ಕರ್ನಾಟಕ ವಿವಿಯ ಬಿಎ ಪಠ್ಯದಲ್ಲಿ ಭಾರತಾಂಬೆ ಮತ್ತು ರಾಷ್ಟ್ರೀಯತೆಯ ಬಗ್ಗೆ ವಿವಾದಾತ್ಮಕ ಬರಹವೊಂದು ಸೇರ್ಪಡೆಯಾಗಿದ್ದು, ಟೀಕೆಗೆ ಗುರಿಯಾಗಿದೆ. ಲೇಖಕ ರಾಮಲಿಂಗಪ್ಪ ಟಿ ಬೇಗೂರು ಅವರ ಈ ಬರಹವು ಹಿಂದೂ ಧರ್ಮ, ಚಂದ್ರಯಾನ, ರಾಮಮಂದಿರ ಮುಂತಾದ ವಿಷಯಗಳ ಬಗ್ಗೆಯೂ ಕೀಳುಮಟ್ಟದ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಜ.23): ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಕರ್ನಾಟಕ ವಿವಿ ಪಠ್ಯದಲ್ಲಿ ಭಾರತಾಂಬೆಗೆ ಅವಮಾನವಾಗುವಂಥ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಭಾರತ ಮಾತೆಯ ಚಿತ್ರ ಹಿಂದೂ ಮಾತೆಯ ಚಿತ್ರ ಎಂದು ಹೇಳಲಾಗಿದೆ. ಭಾರತ್ ಮಾತಾಕಿ ಜೈ ಘೋಷಣೆ ಸೋಲು ನೆನಪಿಸುತ್ತದೆ ಎಂದು ಲೇಖಕ ಬರೆದುಕೊಂಡಿದ್ದಾರೆ. ಧಾರವಾಡ ವಿವಿ ಪಠ್ಯದಲ್ಲಿ ಲೇಖಕ ತನ್ನ ಅಜೆಂಡಾವನ್ನು ವಿದ್ಯಾರ್ಥಿಗಳ ಮೇಲೆ ಹೇರಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಕರ್ನಾಟಕ ವಿವಿಯ ಬಿಎ ಫಸ್ಟ್ ಸೆಮಿಸ್ಟರ್​​​​ನ ಕನ್ನಡ ಪಠ್ಯದಲ್ಲಿ ಈ ವಿವಾದಿತ ಪಠ್ಯ ಕಾಣಿಸಿಕೊಂಡಿದೆ. ‘ರಾಷ್ಟ್ರೀಯತೆಯ ಆಚರಣೆಯ ಸುತ್ತ ’ ಎಂಬ ಪಠ್ಯದ ವಿರುದ್ಧ ಲೇಖಕರ ವಲಯದಲ್ಲಿಯೇ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಎ ಪ್ರಥಮ ಸೆಮಿಸ್ಟರ್‌ನಲ್ಲಿರುವ ಕನ್ನಡ ಪಠ್ಯ ‘ಬೆಳಗು’ ಪುಸ್ತಕದಲ್ಲಿ ಈ ಲೇಖನವಿದ್ದು, ಲೇಖಕ ರಾಮಲಿಂಗಪ್ಪ ಟಿ ಬೇಗೂರು ಅವರ ಬರಹ ಇದಾಗಿದೆ.

ಬರೀ ದೇಶವಿರೋಧಿ, ಧರ್ಮವಿರೋಧ ಮಾತ್ರವಲ್ಲದೆ ಚಂದ್ರಯಾನ, ರಾಮಮಂದಿರ ಬಗ್ಗೆಯೂ ಕೀಳುಮಟ್ಟದ ಬರಹವನ್ನು ಬರೆದಿದ್ದಾರೆ. ಸೋನಿಯಾ ಪರಕೀಯಳು ಎಂದು ಪ್ರಧಾನಿಯಾಗಲು ಬಿಡಲಿಲ್ಲ. ಮುಸ್ಲಿಮರು ಗಲಭೆ ಮಾಡಿದರೆ ಭಯೋತ್ಪಾದನೆ, ಹಿಂದೂಗಳು ಗಲಭೆ ಮಾಡಿದರೆ ಕರ್ತವ್ಯ ಎನ್ನಲಾಗುತ್ತದೆ ಎಂದು ಬರೆದಿದ್ದಾರೆ.

