ಬೆಂಗಳೂರು(ನ.05): ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕಿನಿಂದ ಕೋಟ್ಯಂತರ ರುಪಾಯಿ ಸಾಲ ಪಡೆದಿದ್ದರೂ ಸಾಲ ಮರುಪಾವತಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಕಂಪನಿಯ ಲೆಕ್ಕ ಪತ್ರದಲ್ಲಿ ತೋರಿಸಿದ ಆರೋಪದ ಮೇಲೆ ‘ಒಪ್ಟೊಸಕ್ರ್ಯೂಟ್‌’ ಕಂಪನಿ ವಿರುದ್ಧ ಹಲಸೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂಬೈನ ನಾರಿಮನ್‌ ಪಾಯಿಂಟ್‌ ಡಿಬಿಎಸ್‌ ಶಾಖೆಯ ಹಿರಿಯ ಅಧಿಕಾರಿ ನಿತಿನ್‌ ಪರ್ಮಾರ್‌ ಎಂಬುವರು ಕೊಟ್ಟದೂರಿನ ಮೇರೆಗೆ ಒಪ್ಟೊಕಂಪನಿಯ ವರ್ತೂರಿನ ವಿನೋದ್‌ ರಾಮ್‌ ನಾನಿ, ಕ್ಯಾಲಿಫೋರ್ನಿಯಾದ ಜಯೇಶ್‌ ಪಟೇಲ್‌, ಮುಂಬೈನ ಸುಲೈಮನ್‌ ಆಡಮ್‌, ಜೆಪಿ ನಗರದ ಗೊಟ್ಟಿಗೆರೆ ಚಂದ್ರಶೇಖರ್‌ ಸೋಮದಾಸ್‌, ಮಹಾರಾಷ್ಟ್ರದ ಥಾಣೆಯ ರಾಜ್‌ಕುಮಾರ್‌ ತುಳಸಿದಾಸ್‌ ರೈ ಸಿಂಘಾನಿ, ಅಮೆರಿಕಾದ ಥಾಮಸ್‌ ಡೈಟಿಕರ್‌, ಬೆಂಗಳೂರಿನ ನಂಜಪ್ಪಯ್ಯ ಮಡಗೊಂಡಪಲ್ಲಿ ರಾಮು, ರಂಗಲಕ್ಷ್ಮೇ ಶ್ರೀನಿವಾಸ್‌ ಹಾಗೂ ಲೆಕ್ಕ ಪರಿಶೋಧಕ ಬಿ.ವಿ.ಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ

ಸಿಂಗಾಪುರ ಮೂಲದ ಬಹುರಾಷ್ಟ್ರೀಯ ಬ್ಯಾಂಕ್‌ ಡಿಬಿಎಸ್‌ ತನ್ನ ಶಾಖಾ ಕಚೇರಿ ಹಲಸೂರು ರಸ್ತೆಯಲ್ಲಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಒಪ್ಟೊಸಕ್ರ್ಯೂಟ್‌ ಕಂಪನಿಯು ವೈದ್ಯಕೀಯ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ. 2008ರಲ್ಲಿ ತನ್ನ ವ್ಯವಹಾರಕ್ಕಾಗಿ ಡಿಬಿಎಸ್‌ನಿಂದ ಕೋಟ್ಯಂತರ ರುಪಾಯಿ ಸಾಲ ಪಡೆದಿತ್ತು. 2016ರ ಜು.1ಕ್ಕೆ ಅಸಲು ಮತ್ತು ಬಡ್ಡಿ ಸೇರಿ ಸಾಲದ ಮೊತ್ತ .178 ಕೋಟಿ ಆಗಿತ್ತು. ಸಾಲ ಮರು ಪಾವತಿಸದೆ ಕಂಪನಿ ಉಳಿಸಿಕೊಂಡಿದೆ.

ಕುಷ್ಟಗಿ: 10 ರು. ನಾಣ್ಯ ತಿರಸ್ಕರಿಸುವ ಬ್ಯಾಂಕ್‌ಗಳಿಗೆ ದಂಡ.

ಸಿಂಗಾಪುರದಲ್ಲಿರುವ ಕಂಪನಿ ಒಡೆತನದ ಆಸ್ತಿ ಮಾರಾಟ ಮಾಡಿ ಸಾಲ ತೀರಿಸಿರುವುದಾಗಿ ಕಂಪನಿಯ ಲೆಕ್ಕ ಪತ್ರದಲ್ಲಿ ತೋರಿಸಿದೆ. ಇದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.