Asianet Suvarna News Asianet Suvarna News

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಮುಧೋಳದ ಯೋಧ: ಕುಟುಂಬಸ್ಥರಲ್ಲಿ ಸಂತಸ

* ಅಪಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹಿನ್ನೆಲೆ
* ಭಾರತಕ್ಕೆ ‌ಮರಳಿರುವ ಭಾರತೀಯ ರಾಯಭಾರ ಕಚೇರಿ ಭದ್ರತಾ ಸಿಬ್ಬಂದಿ.
* ಬಾಗಲಕೋಟೆ ಜಿಲ್ಲೆ ಮೂಲದ ಐಟಿಬಿಪಿ ಕಮಾಂಡೋ ತಾಯ್ನಾಡಿಗೆ ವಾಪಸ್

Bagalkot soldier returns from Afghanistan Who Worked In india embassy rbj
Author
Bengaluru, First Published Aug 21, 2021, 8:21 PM IST

ಮುಧೋಳ, (ಆ.21): ತಾಲಿಬಾನಿಗಳ ಅಟ್ಟಹಾಸಕ್ಕೆ ಇಡೀ ಅಫ್ಘಾನಿಸ್ತಾನವೇ ನಲುಗಿಹೋಗಿದ್ದು, ಪ್ರಾಣ ರಕ್ಷಣೆಗೆ ದೇಶಬಿಟ್ಟು ಹೋಗುತ್ತಿದ್ದಾರೆ. ಇನ್ನು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ಯೋಧರೊಬ್ಬರು ಕೂಡ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆಯಿಂದಾಗಿ ದೇಶದ ವಿದೇಶಾಂಗ ಸಚಿವಾಲಯ ಅಲ್ಲಿ ವಾಸಿಸುತ್ತಿದ್ದ ಭಾರತೀಯರನ್ನು ಮರಳಿ ಕರೆಯಿಸಿಕೊಳ್ಳವಲ್ಲಿ ನಿರತವಾಗಿದೆ. ಭಾರತ ಸರ್ಕಾರದ ಪ್ರಯತ್ನದ ಫಲವಾಗಿ ಕಾಬೂಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಐಟಿಬಿಪಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಜಿಲ್ಲೆಯ ಕಸಬಾ ಜಂಬಗಿ ಗ್ರಾಮದ ಯೋಧ ಮಂಜುನಾಥ ಮಾಳಿ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರೋ ಎಷ್ಟು ಕನ್ನಡಿಗರ ರಕ್ಷಣೆ ಆಗಿದೆ? ನೋಡಲ್ ಅಧಿಕಾರಿ ಮಾಹಿತಿ

ಕಾಬೂಲ್‌ನಿಂದ ಬಂದಿರುವ ಕಮಾಂಡೋ  ಮಂಜುನಾಥ ಮಾಳಿ ಸದ್ಯ  ದೆಹಲಿಯಲ್ಲಿ ಕ್ವಾರಂಟೈನ್ ‌ನಲ್ಲಿದ್ದಾರೆ. 2019ರಿಂದ ಭಾರತೀಯ ರಾಯಭಾರ ಕಚೇರಿಗೆ ಭದ್ರತಾ ಸಿಬ್ಬಂದಿ ಆಗಿದ್ದರು. 

ತಾಲಿಬಾನಿಗಳ ಅಟ್ಟಹಾಸದಿಂದ  ಆಗಷ್ಟ 16 ರಾತ್ರಿ ಕಾಬೂಲ್ ನಿಂದ ತೆರಳಿ ಸೇನೆ ಜೊತೆ ವಾಪಸ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ ಆಗಷ್ಟ್ 17 ರಂದು ಗುಜರಾತ್‌ನ ಜಾಮ್‌ನಗರಕ್ಕೆ ಭಾರತೀಯ ವಾಯುಸೇನೆಯ ವಿಮಾನದ ಮೂಲಕ ದೆಹಲಿ ತಲುಪಿದ್ದಾರೆ.

ಮಂಜುನಾಥ ಮುಖ ನೇರವಾಗಿ ನೋಡುವವರೆಗೂ  ಮನೆಯವರಿಗೆ ಸಮಾಧಾನ ಇಲ್ಲ.  ಮಂಜುನಾಥ ದೆಹಲಿಯಿಂದ ಬೇಗ ಮನೆಗೆ ಬರಲಿ ಎಂದು ತಂದೆ ತಾಯಿ‌ಪತ್ನಿ ಹಾಗೂ ಕುಟುಬಸ್ಥರು ಕಾದು ಕುಳಿತ್ತಿದ್ದಾರೆ. 

ಗುಜರಾತ್ ಮೂಲಕ ದೇಶಕ್ಕೆ ಆಗಮನ : ಅಗಸ್ಟ್ 16 ರಂದು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರಕ್ಕೆ ಭಾರತೀಯ ವಾಯುಸೇನೆಯ ವಿಮಾನದ ಮೂಲಕ ಆಗಮಿಸಿರುವ ಮಂಜುನಾಥ ಅವರು ಸದ್ಯ ದೆಹಲಿಯಲ್ಲಿ ವೈದ್ಯಕೀಯ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

Follow Us:
Download App:
  • android
  • ios