ಮುಖ್ಯವಾಗಿ ಪಾಠಗಳು ಇರಬೇಕಿದ್ದ ಪುಸ್ತಕದಲ್ಲಿ ಲೇಖಕ ತನ್ನ ಅಜೆಂಡಾ ಹೇಳಿದ್ದಾರೆ. ಹಿಂದೂ ಧರ್ಮ ಅನ್ನೋದು ಕಲ್ಪಿತ ಧರ್ಮ ಎಂದು ಬರೆದಿದ್ದಾರೆ. ಆ ಮೂಲಕ ಹಿಂದುತ್ವ- ರಾಷ್ಟ್ರೀಯತೆಗೆ ಕರ್ನಾಟಕ ವಿವಿಯಿಂದ ಅವಮಾನವಾದಂತಾಗಿದೆ.

ಭಾರತಾಂಬೆಯ ಕಲ್ಪನೆಯ ಬಗ್ಗೆ ಲೇಖಕ ಬರೆದಿರೋದು: ಭಾರತ ಮಾತೆಯ ಚಿತ್ರ ಹಿಂದೂ ಮಾತೆಯ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಮುಸ್ಲಿಂ, ಸಿಖ್, ಜೈನ, ಗೊಲ್ಲ, ಹೊಲೆಯಾದಿ ಕುರುಹು ಕಾಣಿಸಲ್ಲ.ಈಕೆ ಖಂಡಿತ ಹಿಂದೂ ಧರ್ಮದ ಕಲ್ಪಿತ ಮಾತೆ.ಭಾರತ ಮಾತೆಯ ಕಲ್ಪನೆ ಒಂದು ವರ್ಗ ಸಮುದಾಯದ ಕಲ್ಪನೆ.ಭಾರತ ಮಾತೆಯನ್ನೂ ಇನ್ನಿತತರು ಒಪ್ಪುವಂತೆ ಒತ್ತಾಯಿಸುತ್ತದೆ.ಪ್ರತಿ ಸಭೆ, ಸಮಾರಂಭಗಳಲ್ಲೂ ಭಾರತ್ ಮಾತಾಕಿ ಘೋಷಣೆ ಕೂಗಿದಾಗ ಉಳಿದವರು ಜೈ ಎನ್ನುತ್ತಾರೆ.ಈ ಜೈ ಎನ್ನುವ ಕಲ್ಪನೆಯೇ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆ ಎಂದು ಲೇಖಕ ಬರೆದಿದ್ದಾರೆ.

ಪರಕೀಯ ಪ್ರಜ್ಞೆ ಬಗ್ಗೆ ಮಾತು: ಭಾರತದ ಮುಸ್ಲಿಮರು ಪರಕೀಯ ಪ್ರಜ್ಞೆಯಿಂದ ನರಳುತ್ತಿದ್ದಾರೆ.ಈ ಹಿಂದೂ ಧರ್ಮ ಎಂಬ ಕಲ್ಪಿತ ಧರ್ಮ ಇದೆಯಲ್ಲ.ಹಿಂದೂ ಧರ್ಮ ಎಲ್ಲವನ್ನೂ ಜೀರ್ಣಿಸಿಕೊಂಡು ಐಕ್ಯ ಮಾಡಿಕೊಳ್ಳುತ್ತದೆಇಲ್ಲವೇ ಇದ್ದರೆ ಅದು ಬೇರೆಯದ್ದು, ಅನ್ಯವೆಂದು ಉಚ್ಚಾಟಿಸುತ್ತದೆ.ಇಸ್ಲಾಂ ಧರ್ಮವನ್ನ ಹಿಂದೂ ಧರ್ಮ ಎಂದಿಗೂ ಜೀರ್ಣಿಸಿಕೊಳ್ಳಲಾಗಲಿಲ್ಲ. ರಾಷ್ಟ್ರೀಯವಾದ ಸಮಾನ ನಾಗರಿಕ ಸಂಹಿತೆ ಎಲ್ಲರ ಮೇಲೂ ಹೇರುತ್ತೆ. ಭಾರತ ಹಿಂದೂಗಳ ಸ್ವತ್ತು, ಪಾಕಿಸ್ತಾನ ಮುಸ್ಲಿಮರ ಸ್ವತ್ತು ಎನ್ನಲಾಗಿದೆ.ಜೈನ,ಸಿಖ್, ವೀರಶೈವ, ಬೌದ್ಧರು ರಾಷ್ಟ್ರೀಯತೆಗೆ ಅನ್ಯವಾಗಿ ಕಾಣುತ್ತಿಲ್ಲ. ದೇಶ ವಿಭಜನೆ ಕಾಲದಲ್ಲಿ ತಮ್ಮದೇ ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಟ್ಟಿಲ್ಲ. ಹಿಂದೂ ರಾಷ್ಟ್ರೀಯತೆಯನ್ನು ಈ ಧರ್ಮಗಳು ಒಪ್ಪಿಕೊಂಡಿವೆ ಎಂದು ಬರೆದಿದ್ದಾರೆ.

ಮುಸ್ಲಿಮರಿಗೆ ಒಂದು ಪವಿತ್ರ ಯಾತ್ರಾ ಕೇಂದ್ರ ಮೆಕ್ಕಾ ಇದೆ. ಹಿಂದೂಗಳಿಗೆ ಅಯೋಧ್ಯೆ ಇರಬೇಕೆಂದು ಕೆಲ ಪರಿವಾರದವರ ಒತ್ತಾಯ.ಮಸೀದಿ ಧ್ವಂಸ, ಇಟ್ಟಿಗೆ ಯಾತ್ರೆ ಹೀಗೆ ಹಲವು ಪ್ರಯತ್ನಗಳು ನಡೆದಿವೆ. ಕೋಟ್ಯಂತರ ಭಾರತೀಯರಿಗೆ ಪ್ರತ್ಯೇಕವಾದ ಯಾತ್ರಾ ಕೇಂದ್ರಗಳಿವೆ.ಅವನ್ನೆಲ್ಲ ತಪ್ಪಿಸಿ ಒಂದು ದೈವ, ಯಾತ್ರಾ ಕೇಂದ್ರದೆಡೆಗೆ ತರುವುದು ಸಾಧ್ಯವೇ? ಸೋನಿಯಾ ಪರಕೀಯಳು ಎಂಬ ಕಾರಣಕ್ಕೆ ಪ್ರಧಾನಿ ಆಗಕೂಡದೆಂದು ವಾದ. ರಾಮಜನ್ಮ ಭೂಮಿ, ಬಾಬ್ರಿ ಮಸೀದಿ ಅಗೆಯುತ್ತಾ ಹೋದರೆ ಇತಿಹಾಸದಲ್ಲಿ ಅದು ಯಾರಿಗೆ ಸೇರಿದ್ದೆಂದು ಶೋಧಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ವಿವಿ ಪಠ್ಯದಲ್ಲಿ ಲೇಖಕನ ವಿತಂಡ ತರ್ಕ: ರಾಷ್ಟ್ರೀಯತೆಯ ಪಿತ್ತ ನೆತ್ತಿಗೆ ಏರಿದರೆ ಅಣುಬಾಂಬು ತಯಾರಿಸುತ್ತೇವೆ.ಪಾಕಿಸ್ತಾನ ಭಯಪ್ರೇರಿತರಾಗಿ ಸಾವಿರಾರು ಕೋಟಿ ಖರ್ಚು ಮಾಡುತ್ತದೆ.ಸಾವಿರಾರು ಕೋಟಿ ರೂಪಾಯಿ ಚಂದ್ರಯಾನಕ್ಕೆ ಖರ್ಚು ಮಾಡಿದ್ದೇವೆ. ಪ್ರಜಾಪ್ರಭುತ್ವದ ಕಟ್ಟಕಡೆಯ ಪ್ರಜೆಗೆ ಖರ್ಚಿನಿಂದ ಏನು ಲಾಭವಾಯಿತು? ನಮ್ಮಲ್ಲಿನ ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಪ್ರಾದೇಶಿಕ ಅಸಮಾನತೆ. ರೈತರ ಆತ್ಮಹತ್ಯೆ ಇಂಥ ಯಾವುದಾದರೂ ಸಮಸ್ಯೆ ಬಗೆಹರಿಯಿತೇ..? ಜೈ ಭಾರತ ಮಾತೆಯೆಂಬ ಆ ಮಾತೆಗೇ ಇದೆಲ್ಲಾ ಪ್ರೀತಿಯಾಗಬೇಕು ಎಂದು ಬರೆದಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ವಿವಿಯಲ್ಲಿ ಮಾಟ-ಮಂತ್ರದ ಆಟ!

