ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಕಮೀಷನ್‌ ಕಟ್‌ ಆಗುತ್ತಿದೆ ಎಂದಿರುವ ರೇಷನ್‌ ಅಂಗಡಿ ವಿತರಕರು ಜು.5ರವರೆಗೆ ಪಡಿತರ ವಿತರಣೆ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ. 

ಬೆಂಗಳೂರು (ಜು.1): ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯಕ್ಕೆ‌ ಮತ್ತೊಂದು ಕಂಟಕ ಎದುರಾಗಿದೆ. ಜುಲೈ 5 ರವರೆಗೆ ಪಡಿತರ ವಿತರಣೆ ಮಾಡದಿರಲು ವಿತರಕರ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಂದಿನಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. ಆದರೆ, ರಾಜ್ಯ ನ್ಯಾಯ ಬೆಲೆ ಅಂಗಡಿ ವಿತರಕರಿಂದ ಪ್ರತಿಭಟನೆಗೆ ಯೋಜನೆ ರೂಪಿಸಿದ್ದಾರೆ. ಅಕ್ಕಿ ಬದಲು ಖಾತೆಗೆ ಹಣ ಹಾಕಿದ್ರೇ‌ ನಮಗೆ ನಷ್ಟವಾಗಲಿದೆ ಎಂದು ವಿತರಕರು ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಜುಲೈ ನಾಲ್ಕರಂದು ರಾಜ್ಯದ ಪಡಿತರ ವಿತರಕರ ಸಭೆ ನಡೆಯಲಿದೆ. ಸಭೆಯ ಬಳಿಕ ಪ್ರತಿಭಟನೆಗೆ ನಿರ್ಧಾರ ವಾಗುವ ಸಾಧ್ಯತೆ ಇದೆ. 5 ಕೆಜಿ ಅಕ್ಕಿ ಬದಲು ಹಣ ನೀಡಿದರೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಕಮಿಷನ್ ಕಟ್ ಆಗುತ್ತದೆ. ಪ್ರಸ್ತುತ ಒಂದು ಕ್ವಿಂಟಾಲ್‌ಗೆ 124 ರೂ ಕಮಿಷನ್ ಸಿಗುತ್ತದೆ. ಈಗ ಅದರ ಅರ್ಧ ಕಮಿಷನ್ ಕಟ್ ಆಗಲಿದೆ. ಜೊತೆಗೆ ಈಗ ಒಬ್ಬರಿಗೆ 6 ಕೆಜಿ ಅಕ್ಕಿ ನೀಡಲಾಗುತ್ತಿದೆ. ಈಗ 5 ಕೆಜಿ ನೀಡಿದ್ರೇ ಇಲ್ಲೂ ಒಂದು‌ ಕೆಜಿಯ ಕಮಿಷನ್ ಕಟ್ ಆಗಲಿದೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಮಾಡೋ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಭೆಯ ಬಳಿಕ ಪಡಿತರ ವಿತರಕರಿಂದ ಮುಂದಿನ ನಿರ್ಧಾರ ಪ್ರಕಟವಾಗಲಿದೆ.

ಸರ್ಕಾರ ಈ ಹಿಂದೆ ಹೇಳಿದ್ದ ರೀತಿ‌ ನಡೆದುಕೊಳ್ಳಿ. ಅಕ್ಕಿ ನೀಡಲು ಸಮಸ್ಯೆ ಆಗುತ್ತಿದ್ದರೆ ಇತರೆ ಆಹಾರ ಪದಾರ್ಥಗಳನ್ನ ನೀಡಿ. ಈ‌ ಹಿಂದೆ ಇತರ ರಾಜ್ಯಗಳಲ್ಲಿ ಹಣ ನೀಡಿ ಫೇಲ್ ಆಗಿದೆ. ಸಿದ್ದರಾಮಯ್ಯ ಅವರಿಗೆ ಅನ್ನರಾಮಯ್ಯ ಅಂತಲೇ ಕರೆಯುತ್ತಾರೆ. ಬೆಲ್ಲ, ಸಕ್ಕರೆ ಬೆಲ್ಲ, ಉಪ್ಪು ನೀಡಬಹುದು, ಇದರಿಂದ ಸರ್ಕಾರಕ್ಕೆ ಹಣದ ಉಳಿತಾಯ ಆಗಲಿದೆ. ನಾಲ್ಕು ಕೋಟಿ ಜನರ ಜೊತೆ ಪಡಿತರ ವಿತರಕರು ಸಂಪರ್ಕದಲ್ಲಿದ್ದೇವೆ. ನಾನಾ ಕಾರಣದಿಂದ ಪಡಿತರ ಪ್ರತಿ ತಿಂಗಳು ಆಹಾರ ಉಳಿಯುತ್ತಿದೆ. ಹಣ ಕೊಡಬೇಕು ಅಂದ್ರೇ ಅವ್ರಿಗೂ ಹಣ ಕೊಡಬೇಕಾಗುತ್ತದೆ. ಪಕ್ಕದ ರಾಜ್ಯದಲ್ಲಿ ಸರ್ಕಾರವೇ ಮನೆ ಮನೆಗೆ ರೇಷನ್ ವಿತರಣೆ ಮಾಡುತ್ತಿದ್ದಾರೆ. ಜೊತೆಗೆ ವಿತರಿಕರಿಗೆ ಕಮಿಷನ್ ನೀಡುತ್ತಿದ್ದಾರೆ. ನೀವು ಹಾಗೇ ಮಾಡಿ, ನಾವು ಕಮಿಷನ್ ನಂಬಿಕೊಂಡೇ ಬದುಕಿದ್ದೇವೆ. ಜುಲೈ ನಾಲ್ಕರ ವರೆಗೆ ಪಡಿತರ ವಿತರಣೆ ಇರೋದಿಲ್ಲ ಎಂದು ತಿಳಿಸಿದ್ದಾರೆ. ನಾವೂ ಕೇಂದ್ರ ಸರ್ಕಾರದ ವಿರುದ್ಧವೂ ಇದೇ 26 ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿತ್ತೇವೆ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಹೇಳಿದ್ದಾರೆ.

ಒಂದು ಕ್ವೀಂಟಲ್ ಗೆ 124 ರೂ ಕಮಿಷನ್ ಸಿಗುತ್ತೆ. ಈಗ ಅದರ ಅರ್ಧ ಕಮಿಷನ್ ಕಟ್ ಆಗುವ ಸ್ಥಿತಿ ಎದುರಾಗಿದೆ. ಈ ಹಿಂದೆ ಪ್ರತಿ ತಿಂಗಳು 15 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉಳಿಯುತ್ತಿದೆ. ಸದ್ಯ ಕೇಂದ್ರದಿಂದ 2 ಲಕ್ಷದ 17 ಸಾವಿರ ಮೆಟ್ರಿಕ್ ಟನ್ ಅಕ್ಕಿ, ರಾಗಿ ಬರ್ತಿದೆ. ಈಗ 5 ಕೆಜಿ ನೀಡಿದ್ರೇ ಇಲ್ಲೂ ಒಂದು‌ ಕೆಜಿಯ ಕಮಿಷನ್ ಕಟ್ ಆಗಲಿದೆ ಎಂದಿದ್ದಾರೆ.