಧಗೊಂಡಿರುವ ಈ ಕೇಂದ್ರದಲ್ಲಿ 38 ಬೆಡ್‌ಗಳ ವ್ಯವಸ್ಥೆ ಇದೆ.

ಹೊಸೂರು ರಸ್ತೆಯಲ್ಲಿರುವ ಸಫಾ ಮೆಡಿಕ್ಯೂರ್ ಆಸ್ಪತ್ರೆಯು ವೈದ್ಯಕೀಯ ಸೇವೆ ಒದಗಿಸಲಿದ್ದು, ಆಮ್ಲಜನಕ (SpO2 ) ಮಟ್ಟ  90ಕ್ಕಿಂತ ಹೆಚ್ಚಿರುವ ಸೋಂಕಿತರನ್ನು ಮಾತ್ರ ದಾಖಲಿಸಲಾಗುತ್ತದೆ. ಐಎಎಸ್‌ ಅಧಿಕಾರಿ ಪಿ.ಸಿ. ಜಾಫರ್ ಮುತವರ್ಜಿಯಿಂದ ಆರಂಭವಾಗಿರುವ ಈ ಕೇಂದ್ರದಲ್ಲಿ ಸೋಂಕಿತರಿಗೆ 24X7 ವೈದ್ಯಕೀಯ ಸೌಲಭ್ಯಗಳು ಲಭಿಸಲಿವೆ.

ಹಿರಿಯರಾ? ಯುವಕರಾ?: ಯಾರ ಜೀವ ಉಳಿಸೋದು? ನೈತಿಕ ಸಂದಿಗ್ಧತೆಯಲ್ಲಿ ವೈದ್ಯ ಸಮೂಹ!

ಸೋಂಕಿತರು ಮೊದಲು ಸಫಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೊಳಗಾಗಬೇಕು. ಸೋಂಕಿತರ ಆರೋಗ್ಯ ಸ್ಥಿತಿ ಮತ್ತು ಸೋಂಕಿನ ತೀವ್ರತೆಯ ಆಧಾರದಲ್ಲಿ, ತಜ್ಞರ ವೈದ್ಯರ ಸೂಚನೆಯ ಮೇರೆಗೆ ಕೇರ್‌ ಸೆಂಟರ್‌ಗೆ ದಾಖಲಾಗಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಹಾನ್ಸ್‌ ಪಕ್ಕದಲ್ಲಿರುವ  ಸಫಾ ಮೆಡಿಕ್ಯೂರ್‌ ಆಸ್ಪತ್ರೆಯನ್ನು(ಫೋ: 080 42525000) ಸಂಪರ್ಕಿಸಬಹುದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona