ಬೆಂಗಳೂರು(ಜೂ.25): ಮಹಾಮಾರಿ ಕೊರೋನಾ ವೈರಸ್‌ ನಗರದಲ್ಲಿನ ಜನತೆಗೆ ದಿನೇ ದಿನೇ ಹೆಚ್ಚಿನ ಕಾಟ ಕೊಡುತ್ತಿದೆ. ಹೌದು, ಇದರಿಂದ ಜನರು ಮನೆ ಬಿಟ್ಟು ಹೊರ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಕೊರೋನಾ ಪ್ರಕರಣಗಳು ಶರವೇಗದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮಾಡಿ ಎಂಬ ಕೂಗು ಸಹ ಕೇಳಿ ಬರುತ್ತಿದೆ.

ಕೊರೋನಾ ವೈರಸ್‌ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಬನಶಂಕರಿ ಅಮ್ಮನವರ ದೇವಸ್ಥಾನ ಬಂದ್ ಆಗಿದೆ. ಹೌದು, ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನವನ್ನ ಬಂದ್‌ ಮಾಡಲು ದೇವಾಲಯದ ಅಡಳಿತ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಸುತ್ತೋಲೆಯೊಂದನ್ನ ಕೂಡ ಹೊರಡಿಸಿದೆ. 

ಕೊರೋನಾ ಕಾಟದ ಮಧ್ಯೆ SSLC ಪರೀಕ್ಷೆ ಆರಂಭ, ವೈರಸ್‌ ಭಯವಿಲ್ಲದೆ ಎಕ್ಸಾಮ್‌ಗೆ ಬಂದ ವಿದ್ಯಾರ್ಥಿಗಳು

ವಾರದಲ್ಲಿ ಮೂರು ದಿನ ಅಮ್ಮನವರ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನ ನಿಷೇಧಿಸಲಾಗಿದೆ. ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ದೇವಸ್ಥಾನಕ್ಕೆ ಬಕ್ತರು ಬರುವ ಹಾಗಿಲ್ಲ. ಅಮವಾಸೆ ಹಾಗೂ ಹುಣ್ಣಿಮೆ ದಿನಗಳಲ್ಲೂ ಕೂಡ ಸಾರ್ವಜನಿಕರ ಪ್ರವೇಶಕ್ಕೆ  ನಿರ್ಬಂಧ ಹೇರಲಾಗಿದೆ.  ರಾಜ್ಯ ಹಾಗೂ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಸಂಬಂಧ ರಾಜ್ಯ ಸರ್ಕಾರ ಇಂದು(ಗುರುವಾರ) ನಾಳೆ(ಶುಕ್ರವಾರ) ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಲಾಗುತ್ತಿದೆ.