ರಾಮನ ಹೆಸರಲ್ಲಿ ರಾಜಕೀಯ ಮಾಡುವ ದಾರಿದ್ರ್ಯ ಕಾಂಗ್ರೆಸ್‌ಗೆ ಬಂದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಎಲ್ಲೆಡೆ ರಾಮನಿದ್ದಾನೆ. ನಾನು ರಾಮಭಕ್ತಳು. ನಾನೂ ಕೂಡ ಅಯೋಧ್ಯೆಗೆ ಹೋಗುತ್ತೇನೆ. ರಾಮನ ಹೆಸರಲ್ಲಿ ರಾಜಕೀಯ ಮಾಡುವ ದಾರಿದ್ರ್ಯ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ (ಜ.23): ಎಲ್ಲೆಡೆ ರಾಮನಿದ್ದಾನೆ. ನಾನು ರಾಮಭಕ್ತಳು. ನಾನೂ ಕೂಡ ಅಯೋಧ್ಯೆಗೆ ಹೋಗುತ್ತೇನೆ. ರಾಮನ ಹೆಸರಲ್ಲಿ ರಾಜಕೀಯ ಮಾಡುವ ದಾರಿದ್ರ್ಯ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ದಾವಣಗೆರೆಯಲ್ಲಿ ಮಾತನಾಡಿದ ಸಚಿವೆ, ಮಹಾತ್ಮ ಗಾಂಧಿ ಬಗ್ಗೆ ಪ್ರಬಂಧ ಬರೆಯಲಿಕ್ಕೆ ಹೋದ್ರೆ ಟೀಕೆಗಳು ಸಾದ್ಯನಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಟೀಕೆ ಮಾಡ್ತಾರೆ ಎಂದರೆ ಅದಕ್ಕೆ ಅರ್ಥ ಇಲ್ಲ. ಗಾಂಧಿಯವರು ಗುಂಡು ಹೊಡೆಸಿಕೊಂಡು ಸಾಯವಾಗಲು ಹೇ ರಾಮ್ ಎಂದು ಹೇಳಿ ಪ್ರಾಣ ಬಿಟ್ಟವರು. ಆ ರಾಮ ಈ ರಾಮ ಎನ್ನುವಂತಿಲ್ಲ ನಾವೆಲ್ಲ ರಾಮನ ಭಕ್ತರು ಎಂದರು.
ರಾಮ ಜನ್ಮಭೂಮಿ ಅಯೋಧ್ಯೆಯಷ್ಟೇ ಕೃಷ್ಣನ ನೆಲವೂ ಪವಿತ್ರ; ಮಥುರಾ ಕಾಶಿ ದೇಗುಲ ವಿಮೋಚನೆ ಸುಳಿವು ನೀಡಿದ ಸಿಟಿ ರವಿ!
ಶ್ರೀರಾಮನ ಬ್ಯಾನರ್ ಗಳನ್ನು ತೆರವು ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಗೃಹ ಮಂತ್ರಿಗಳಿಗೆ ಕೇಳಿದರೆ ಸೂಕ್ತ. ನಮ್ಮ ಬೆಂಬಲಿಗರೇ ಇಡೀ ಜಿಲ್ಲೆಯಲ್ಲಿ ರಾಮನ ಪೋಟೋ ಹಾಕಿದ್ದಾರೆ. ನಮ್ಮ ಕಾರ್ಯಕರ್ತರು ರಾಮನ ಭಕ್ತರು. ನಮ್ಮ ಸಿಎಂ ಅವ್ರ ಹೆಸರಿನಲ್ಲೇ ರಾಮ ಇದ್ದಾನೆ ಎಂದರು. ಇದೇ ವೇಳೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಸರ್ಕಾರಿ ರಜೆ ಘೊಷಿಸಿದ ಸರ್ಕಾರದ ಬಗ್ಗೆ ಪ್ರಶ್ನಿಸಿದಾಗ, ನಮ್ಮದು ಕಾಯಕವೇ ಕೈಲಾಸ, ನಾವು ಕಾಯಕದಲ್ಲೇ ಭಗವಂತನನ್ನು ಕಾಣುತ್ತೇವೆ ಎಂದರು.
ಸಿದ್ದ'ರಾಮ'ಯ್ಯ ಹೆಸರಲ್ಲಿ ರಾಮನಿದ್ದಾನೆ, ನನ್ನಲ್ಲಿ 'ಶಿವ'ನಿದ್ದಾನೆ: ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ ಗರಂ
ಹಿರೇಮಗಳೂರು ಕಣ್ಣನ್ ಗೆ ನೋಟೀಸ್ ಕೊಟ್ಟ ವಿಚಾರದ ಬಗ್ಗೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಸ್ಪಷ್ಡನೆ ಕೊಟ್ಟಿದ್ದಾರೆ. ಕೆಲವೊಂದು ಸಮಯದಲ್ಲಿ ಅಚಾತುರ್ಯಗಳು ಆಗಿರ್ತವೆ. ಇದು ಗಮನಕ್ಕೆ ಬಂದ ತಕ್ಷಣ ಬರೆಹರಿಸುವ ಕೆಲಸ ಮಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಇದೇ ವೇಳೆ ಬೆಳಗಾವಿ ಮಾರುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ, ನೋ ಕಾಮೆಂಟ್ಸ್ ಎಂದರು.