*  ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ‘ಗಡಿನಾಡ ಚೇತನ ಪ್ರಶಸ್ತಿ’ ಪ್ರದಾನ ಮಾಡಿ ಘೋಷಣೆ*  ಕನ್ನಡಕ್ಕೆ ದುಡಿವ ಸಂಘ-ಸಂಸ್ಥೆಗಳಿಗೆ ನೆರವು*  ಮಕ್ಕಳ ಸಾಹಿತ್ಯ ರಚನೆಗೆ ಪ್ರೋತ್ಸಾಹ  

ಬೆಂಗಳೂರು(ಫೆ.11):  ನಾಡು-ನುಡಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಆರ್ಥಿಕ ಪ್ರೋತ್ಸಾಹ, ಕನ್ನಡದ(Kannada) ಪ್ರಚಾರಕ್ಕಾಗಿ 10 ರಾಯಭಾರಿಗಳ ನೇಮಕ, ಮಕ್ಕಳ ಸಾಹಿತ್ಯಕ್ಕೆ ಉತ್ತೇಜನ ನೀಡಲು ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ ಸೇರಿದಂತೆ ಕನ್ನಡ ಉಳಿಸಿ ಬೆಳೆಸಲು ಆಯವ್ಯದಲ್ಲಿ ಯೋಜನೆಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದರು.

ನಗರದ ಗಾಂಧಿ ಭವನದಲ್ಲಿ ಗುರುವಾರ ಸಂಜೆ ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’(Karnataka Border Development Authority) ಏರ್ಪಡಿಸಿದ್ದ ಸಮಾರಂಭದಲ್ಲಿ ‘ಗಡಿನಾಡ ಚೇತನ ಪ್ರಶಸ್ತಿ’(Gadinada Chetana Awards) ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ಗಟ್ಟಿಗೊಳಿಸಲು, ಪಸರಿಸಲು ಯಾರೇ ಸಲಹೆ ನೀಡಿದರೂ ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ಧಾರವಾಡದ ವಿದ್ಯಾವರ್ಧಕ ಸಂಘ ಸೇರಿದಂತೆ ನಾಡು-ನುಡಿಗೆ ಸೇವೆ ಸಲ್ಲಿಸಿದ ರಾಜ್ಯದ ಸಂಘ-ಸಂಸ್ಥೆಗಳಿಗೆ ಬೆಂಬಲವಾಗಿ ನಿಲ್ಲಲಾಗುವುದು ಎಂದರು.

ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?

ಕನ್ನಡದ ದನಿಯಾಗಿ ಕಾರ್ಯನಿರ್ವಹಿಸಲು 10 ರಾಯಭಾರಿಗಳನ್ನು(Ambassador) ನೇಮಿಸಲಾಗುವುದು. ಮಕ್ಕಳ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಬೇರೆ ಭಾಷೆಯ ಮಕ್ಕಳು ಕನ್ನಡದಲ್ಲಿ ಸಾಹಿತ್ಯ ರಚಿಸಿದರೆ ಅವರನ್ನು ಗುರುತಿಸಿ ಸರ್ಕಾರದಿಂದ ಗೌರವಿಸಲಾಗುವುದು. ಕನ್ನಡ ಗಟ್ಟಿಗೊಳಿಸಲು, ಪಸರಿಸಲು ಬೇಕಾದ ಕಾರ್ಯವನ್ನು ಮಾಡಲು ಸಿದ್ಧ ಎಂದು ಹೇಳಿದರು.

