ಬೆಂಗಳೂರು(ಸೆ.05): ನಗರದ ವಿವಿಧ ಬಡಾವಣೆಗಳ ಮೂಲೆ ನಿವೇಶನ(ಕಾರ್ನರ್‌ ಸೈಟ್‌)ಗಳ ಇ-ಹರಾಜು ಪ್ರಕ್ರಿಯೆಯನ್ನು ಬಿಡಿಎ ಮುಂದುವರೆಸಿದ್ದು, ಈಗ ಮೂರನೇ ಹಂತದಲ್ಲಿ ಅರ್ಕಾವತಿ, ಎಚ್‌ಎಸ್‌ಆರ್‌ ಲೇಔಟ್‌, ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ, ಜೆಪಿನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ 402 ನಿವೇಶನಗಳನ್ನು ಹರಾಜು ಮಾಡಲಿದೆ.

ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಬಿಡ್ಡಿಂಗ್‌ ಸೆ.9ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗಲಿದೆ. ಅ.3ರಂದು ಬಿಡ್ಡಿಂಗ್‌ ಮುಕ್ತಾಯವಾಗಲಿದೆ. ಸಾರ್ವಜನಿಕರು ಇ-ಪ್ರೊಕ್ಯೂರ್ಮೆಂಟ್‌ ಮೂಲಕ ಆನ್‌ಲೈನ್‌ ಬಿಡ್‌ ಮಾಡಿ, ನಿವೇಶನಗಳನ್ನು ಖರೀದಿಸಬಹುದಾಗಿದೆ.

240 ಕಾರ್ನರ್‌ ಸೈಟ್‌ ಮಾರಾಟ: ಬಿಡಿಎಗೆ 172 ಕೋಟಿ ಆದಾಯ

ಇ- ಹರಾಜು ಪ್ರಕ್ರಿಯೆ ಆರು ಹಂತದಲ್ಲಿ ನಡೆಯಲಿದ್ದು ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್‌ ನಡೆಯಲಿದೆ. ಹರಾಜಿಗಿರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್‌ ಅಳವಡಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬಿಡ್‌ದಾರರು ವಿಶ್ವದ ಯಾವದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ.

6 ಹಂತದಲ್ಲಿ ಹರಾಜು, ಪ್ರತಿ ಹಂತದಲ್ಲಿ 70 ನಿವೇಶಗಳ ಬಿಡ್ಡಿಂಗ್‌

ಮೊದಲ ಹಂತದಲ್ಲಿ 1ರಿಂದ 70 ನಿವೇಶನಗಳ ಬಿಡ್‌ ಸೆ.9ಕ್ಕೆ ಪ್ರಾರಂಭವಾಗಲಿದ್ದು, ಬಿಡ್‌ ಮಾಡಲು ಸೆ.25 ಕಡೆಯ ದಿನವಾಗಿದೆ
2ನೇ ಹಂತದಲ್ಲಿ 71ರಿಂದ 140ರ ವರೆಗಿನ ನಿವೇಶನಗಳ ಬಿಡ್‌ ಸೆ.10ರಂದು ಆರಂಭಗೊಳ್ಳಲಿದ್ದು, ಸೆ.28ರಂದು ಬಿಡ್‌ಗೆ ಕೊನೆ ದಿನ
3ನೇ ಹಂತದಲ್ಲಿ 141ರಿಂದ 210ರ ತನಕದ ನಿವೇಶನಗಳ ಬಿಡ್‌ ಸೆ.11ಕ್ಕೆ ಆರಂಭಗೊಂಡು ಸೆ.29ರಂದು ಮುಕ್ತಾಯಗೊಳ್ಳಲಿದೆ
4ನೇ ಹಂತದಲ್ಲಿ 211ರಿಂದ 280 ಕ್ರಮಸಂಖ್ಯೆಯ ನಿವೇಶನಗಳಿಗೆ ಸೆ.12ರಿಂದ ಬಿಡ್‌ ಆರಂಭಗೊಳ್ಳಲಿದ್ದು, ಸೆ.30 ಕೊನೆಯ ದಿನ
5ನೇ ಹಂತದಲ್ಲಿ 281ರಿಂದ 350ರ ವರೆಗೆ ಸೆ.14ರಿಂದ ಬಿಡ್‌ ಮಾಡಬಹುದಾಗಿದ್ದು, ಅ.1ಕ್ಕೆ ಬಿಡ್‌ ಮಾಡಲು ಕಡೆಯ ದಿನ.
6ನೇ ಹಂತದಲ್ಲಿ 351ರಿಂದ 402ರ ವರೆಗೆ ನಿವೇಶನಗಳ ಹರಾಜು ಸೆ.15ರಿಂದ ಅ.3ಕ್ಕೆ ಮುಕ್ತಾಯ

