ಬೆಳಗಾವಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ಬೃಹತ್ ಸೇನಾ ಭರ್ತಿ ರ್ಯಾಲಿ ನಡೆಯುತ್ತಿದ್ದು, ದೇಶಸೇವೆ ಮಾಡುವ ಆಕಾಂಕ್ಷೆಯೊಂದಿಗೆ ಏಳು ಜಿಲ್ಲೆಗಳ ಸಹಸ್ರಾರು ಯುವಕರು ಭಾಗವಹಿಸಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಯುವಕರು ದೈಹಿಕ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆಗೆ ಸಜ್ಜಾಗಿದ್ದಾರೆ.

ಬೆಳಗಾವಿ (ನ.23): ದೇಶಸೇವೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸಹಸ್ರಾರು ಯುವಕರ ದಂಡು ಬೆಳಗಾವಿಯಲ್ಲಿ ಜಮಾವಣೆಗೊಂಡಿದ್ದು, ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿಯ ಟೆರಿಟೋರಿಯಲ್ ಆರ್ಮಿ (Territorial Army) ನೇತೃತ್ವದಲ್ಲಿ ಈ ಬೃಹತ್ ಸೇನಾ ಭರ್ತಿ ರ್ಯಾಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಬೆಳಗಾವಿಯ ಕ್ಲಬ್ ರೋಡ್ ಮತ್ತು ಸಿಪಿಎಡ್ ಮೈದಾನದ ಸುತ್ತಮುತ್ತ ಯುವಕರು ಕಿಕ್ಕಿರಿದು ಸೇರಿದ್ದಾರೆ.

ಮಧ್ಯರಾತ್ರಿ 2 ಗಂಟೆಯಿಂದಲೇ ಯುವಕರು ರ್ಯಾಲಿಗೆ ಸಜ್ಜಾಗಿದ್ದು, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸಿಲ್ಲ. ಬಹುತೇಕರು ಬೀದಿ ಬಳಿಯ ಪುಟ್ ಪಾತ್ ಮೇಲೆಯೇ ಹಾಗೂ ಸಿಪಿಎಡ್ ಮೈದಾನವನ್ನೇ ತಮ್ಮ ತಾತ್ಕಾಲಿಕ ಹಾಸಿಗೆ ಮಾಡಿಕೊಂಡು ರಾತ್ರಿ ಕಳೆದಿದ್ದಾರೆ.

ಇಂದು ದೈಹಿಕ ಪರೀಕ್ಷೆ ದಾಖಲೆಗಳ ಪರಿಶೀಲನೆ:

​ಇಂದು (ಭಾನುವಾರ) ದೈಹಿಕ ಪರೀಕ್ಷೆ (Physical Test) ಮತ್ತು ದಾಖಲೆಗಳ ಪರಿಶೀಲನೆ (Document Verification) ನಡೆಯುತ್ತಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ ಮತ್ತು ಬೆಳಗಾವಿ ಸೇರಿ ಒಟ್ಟು ಏಳು ಜಿಲ್ಲೆಗಳ ಸೇನಾ ಆಕಾಂಕ್ಷಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

​ದೇಶ ಕಾಯುವ ಸೈನಿಕನಾಗುವ ಕನಸಿನೊಂದಿಗೆ ಆಗಮಿಸಿರುವ ಈ ಯುವ ಸಮೂಹದ ಉತ್ಸಾಹವು ನಿಜಕ್ಕೂ ಪ್ರಶಂಸನೀಯವಾಗಿದೆ.