ರಾಷ್ಟ್ರ ಧರ್ಮಗಳ ಸಮೀಕರಣ: ಭಾರತ ಹಿಂದೂಗಳ ಸ್ವತ್ತು, ಪಾಕಿಸ್ತಾನ ಮುಸ್ಲಿಮರ ಸ್ವತ್ತು ಎಂಬ ಭಾವನೆ ಇದೆ. ಹಿಂದೂ ಎಂಬ ಕಲ್ಪಿತ ಬಹುಸಂಖ್ಯಾತ ರಾಷ್ಟ್ರೀಯತೆ ಯಜಮಾನಿಕೆಯಾಗಿದೆ. ಮುಸ್ಲಿಮರು ಕರ್ಮಠರಾಗಲು ಹಿಂದೂ ಎಂಬ ಕಲ್ಪಿತ ಯಜಮಾನಿಕೆ ಕಾರಣ. ಕೋಮು ಗಲಭೆ ಬಹುಸಂಖ್ಯಾತರಿಂದ ನಡೆದಾಗ ಅದು ಧರ್ಮ ರಕ್ಷಣಾ ಕರ್ತ್ಯವ್ಯ. ಇದನ್ನೇ ಅಲ್ಪ ಸಂಖ್ಯಾತರು ಮಾಡಿದರೆ ದೇಶದ್ರೋಹದಂತೆ ಪರಿಗಣನೆ. ಅಲ್ಪ ಸಂಖ್ಯಾತರು ಗಲಭೆ ಮಾಡಿದರೆ ಭಯೋತ್ಪಾದನೆಯಂತೆ ಪರಿಗಣಿಸಲಾಗುತ್ತದೆ ಎಂದು ವಿತಂಡವಾಗಿ ಬರೆದಿದ್ದಾರೆ.

ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೇ ತಪ್ಪಿಲ್ಲ: ಸಾಹಿತಿ ಕುಂ.ವೀರಭದ್ರಪ್ಪ

ಪಠ್ಯದಲ್ಲಿ ರಾಷ್ಟ್ರ ಸಂವಿಧಾನ ವಿರೋಧಿ ಅಂಶ ಪ್ರಕಟವಾಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿವಿ ಕುಲಪತಿ ಜಯಶ್ರೀ, 'ಬೋರ್ಡ್​ ಆಫ್​ ಸ್ಟಡೀಸ್ ನಲ್ಲಿ ಚರ್ಚೆ ಮಾಡುತ್ತೇವೆ. ವಿಶೇಷ ತಜ್ಞರ ತಂಡವನ್ನ ರಚನೆ ಮಾಡಲಾಗಿದೆ. ತಜ್ಞರ ವರದಿಯ ಬಳಿಕ ತಿರ್ಮಾನ ಕೈಗೊಳ್ಳುತ್ತೇವೆ. ಬಿಒಎಸ್ ನಲ್ಲಿ ಕನ್ನಡ ಚೇರ್‌ ಪರ್ಸನ್‌ ಇರುತ್ತಾರೆ. ಬಿಒಎಸ್​ನಲ್ಲಿ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.