ಕನ್ನಡಕ್ಕಾಗಿ ಮೈಚಳಿ ಬಿಡಬೇಕು:

ತಮಿಳು(Tamil) ಜನರು ಅವರ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಸಾವಿರ ಬಾರಿ ಹೇಳುತ್ತಾರೆ. ನಮ್ಮದು ಅವರಿಗಿಂತ ಶ್ರೀಮಂತ ಭಾಷೆಯಾಗಿದ್ದರೂ ನಾವು ಒಂದು ಸಲ ಹೇಳಿ ಸುಮ್ಮನಾಗುವ ನಾಚಿಕೆ ಸ್ವಭಾವ ಹೊಂದಿದ್ದೇವೆ. ಕನ್ನಡ ಸಂಸ್ಕೃತಿ, ಇತಿಹಾಸ ರೋಚಕವಾಗಿದೆ. ಇದನ್ನು ಸಂಗ್ರಹಿಸಿ ಪುಸ್ತಕ ಹೊರತರಬೇಕು. ನಾವು ಮುನ್ನುಗ್ಗಿದರೆ ನಾಲ್ಕು ಜನ ಕೇಳುತ್ತಾರೆ. ನಮ್ಮ ಮನೆಗೇ ಬಂದು ಯಾರೂ ಕೇಳುವುದಿಲ್ಲ. ಇದು ಸ್ಪರ್ಧಾತ್ಮಕ ಯುಗವಾಗಿದ್ದು ಮೈಚಳಿ ಬಿಡಬೇಕು. ಕನ್ನಡ ಸಾಹಿತ್ಯದ ಚಿಂತನೆ ವಿಶ್ವಕ್ಕೇ ಪರಿಚಯ ಆಗಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ವಿಜೇತರು:

ಕರ್ನಾಟಕ(Karnataka) ಏಕೀಕರಣದ ಧೀಮಂತ ಹೋರಾಟಗಾರರಾದ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪರವಾಗಿ ಅಧ್ಯಕ್ಷ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಕಾಸರಗೋಡಿನ ಗಡಿನಾಡ ಸಂತ ಬಿ.ಪುರುಷೋತ್ತಮ ಮಾಸ್ತರ್‌ ಅವರಿಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಿದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್‌.ಮಂಜುಳಾ, ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

Govt Of India : ಕೇಂದ್ರದಿಂದ ತಮಿಳಿಗೆ 50 ಕೋಟಿ, ಕನ್ನಡಕ್ಕೆ 9 ಕೋಟಿ: ಬಳಿಗಾರ್‌ ಕಿಡಿ

ಬೆಂಗಳೂರಿನ(Bengaluru) ಗಾಂಧಿ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪರವಾಗಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಕಾಸರಗೋಡಿನ ಗಡಿನಾಡ ಸಂತ ಬಿ.ಪುರುಷೋತ್ತಮ ಮಾಸ್ತರ್‌ ಅವರಿಗೆ ‘ಗಡಿನಾಡ ಚೇತನ ಪ್ರಶಸ್ತಿ’ ನೀಡಿ ಗೌರವಿಸಿದರು. ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಪತ್ರಕರ್ತ ರವೀಂದ್ರ ಭಟ್‌ ಮತ್ತಿತರರು ಹಾಜರಿದ್ದರು.

ಪದವಿಯಲ್ಲಿನ್ನು ಕನ್ನಡ ಭಾಷೆ ಕಲಿಕೆ ಕಡ್ಡಾಯ ಅಲ್ಲ..!

ಬೆಂಗಳೂರು: ಪದವಿ(Graduation) ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ‘ಕನ್ನಡ’ವನ್ನು(Kannada) ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸದಂತೆ ಉನ್ನತ ಶಿಕ್ಷಣ ಇಲಾಖೆ(Department of Higher Education) ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ಇಚ್ಛೆ ಇಲ್ಲದಿದ್ದರೂ ಈಗಾಗಲೇ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದವರಿಗೆ ತಮ್ಮಿಷ್ಟದ ಬೇರೆ ಭಾಷೆಗೆ ಬದಲಿಸಿಕೊಳ್ಳಲು ಅವಕಾಶ ದೊರೆಯಲಿದೆ ಎನ್ನಲಾಗುತ್ತಿದೆ.