ಎಲ್ಲೆಲ್ಲಿ ನಿವೇಶನಗಳು:

ಅರ್ಕಾವತಿ ಲೇಔಟ್‌ ಜಕ್ಕೂರು ವಿಲೇಜ್‌-11, ಅರ್ಕಾವತಿ ಲೇಔಟ್‌ ಸಂಪಿಗೆಹಳ್ಳಿ ವಿಲೇಜ್‌-14, ಎಚ್‌ಎಸ್‌ಆರ್‌ ಲೇಔಟ್‌ 3ನೇ ಸೆಕ್ಟರ್‌-2, 3ನೇ ಸೆಕ್ಟರ್‌-3, 6 ಮತ್ತು 7ನೇ ಸೆಕ್ಟರ್‌ನಲ್ಲಿ ತಲಾ 2, ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ ಬ್ಲಾಕ್‌ 1- 34, ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ ಬ್ಲಾಕ್‌ 2- 28, ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ ಬ್ಲಾಕ್‌ 3- 24, ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ ಬ್ಲಾಕ್‌ 4- 32, ಜ್ಞಾನಭಾರತಿ ಲೇಔಟ್‌ 3ನೇ ಬ್ಲಾಕ್‌(ವಳಗೇರಹಳ್ಳಿ)-7, ಜ್ಞಾನಭಾರತಿ ಲೇಔಟ್‌ 1ನೇ ಬ್ಲಾಕ್‌(ನಾಗದೇವನಹಳ್ಳಿ)- 2, ಜೆ.ಪಿ.ನಗರ 8ನೇ ಹಂತ, 2ನೇ ಬ್ಲಾಕ್‌- 15, ಜೆ.ಪಿ.ನಗರ 9ನೇ ಹಂತ, 1ನೇ ಬ್ಲಾಕ್‌- 7, ಜೆ.ಪಿ.ನಗರ 9ನೇ ಹಂತ, 3ನೇ ಬ್ಲಾಕ್‌- 16, ಜೆ.ಪಿ.ನಗರ 9ನೇ ಹಂತ, 2ನೇ ಬ್ಲಾಕ್‌- 7, ಜೆ.ಪಿ.ನಗರ 9ನೇ ಹಂತ, 7ನೇ ಬ್ಲಾಕ್‌- 18, ಬನಶಂಕರಿ 6ನೇ ಹಂತ, 7ನೇ ಬ್ಲಾಕ್‌-14, ಬನಶಂಕರಿ 6ನೇ ಹಂತ, 9ನೇ ಬ್ಲಾಕ್‌-17, ಬನಶಂಕರಿ 6ನೇ ಹಂತ, 10ನೇ ಬ್ಲಾಕ್‌-19, ಬನಶಂಕರಿ 6ನೇ ಹಂತ, 2ನೇ ಬ್ಲಾಕ್‌-30, ಬನಶಂಕರಿ 6ನೇ ಹಂತ, 3ನೇ ಬ್ಲಾಕ್‌-41, ಮುಂದುವರೆದ ಬನಶಂಕರಿ 6ನೇ ಹಂತ, 4ನೇ ಬಿ ಬ್ಲಾಕ್‌- 37 ನಿವೇಶನಗಳು ಹರಾಜಿಗೆ ಇವೆ.