ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‌ವರಿಷ್ಠರು,‌ ಕೆಪಿಸಿಸಿ ಅಧ್ಯಕ್ಷರು ಸಿಎಂಗೆ ಆರ್ಥಿಕ ಸಲಹೆಗಾರರು‌ ಬೇಕೆಂದು ಹುದ್ದೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ಒಪ್ಪಿಕೊಂಡ್ರೆ ರಾಜ್ಯಕ್ಕೆ‌ ಒಳ್ಳೆಯದಾಗುತ್ತೆ ಅಂದ್ರು ಅದಕ್ಕಾಗಿ ಒಪ್ಪಿಕೊಂಡಿದ್ದೇನೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ‌ ಸ್ಪಷ್ಟಪಡಿಸಿದರು.

ಬೆಂಗಳೂರು (ಡಿ.30): ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‌ವರಿಷ್ಠರು,‌ ಕೆಪಿಸಿಸಿ ಅಧ್ಯಕ್ಷರು ಸಿಎಂಗೆ ಆರ್ಥಿಕ ಸಲಹೆಗಾರರು‌ ಬೇಕೆಂದು ಹುದ್ದೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ಒಪ್ಪಿಕೊಂಡ್ರೆ ರಾಜ್ಯಕ್ಕೆ‌ ಒಳ್ಳೆಯದಾಗುತ್ತೆ ಅಂದ್ರು ಅದಕ್ಕಾಗಿ ಒಪ್ಪಿಕೊಂಡಿದ್ದೇನೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ‌ ಸ್ಪಷ್ಟಪಡಿಸಿದರು.

ಇದೇ ಮೊದಲಬಾರಿಗೆ ಮುಖ್ಯಮಂತ್ರಿಗೆ ಆರ್ಥಿಕ ಸಲಹೆಗಾರರ ಹುದ್ದೆಗೆ ನೇಮಕವಾಗಿದ್ದೇನೆ. ಇದು ನನಗೆ ಚಾಲೆಂಜಿಂಗ್ ಜಾಬ್ ಆಗಿದೆ. ನನ್ನಿಂದ ರಾಜ್ಯಕ್ಕೆ, ಸರ್ಕಾರಕ್ಕೆ ‌ಏನೆಲ್ಲಾ ಪ್ರಯೋಜನ ಆಗಬೇಕೋ ಅದಕ್ಕೆ ಸಲಹೆ ಕೊಡ್ತೇನೆ. ರಾಜಕೀಯದಲ್ಲಿ ಸೀನಿಯಾರಿಟಿ, ಜೂನಿಯಾರಿಟಿ‌ ಬರೋದಿಲ್ಲ. ಇಟ್ ಈಸ್ ನಾಟ್‌ ಎ ಜಾಬ್. ನಾನು ಶಾಸಕನಾದಾಗಲೂ ಸ್ಯಾಲರಿ ತೆಗೆದುಕೊಂಡಿಲ್ಲ. ಈಗಲೂ ಸ್ಯಾಲರಿ ತೆಗೆದುಕೊಳ್ಳಲ್ಲ ಎಂದರು.

ರಾಮಮಂದಿರ ಉದ್ಘಾಟನೆ ಒಂದು ಸ್ಟಂಟ್; ಬಿಜೆಪಿ ವಿರುದ್ಧ ಸಚಿವ ಡಿ ಸುಧಾಕರ್ ಕಿಡಿ

ಇನ್ನು ರಾಯರೆಡ್ಡಿ ವಿಶ್ವದ ದೊಡ್ಡ ಆರ್ಥಿಕ ತಜ್ಞರಾ ಎಂಬ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಟೀಕೆಗೆ ಪ್ರತ್ಯುತ್ತರ ನೀಡಿದ ರಾಯರೆಡ್ಡಿ, ನಾನು ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ? ಅವರಿಗ್ಯಾಕೆ ಬೇಕು, ನನ್ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನ್ ಗೊತ್ತಿದ್ಯೋ ಮಾತಾಡ್ತೀನಿ, ಅವ್ರಿಗೇನ್ ಗೊತ್ತಿದ್ಯೋ ಮಾತಾಡಲಿ ಎಂದು ಎಚ್‌ಡಿಕೆಗೆ ಸವಾಲು ಹಾಕಿದರು ಮುಂದುವರಿದು, ಹಾಗಾದ್ರೆ ಇವ್ರೇನು ದೊಡ್ಡ ಆರ್ಥಿಕ ತಜ್ಞರಾ? ಎಂದು ನಾನೂ ಕೇಳಬಹುದಾ? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದು ಸಲಹೆ ನೀಡಿದರು.

ಮುಂದುವರಿದ ಮಹಿಳೆಯರ 'ಶಕ್ತಿ' ಪ್ರದರ್ಶನ; ಕಂಡಕ್ಟರ್, ಡ್ರೈವರ್ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

ಪ್ರಧಾನಿ ಆಯ್ಕೆ ಗೊಂದಲ:

ಪ್ರಧಾನಿ ಯಾರಾಗಬೇಕು ಎಂಬ ಆಯ್ಕೆ ಗೊಂದಲ ನಮ್ಮಲ್ಲಿಲ್ಲ. ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದೆ. ಇವತ್ತು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ‌ ವೈಯಕ್ತಿಕವಾಗಿ ನಾನು ಸಂತೋಷ ಪಡುತ್ತೇನೆ. ರಾಹುಲ್ ಗಾಂಧಿ ಅವರನ್ನು ಘೋಷಿಸಿದ್ರೂ ಸಂತೋಷ ಪಡುತ್ತೇನೆ ಎಂದರು.