'Baby for sale' ಮೆಸೇಜ್ ಸೀಕ್ರೆಟ್: ಲೋನ್ಆ್ಯಪ್ ಟಾರ್ಚರ್ ಗೆ ಹೋಯ್ತ ಪ್ರಾಣ?
ಬೆಳ್ತಂಗಡಿಯ ಕಬ್ಬಡ್ಡಿ ಆಟಗಾರನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೋನ್ಆ್ಯಪ್ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಆತನ ಮೊಬೈಲ್ ನಲ್ಲಿ ಹಲವು ಸಾಕ್ಷ್ಯಗಳು ಲಭ್ಯವಾಗಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಸೆ.1): ಬೆಳ್ತಂಗಡಿಯ ಕಬ್ಬಡ್ಡಿ ಆಟಗಾರನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೋನ್ಆ್ಯಪ್ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಆತನ ಮೊಬೈಲ್ ನಲ್ಲಿ ಹಲವು ಸಾಕ್ಷ್ಯಗಳು ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಸ್ವರಾಜ್(24) ಕಬ್ಬಡ್ಡಿ ಜಿಲ್ಲಾ ಮಟ್ಟದ ಆಟಗಾರನಾಗಿದ್ದ. ನಿನ್ನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ವರಾಜ್ ನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರಲಿಲ್ಲ. ಆದರೆ ಇದೀಗ ಆತನ ಮೊಬೈಲ್ ನಲ್ಲಿ ಸಿಕ್ಕ ಮಾಹಿತಿ ಪ್ರಕಾರ ಲೋನ್ಆ್ಯಪ್ ಕಿರುಕುಳ(Loan app harassment)ವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಲೋನ್ ಆಪ್ ನಿಂದ 'Baby for sale' ಅಂತಾ ಕಿರುಕುಳ ನೀಡಲಾಗಿದೆ. ಸ್ವರಾಜ್ ವಾಟ್ಸಾಪ್ ನಲ್ಲಿ ಅಕ್ಕನ ಮಗಳ ಫೋಟೊ ಡಿಪಿಗೆ ಹಾಕಿದ್ದರು. ಆದರೆ ಈ ಫೋಟೋವನ್ನು 'Baby for sale' ಅಂತಾ ಎಡಿಟ್ ಮಾಡಿ ಸ್ವರಾಜ್ ಆತನ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಿದ ಲೋನ್ ಆಪ್ ಕ್ರಿಮಿಗಳು ಕಿರುಕುಳ ಕೊಟ್ಟಿದ್ದಾರೆ.
ಕಬಡ್ಡಿ ಆಟಗಾರನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ವಾಟ್ಸಪ್‌ನಲ್ಲಿ ರಿವಿಲ್ ಆಯ್ತು ಅಸಲಿ ಸತ್ಯ
ಸ್ವರಾಜ್ ನ ಕಾಂಟಾಕ್ಟ್ ಲಿಸ್ಟ್ ಅನ್ನು ಲೋನ್ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಹೊತ್ತಲ್ಲೇ ಈ ಆ್ಯಪ್ ನವರು ಆಕ್ಸೆಸ್ ಮಾಡಿಕೊಂಡಿರುತ್ತಾರೆ. ಸ್ವರಾಜ್ 40 ಸಾವಿರ ಲೋನ್ ಪಡೆದಿದ್ದು, ಕಟ್ಟದ ಕಾರಣಕ್ಕೆ ಕಿರುಕುಳ ಆರಂಭಿಸಿದ್ದಾರೆ. ಬ್ಲಾಕ್ ಮೇಲ್ ತಡೆಯಲಾಗದೇ ಆ.30 ರಂದು ಸ್ವರಾಜ್ 30 ಸಾವಿರ ಹಣ ಕಟ್ಟಿದ್ದರೂ ಉಳಿದ ಹಣ ಕಟ್ಟಲು ಆ.31 ರಂದು ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ನೀಡಿದ್ದ ಲೋನ್ ಆ್ಯಪ್. ಹೀಗಾಗಿ ಒತ್ತಡ ತಾಳಲಾರದೇ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದೆ.