ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಕೇಸ್: ರಾಜ್ಯ ಆರೋಗ್ಯ ಇಲಾಖೆ ವರದಿಯಂತೆ 11ಕ್ಕೆ ಏರಿಕೆ
ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಮೀಡಿಯಾ ಬುಲೆಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಮತ್ತೊಂದು ಹೊಸ ಪ್ರಕರಣ ಬೆಳಕಿಗೆ ಬಂದಿರುವ ಬಗ್ಗೆ ಸ್ಪಷ್ಟಪಡಿಸಿದೆ. ಈ ಮೂಲಕ ರಾಜ್ಯದಲ್ಲಿ 11 ಕೊರೋನಾ ಕೇಸ್ಗಳು ಬೆಳಕಿಗೆ ಬಂದಂತಾಗಿದೆ.
ಬೆಂಗಳೂರು, [ಮಾ.17]: ರಾಜ್ಯದಲ್ಲಿ ಮತ್ತೊಂದು ಕೊವಿಡ್-19 ಪತ್ತೆಯಾಗಿದ್ದು, ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ದುಬೈಯಿಂದ ಗೋವಾ ಮೂಲಕ ಮಾರ್ಚ್ 9 ರಂದು ಬೆಂಗಳೂರಿಗೆ ಬಂದಿದ್ದ ಮಹಿಳೆಗೆ ಕೊರೋನಾ ವೈರಸ್ ಸೋಂಕು ಹರಡಿದೆ. ಇಂದು [ಮಂಗಳವಾರ] ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಮೀಡಿಯಾ ಬುಲೆಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಮತ್ತೊಂದು ಹೊಸ ಪ್ರಕರಣ ಬೆಳಕಿಗೆ ಬಂದಿರುವ ಬಗ್ಗೆ ಸ್ಪಷ್ಟಪಡಿಸಿದೆ. ಈ ಮೂಲಕ ರಾಜ್ಯದಲ್ಲಿ 11 ಕೊರೊನಾ ಕೇಸ್ಗಳು ಬೆಳಕಿಗೆ ಬಂದಂತಾಗಿದೆ.
ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್
ರಾಜ್ಯ ಸರ್ಕಾರ ಮಾಹಿತಿ ಪ್ರಕಾರ 67 ವರ್ಷದ ವೃದ್ಧೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಇವರು ಮಾರ್ಚ್ 9 ರಂದು ದುಬೈನಿಂದ ಗೋವಾಗಿ ಬಂದು ಬೆಂಗಳೂರಿಗೆ ಆಗಮಿಸಿದ್ದರು.
ಕೊರೊನಾ ಸೋಂಕು ಪತ್ತೆ ಆಗುವ ಮೊದಲು ಅವರನ್ನ ಮನೆಯಲ್ಲಿಯೇ ಇರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಅವರನ್ನ ನಗರದಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು 5 ಮಂದಿ ಕುಟುಂಬಸ್ಥರು ಸೇರಿದಂತೆ ಒಟ್ಟು 21 ಮಂದಿಯನ್ನ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.