* ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ ಅಕ್ರಮ ಆಸ್ತಿ ಶೋಧ ನಡೆಸುತ್ತಿದ್ದ ಎಸಿಬಿ* ಈ ವೇಳೆ ಬೆಸ್ಕಾಂ ಎಂಜಿನಿಯರ್ ಭ್ರಷ್ಟಾಚಾರ ಬೆಳಕಿಗೆ* ಎಸಿಬಿಯಿಂದ ಕುಮಾರ್ ನಾಯಕ್ ಫ್ಲ್ಯಾಟ್ ಶೋಧ
ಬೆಂಗಳೂರು(ಮಾ.18): ರಾಜ್ಯ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ರಸ್ತೆ ಸುರಕ್ಷತೆ) ಅಕ್ರಮ ಆಸ್ತಿ ಶೋಧದ ವೇಳೆ ಎಸಿಬಿ(ACB Raid) ಬಲೆಗೆ ಮತ್ತೊಬ್ಬ ಲಂಚಬಾಕ ಸರ್ಕಾರಿ ಅಧಿಕಾರಿ(Government Official) ಬಲೆಗೆ ಬಿದ್ದಿರುವ ಕುತೂಹಲಕಾರಿ ಸಂಗತಿ ನಡೆದಿದೆ.
ಎಸಿಬಿ ಗಾಳಕ್ಕೆ ನೆಲಮಂಗಲ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನಾಯಕ್ ಸಿಕ್ಕಿದ್ದು, ನಾಯಕ್ ಮನೆ ಮೇಲೆ ದಾಳಿ ನಡೆಸಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಅಕ್ರಮ(Illegal) ಸಂಪತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದೆ.
Fraud Case: ಎಸಿಬಿ ತನಿಖೆಯಿಂದ ತಪ್ಪಿಸೋದಾಗಿ ಲಕ್ಷಾಂತರ ರೂ. ಟೋಪಿ..!
ಅಕ್ರಮ ಆಸ್ತಿ(Illegal Property) ಆರೋಪದ ಮೇರೆಗೆ ರಾಜ್ಯ ಸಾರಿಗೆ ಇಲಾಖೆಯ(State Department of Transportation) ಹೆಚ್ಚುವರಿ ಆಯುಕ್ತ (ರಸ್ತೆ ಸುರಕ್ಷತೆ) ಜ್ಞಾನೇಂದ್ರ ಕುಮಾರ್ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಮಾನ್ಯತಾ ಟೆಕ್ ಪಾರ್ಕ್ ಸಮೀಪ ಜ್ಞಾನೇಂದ್ರ ಕುಮಾರ್ ಅವರ ಸ್ನೇಹಿತ ಮುನಾವರ್ ಪಾಷ ಫ್ಲ್ಯಾಟ್‌ನಲ್ಲಿ ಕೂಡಾ ಎಸಿಬಿ ಶೋಧಿಸಿತ್ತು. ಆ ವೇಳೆ ಪಾಷ ಫ್ಲ್ಯಾಟ್‌ನಲ್ಲಿ ನೆಲಮಂಗಲದ ಬೆಸ್ಕಾಂ ಎಇ ಕುಮಾರ್ ನಾಯಕ್ ಅವರಿಗೆ ಸಂಬಂಧಪಟ್ಟ ಕೆಲ ದಾಖಲೆಗಳು ಪತ್ತೆಯಾದವು. ಈ ದಾಖಲೆಗಳನ್ನು ಪರಿಶೀಲಿಸಿದಾಗ ಕುಮಾರ್ ನಾಯಕ್ ಅಕ್ರಮ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿತು. ಈ ಮಾಹಿತಿ ಮೇರೆಗೆ ಕುಮಾರ್ ನಾಯಕ್ ಮೇಲೆ ಕಾರ್ಯಾಚರಣೆ ಶೋಧಿಸಲಾಯಿತು ಎಂದು ಎಸಿಬಿ ಹೇಳಿದೆ.
ನಾಯಕ್ ಅವರ ಬಳಿ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ 1 ಫ್ಲ್ಯಾಟ್, ಬೆಂಗಳೂರು(Bengaluru) ನಗರ ಜಾಲ ಹೋಬಳಿಯಲ್ಲಿ 20 ಗುಂಟೆ ಜಮೀನು, 1 ಕಾರು, 413 ಗ್ರಾಂ ಚಿನ್ನ, 5.5 ಗ್ರಾಂ ವಜ್ರ, 4.461 ಕೆಜಿ ಬೆಳ್ಳಿ, .2.08 ಲಕ್ಷ ನಗದು, ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 8 ಲಕ್ಷ ನಗದು ಹಾಗೂ 16.30 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
18 ಭ್ರಷ್ಟರ ಬಳಿ ಇನ್ನೂ ಬೆಟ್ಟದಷ್ಟು ಆಸ್ತಿ
ರಾಜ್ಯದೆಲ್ಲೆಡೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ದಾಳಿಗೊಳಗಾಗಿದ್ದ 18 ‘ಲಂಚಬಾಕ’ ಸರ್ಕಾರಿ ಅಧಿಕಾರಿಗಳು, ತಮ್ಮ ಆದಾಯಕ್ಕಿಂತ ನೂರಾರು ಪಟ್ಟು ಆಕ್ರಮ ಸಂಪತ್ತು ಸಂಪಾದಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ
ಈ ಸರ್ಕಾರಿ ಅಧಿಕಾರಿಗಳ ಪೈಕಿ ವಿಜಯಪುರ ಜಿಲ್ಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ಸಾ ನಾಗೇಂದ್ರ (ಶೇ.929) ಅವರು ಅತಿ ಹೆಚ್ಚು ಆಕ್ರಮ ಆಸ್ತಿ ಹೊಂದಿದ್ದರೆ, ಮಂಗಳೂರಿನ ಕೆಪಿಟಿಎಸ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾಳು ಸುಂದರ್ ರಾಜ್ (ಶೇ.55.10) ಕಡಿಮೆ ಅಕ್ರಮ ಸಂಪತ್ತು ಗಳಿಸಿದ್ದಾರೆ. ಇವರೆಲ್ಲರ ಆಸ್ತಿಗಳ ಹಾಗೂ ಚಿನ್ನಾಭರಣ ಮೌಲ್ಯಮಾಪನ, ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಹೀಗಾಗಿ ಆಕ್ರಮ ಆಸ್ತಿ ಮೌಲ್ಯವು ಹೆಚ್ಚಾಗಬಹುದು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಎಂಜಿನಿಯರ್ ಮನೆ ಕಸದ ಬುಟ್ಟಿಯಲ್ಲೂ ಚಿನ್ನ!
ರಾಯಚೂರು: ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್(ಕೆಬಿಜೆಎನ್‌ಎಲ್) ಉಪವಿಭಾಗ-13ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕರೆಡ್ಡಿ ಪಾಟೀಲ್ ಮನೆ ಮೇಲೆ ಎಸಿಬಿ ತಂಡವು ದಾಳಿ ನಡೆಸಿದ ವೇಳೆ, ಕಸದ ಬುಟ್ಟಿಯಲ್ಲೂ ಚಿನ್ನಾಭರಣ ಪತ್ತೆಯಾಗಿದೆ. ದಾಳಿ ವೇಳೆ ಅಧಿಕಾರಿಗಳ ಕೈಗೆ ಸಿಗದಿರಲಿ ಎಂದು ಅಶೋಕರೆಡ್ಡಿ ಚಿನ್ನಾಭರಣಗಳನ್ನು ಕಸದ ಬುಟ್ಟಿಗೆ ಎಸೆದಿದ್ದ ಎನ್ನಲಾಗಿದೆ. ರಾಯಚೂರಿನ ಬಸವೇಶ್ವರ ನಗರದಲ್ಲಿರುವ ರೆಡ್ಡಿ ನಿವಾಸ, ಅವರ ಕಚೇರಿ, ಹುಟ್ಟೂರು ಯಾದಗಿರಿಯ ಜಿಲ್ಲೆಯ ಕುದ್ರಾಪುರದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ 7 ಲಕ್ಷ ರು. ನಗದು, 400 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಜತೆಗೆ ಬೇನಾಮಿ ಆಸ್ತಿ ಸಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
