Asianet Suvarna News Asianet Suvarna News

ಸಮಾಜ ವಿರೋಧಿ ಕೃತ್ಯಕ್ಕೆ ಧರ್ಮದ ಲೇಪ ಸಲ್ಲದು: ಸಚಿವ ಕೆ.ಜೆ.ಜಾರ್ಜ್‌

ಬೆರಳೆಣಿಕೆಯ ಮಂದಿ ಮಾಡುವ ಕೆಟ್ಟ ಕಾರ್ಯಗಳಿಗೆ ಧರ್ಮದ ಲೇಪ ಹಚ್ಚಬಾರದು. ಸಮಾಜ ವಿರೋಧಿ ಕೃತ್ಯಗಳನ್ನು ಕೈಗೊಳ್ಳುವವರ ಮೇಲೆ ಮಾತ್ರ ಕ್ರಮ ಕೈಗೊಳ್ಳಬೇಕು ಹೊರತು ಜನಾಂಗವನ್ನೇ ದ್ವೇಷಿಸಬಾರದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. 

Anti social act should not be blamed on religion Says Minister KJ George gvd
Author
First Published Feb 12, 2024, 6:03 AM IST

ಬೆಳ್ತಂಗಡಿ (ಫೆ.12): ಬೆರಳೆಣಿಕೆಯ ಮಂದಿ ಮಾಡುವ ಕೆಟ್ಟ ಕಾರ್ಯಗಳಿಗೆ ಧರ್ಮದ ಲೇಪ ಹಚ್ಚಬಾರದು. ಸಮಾಜ ವಿರೋಧಿ ಕೃತ್ಯಗಳನ್ನು ಕೈಗೊಳ್ಳುವವರ ಮೇಲೆ ಮಾತ್ರ ಕ್ರಮ ಕೈಗೊಳ್ಳಬೇಕು ಹೊರತು ಜನಾಂಗವನ್ನೇ ದ್ವೇಷಿಸಬಾರದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಅವರು ಬೆಳ್ತಂಗಡಿಯ ಬಿಷಪ್ ಹೌಸ್‌ನಲ್ಲಿ ಬೆಳ್ತಂಗಡಿ ಸೀರೋ ಮಲಬಾರ್ ಧರ್ಮಪ್ರಾಂತ್ಯದ ಸ್ಥಾಪನೆ ಮತ್ತು ಬೆಳ್ತಂಗಡಿ ಪ್ರಥಮ ಧರ್ಮಾಧ್ಯಕ್ಷರಾಗಿ ಬಿಷಪ್ ಲಾರೆನ್ಸ್ ಮಕ್ಕುಯಿಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದರು.

ಶುಭಾಶಂಸನೆಗೈದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಾರತೀಯತೆಯನ್ನು ಒಪ್ಪಿಕೊಂಡ ಕ್ರೈಸ್ತ ಸಮಾಜದ ಜನರು ಕಷ್ಟದಿಂದ ಜೀವನ ಕಂಡುಕೊಂಡವರು. ಸೌಹಾರ್ದತೆಯ ಬಾಳು ನಡೆಸುವ ಇವರು ಕೃಷಿಗೆ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡುತ್ತಾರೆ ಎಂದರು. ಸಭಾಪತಿ ಯು.ಟಿ. ಖಾದರ್ ಮಾತನಾಡಿ, ಕಳೆದ 25 ವರ್ಷಗಳಲ್ಲಿ ಧರ್ಮಪ್ರಾಂತ್ಯದ ಮೂಲಕ ಮಾಡಿದ ತ್ಯಾಗ, ಸಂಯಮ, ತಾಳ್ಮೆ ಹಾಗೂ ನೀಡಿದ ಕೊಡುಗೆಗಳು ಸ್ಮರಣೀಯವಾಗಿದ್ದು ಇದು ದೇಶಪ್ರೇಮದ ಸಂಕೇತವಾಗಿದೆ ಎಂದರು.

ಬೊಮ್ಮಾಯಿಯದು ದೇಶ ಕಂಡ ಅತಿಭ್ರಷ್ಟ ಸರ್ಕಾರ: ಸಚಿವ ರಾಮಲಿಂಗಾರೆಡ್ಡಿ

ಸೀರೋ ಮಲಬಾರ್ ಕೆಥೋಲಿಕ್ ಚರ್ಚ್‌ನ ಮೇಜರ್ ಆರ್ಚ್ ಬಿಷಪ್ ರಫಾಯಲ್ ತಟ್ಟಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಹರೀಶ್ ಪೂಂಜ ಮಾತನಾಡಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಮೂಲಕ ಅಭಿವೃದ್ಧಿ ಹಾಗೂ ಧರ್ಮ ಚಿಂತನೆಯ ಕೆಲಸಗಳು ನಡೆದಿವೆ ಎಂದರು. ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ 25 ವರ್ಷ ಪೂರೈಸಿದ ಬಿಷಪ್ ಲಾರೆನ್ಸ್ ಮುಕ್ಕುಯಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. 

ತಲ್ಲಶ್ಶೇರಿಯ ಆರ್ಚಿ ಬಿಷಪ್ ಜೋಸೆಫ್ ಪಂಪ್ಲಾನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಆರ್ಚಿ ಬಿಷಪ್ ಪೀಟರ್ ಮಚಾಡೋ, ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ, ಪುತ್ತೂರು ಬಿಷಪ್ ಗೀವರ್ಗಿಸ್ ಮಕಾರಿಯನ್, ಬ್ರಹ್ಮಾವರದ ಬಿಷಪ್ ಯಾಕೋಬ್ ಮಾರ್ ಎಲಿಯಾಸ್, ಕ್ರೈಸ್ತ ಮುಖಂಡ ಐವನ್ ಡಿಸೋಜ, ಮಾಜಿ ಸಚಿವರಾದ ಗಂಗಾಧರ ಗೌಡ, ರಮಾನಾಥ ರೈ, ವಿನಯಕುಮಾರ ಸೊರಕೆ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್, ಪುತ್ತೂರು ಶಾಸಕ ಅಶೋಕ್ ರೈ, ಕ್ರೈಸ್ತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಆರ್.ಲೋಬೋ ಮತ್ತಿತರರು ಇದ್ದರು.

ಬಿಜೆಪಿಯಲ್ಲಿ ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ವಿಕಾರ್ ಜನರಲ್ ಫಾದರ್ ಜೋಸೆಫ್ ವಲಿಯಪರಂಬಿಲ್ ಸ್ವಾಗತಿಸಿದರು. ಲಿಲ್ಲಿ ಆಂಟನಿ ತೊಟ್ಟಪಿಲ್ಲಿ ವಂದಿಸಿದರು. ಫಾ. ಜೋಬಿ ಪಲ್ಲಟ್ ಹಾಗೂ ಏಂಜಲ್ ಉಡುಪಿ ನಿರೂಪಿಸಿದರು.

Follow Us:
Download App:
  • android
  • ios