ನವದೆಹಲಿ (ಏ.04):  ನೇರ-ದಿಟ್ಟ-ನಿರಂತರ ಸುದ್ದಿಗಳಿಂದಾಗಿ ಕನ್ನಡಿಗರ ಮನಗೆದ್ದಿರುವ   ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ವಾಹಿನಿಗೆ ಈಗ ಮತ್ತೊಂದು ಗರಿ. ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಎನ್ಬಾ-2020’ ಅವಾರ್ಡ್‌ನ ಮೂರು ವಿಭಾಗಗಳಲ್ಲಿ ಸುವರ್ಣ ವಾಹಿನಿ ಪ್ರಶಸ್ತಿಗೆ ಭಾಜನವಾಗಿದೆ. ‘ಎನ್ಬಾ ಅವಾರ್ಡ್‌’ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಆಯ್ಕೆಯಾಗಿರುವುದು ಇದು ನಾಲ್ಕನೇ ಬಾರಿಯಾದರೆ, ಜನಪ್ರಿಯ ಕಾರ್ಯಕ್ರಮವಾದ ‘ಬಿಗ್‌-3’ಗೆ ಇದು ಸತತ ಮೂರನೇ ಪ್ರಶಸ್ತಿ.

ಸುವರ್ಣ ನ್ಯೂಸ್‌ಗೆ ಬೆಸ್ಟ್‌ ನ್ಯೂಸ್‌ ಕವರೇಜ್‌(ದಕ್ಷಿಣ ಭಾರತ) ವಿಭಾಗದಲ್ಲಿ ಚಿನ್ನ, ವಾಹಿನಿಯ ‘ಬಿಗ್‌-3’ ಕಾರ್ಯಕ್ರಮಕ್ಕೆ ಬೆಸ್ಟ್‌ ಕರೆಂಟ್‌ ಅಫೇರ್ಸ್‌ ಪ್ರೋಗ್ರಾಂ(ದಕ್ಷಿಣ ಭಾರತ) ವಿಭಾಗದಲ್ಲಿ ಚಿನ್ನ ಮತ್ತು ‘ಬೆಸ್ಟ್‌ ಆ್ಯಂಕರ್‌’ ವಿಭಾಗದಲ್ಲಿ ಜಯಪ್ರಕಾಶ ಶೆಟ್ಟಿಅವರಿಗೆ ಬೆಳ್ಳಿ ಪದಕ ಲಭಿಸಿದೆ. ಒಟ್ಟು 2 ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಸುವರ್ಣ ವಾಹಿನಿಯು ಮುಡಿಗೇರಿಸಿಕೊಂಡಿದೆ.

2021 ವಿಮೆನ್‌ ಅಚಿವರ್ಸ್‌ ಪ್ರಶಸ್ತಿ ಮುಡಿಲಿಗೇರಿಸಿಕೊಂಡ ಸುಗುಣ!

ದೆಹಲಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಕರೆಂಟ್‌ ಅಫೇರ್ಸ್‌ ಎಡಿಟರ್‌ ಜಯಪ್ರಕಾಶ್‌ ಶೆಟ್ಟಿಮತ್ತು ತಂಡ ಪ್ರಶಸ್ತಿ ಸ್ವೀಕರಿಸಿತು. 2019ರಲ್ಲಿ ‘ಬಿಗ್‌-3’ ಕಾರ್ಯಕ್ರಮಕ್ಕೆ ಬೆಸ್ಟ್‌ ಆ್ಯಂಕರ್‌ ವಿಭಾಗದಲ್ಲಿ ಚಿನ್ನ, 2020ರಲ್ಲಿ ‘ಬಿಗ್‌-3’ಗೆ ಬೆಸ್ಟ್‌ ಪ್ರೋಗ್ರಾಂ ವಿಭಾಗದಲ್ಲಿ ಬೆಳ್ಳಿಯ ಪ್ರಶಸ್ತಿ ಲಭಿಸಿತ್ತು.

ಪ್ರತಿಷ್ಠಿತ ‘ಎನ್ಬಾ’ ಪ್ರಶಸ್ತಿ

‘ಎನ್ಬಾ’ ಅಂದರೆ ಎಕ್ಸ್‌ಚೇಂಚ್‌4ಮೀಡಿಯಾ ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಅವಾರ್ಡ್‌. 2008ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯ ಮುಖ್ಯ ಉದ್ದೇಶ ಟೆಲಿವಿಷನ್‌ ನ್ಯೂಸ್‌ ಉದ್ಯಮದಲ್ಲಿ ಹೊಸ ಬದಲಾವಣೆಗೆ ಕಾರಣವಾಗುವ ಸುದ್ದಿವಾಹಿನಿಗಳು, ಸುದ್ದಿ ಸಂಸ್ಥೆಗಳು ಮತ್ತು ನಾಯಕರನ್ನು ಗುರುತಿಸಿ ಗೌರವಿಸುವುದಾಗಿದೆ. ಈ ಮೂಲಕ ಟೀವಿ ಸುದ್ದಿವಾಹಿನಿಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ ನೀಡಲಾಗುತ್ತದೆ.