ಪ್ರಧಾನಿ ಮೋದಿಗೆ ಬಾಗಲಕೋಟೆಯ ರೈತನ ಟ್ವೀಟ್ ಏಟು..!

ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಪ್ರಶಾಂತ್​ ಎನ್ನುವ ರೈತ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ರೈತ ಮೋದಿ ಏನಂತ ಟ್ವೀಟ್ ಮಾಡಿದ್ದಾರೆ. ಇಲ್ಲಿದೆ ನೋಡಿ.

Bagalkot Farmer Prashanth Tweeted PM Modi To Look At Drastic Reduce In Onion Prices

ಬಾಗಲಕೋಟೆ, [ನ.22]: ರಾಜ್ಯದ ವಿವಿಧ ಭಾಗಗಳ ರೈತರು ಸಾಲುಸಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಕಬ್ಬು ಬೆಳೆಗಾರರು ಬೆಂಬಲ ಬೆಲೆ ನಿಗದಿ, ಬಾಕಿ ಪಾವತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದಾರೆ.

ಮತ್ತೊಂದೆಡೆ ಈರುಳ್ಳಿ ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದು,. ದಿನೇ ದಿನೇ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. 

ರೈತರ ಪ್ರತಿಭಟನೆ ಕಿಚ್ಚಿನ ಸುದ್ದಿಗಳು

ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಸರಿಯಾದ ಬೆಲೆ ಸಿಗದೆ ಉತ್ತರ ಕರ್ನಾಟಕದ ಬೆಳೆಗಾರರು ಹತಾಶರಾಗಿದ್ದಾರೆ. ಹಾಕಿದ ಬಂಡವಾಳವೂ ಮರಳಿ ಬರದ ಸ್ಥಿತಿ ಕಂಡು ಅಸಹಾಯಕತೆಯಿಂದ ಕಣ್ಣೀರು ಹಾಕುತ್ತಿದ್ದಾರೆ. 

ರೈತರಿಗೆ ನೋಟ್ ಬ್ಯಾನ್ ಸಂಕಷ್ಟ: ಮೋದಿ ಸರ್ಕಾರದ ಸಚಿವಾಲಯ!

ಮಳೆ ಕೈಕೊಟ್ಟಿದ್ದರೂ, ನೀರಾವರಿ ಪ್ರದೇಶದ ರೈತರು ಸಮೃದ್ಧವಾಗಿ ಈರುಳ್ಳಿ ಬೆಳೆದಿರುವುದೇ ಮುಳುವಾಗಿ ಪರಿಣಮಿಸಿದೆ. ಕಳೆದ ವರ್ಷ ಕ್ವಿಂಟಲ್‌ಗೆ  4 ಸಾವಿರದಿಂದ 5 ಸಾವಿರದವರೆಗೆ ಮಾರಾಟವಾಗಿದ್ದ ಈರುಳ್ಳಿ ಈಗ 100ರವರೆಗೆ ಇಳಿದಿರುವುದು ರೈತಾಪಿ ಜನರ ಸಂಕಷ್ಟ ದುಪ್ಪಟ್ಟುಗೊಳಿಸಿದೆ. 

ರೈತನಿಂದ ಪ್ರಧಾನಿ ಮೋದಿಗೆ ಟ್ವೀಟ್​

ಈರುಳ್ಳಿ ಬೆಲೆ ಕುಸಿತದ ಬಗ್ಗೆ ಗಮನಹರಿಸಿ ಎಂದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಪ್ರಶಾಂತ್​ ಎನ್ನುವರು ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದಾರೆ. ​

ಬೆಲೆ ಕುಸಿತದಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಈ ಬಗ್ಗೆ ಗಮನಹರಿಸಿ ಎಂದು ಟ್ವೀಟ್​ ಮೂಲಕ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios