ಬೆಂಗಳೂರು (ಜ.19):  ಕೆಎಎಸ್ ಅಧಿಕಾರಿ ಡಾ.‌ಸುಧಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ  ಸಂಬಂಧಿಸಿದಂತೆ  ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾಗಿದೆ. 

ಅಕ್ರಮ ಗಳಿಕೆಯೇ ಸುಧಾ ಸರ್ಕಾರಿ‌ ಹುದ್ದೆಗೆ ಕುತ್ತು ತಂದಿಡುವ ಸಾಧ್ಯತೆ ಇದೆ.  ಶೀಘ್ರದಲ್ಲೇ ಸುಧಾ ಸರ್ಕಾರಿ ಹುದ್ದೆಯಿಂದ ವಜಾ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಚರ್ಚೆ ನಡೆದಿದೆ.  ಸುಧಾ ವಜಾಮಾಡಲು ಎಸಿಬಿ ಅಧಿಕಾರಿಗಳು ಶಿಫಾರಸು ನೀಡಲಿದ್ದಾರೆ.  

ಬಿಡಿಎನಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಸುಧಾ. ನಂತರ ಜೈವಿಕ ಹಾಗೂ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿಯಾಗಿ ವರ್ಗವಾಣೆಯಾಗಿದ್ದರು.  ಕಳೆದ ನವೆಂಬರ್ 7ರಂದು ಸುಧಾ ಮತ್ತವರ ಆಪ್ತರ ಮನೆ ಮೇಲೆ ದಾಳಿ‌ ಎಸಿಬಿ ದಾಳಿ ನಡೆಸಿತ್ತು. 

 KAS ಭ್ರಷ್ಟ ಅಧಿಕಾರಿ ಸುಧಾಗೆ ಮತ್ತೊಂದು ಶಾಕ್‌..! ...

 ಸರ್ಕಾರಕ್ಕೆ 150 ರಿಂದ 200 ಕೋಟಿ ಆಸ್ತಿ ವಂಚನೆ ವಿಚಾರ ಕೇಳಿ ಬಂದಿತ್ತು.  ಏಜೆಂಟ್ ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಬಳಸಿ ಪರಿಹಾರಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಆರೋಪವೂ ಎದುರಾಗಿತ್ತು.  

ಈ ಮೂಲಕ ಬರೊಬ್ಬರಿ 40ರಿಂದ 50ಕೊಟಿ ರು. ಹಣ ವಂಚನೆ ಆರೋಪ ಸುಧಾ ಮೇಲೆ ಬಂದಿದ್ದು,  ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಜಮೀನು ಹೆಸರಿನಲ್ಲಿ ಪರಿಹಾರದ ರೂಪದಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು.  

ಇದೀಗ ಅವರ ವಿರುದ್ಧ ಮತ್ತೊಂದು ಕೇಸ್ ದಾಖಲು ಮಾಡಲಾಗುತ್ತಿದೆ.  ಸರ್ಕಾರದ ಪ್ರತಿಷ್ಠಿತ ಹುದ್ದೆಯ ದುರ್ಬಳಕೆ ಆರೋಪ ದಡಿ ಸರ್ಕಾರದ ಹುದ್ದೆಯ ದುರುಪಯೋಗ ಎಂದು ಪ್ರಕರಣ ದಾಖಲು ಮಾಡಲಾಗುತ್ತಿದೆ. 

ಸರ್ಕಾರದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆಯ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧಾರ ಮಾಡಲಾಗಿದೆ.  ಈ ಬಗ್ಗೆ ಅನುಮತಿಗೆ ನಗರಾಭಿವೃದ್ಧಿ ಇಲಾಖೆಗೆ ಎಸಿಬಿ ಪತ್ರ ಬರೆದಿದೆ.  ಜೊತೆಗೆ ಕೆಎಎಸ್ ಅಧಿಕಾರಿ ಡಾ.ಸುಧಾ ವಿರುದ್ಧ ಸರ್ಕಾರಕ್ಕೆ ಪತ್ರ ಎಸಿಬಿ ಪತ್ರ ಬರೆದಿದೆ. 

ಸುಧಾ ವಿರುದ್ಧದ ಆರೋಪಕ್ಕೆ ದಾಖಲೆ ಲಭ್ಯವಾದ ಹಿನ್ನಲೆ ವಜಾ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಎಸಿಬಿಯಿಂದ ಪತ್ರ ಬರೆಯಲಿದ್ದು, ಇದೀಗ  ಸರ್ಕಾರಿ ಹುದ್ದೆ ಉಳಿಸುವುದು ಬಿಡುವುದು ರಾಜ್ಯ ಸರ್ಕಾರದ ಕೈಯಲ್ಲಿದೆ. ಒಂದು ವೇಳೆ ಸರ್ಕಾರದ ಅನುಮತಿ ದೊರೆತಲ್ಲಿ ಸುಧಾ ಉದ್ಯೋಗ ಕಳೆದುಕೊಳ್ಳಲಿದ್ದಾರೆ.